newsfirstkannada.com

ಮೋದಿ ಸರ್ಕಾರದಿಂದ ಗುಡ್​ನ್ಯೂಸ್​​.. 300 ಯೂನಿಟ್​ ಕರೆಂಟ್​ ಫ್ರೀ; ನಿಮಗೂ ಸಿಗುತ್ತಾ?

Share :

Published February 13, 2024 at 3:46pm

Update February 13, 2024 at 4:33pm

    75 ಸಾವಿರ ಕೋಟಿ ರೂ. ಹೂಡಿಕೆಯೊಂದಿಗೆ ಯೋಜನೆಗೆ ಚಾಲನೆ

    ದೇಶದ ಒಂದು ಕೋಟಿ ಮನೆಗಳಿಗೆ ವಿದ್ಯುತ್ ನೀಡುವ ಯೋಜನೆ

    ಯೋಜನೆಯಲ್ಲಿ ಸಾಲ ತೆಗೆದುಕೊಳ್ಳಲು ಯಾವುದೇ ಒತ್ತಡ ಇರಲ್ಲ

ನವದೆಹಲಿ: ದೇಶದ 1 ಕೋಟಿ ಮನೆಗಳಿಗೆ ಉಚಿತ ವಿದ್ಯುತ್​ ನೀಡುವ ಪಿಎಂ ಸೂರ್ಯಘರ್ ಮುಫ್ತ್‌ ಬಿಜಲಿ ಯೋಜನೆಗೆ 75 ಸಾವಿರ ಕೋಟಿ ರೂ.ಗಳ ಹೂಡಿಕೆಯೊಂದಿಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ. ಈ ಬಗ್ಗೆ ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಶೇರ್ ಮಾಡಿರುವ ಪ್ರಧಾನಿ ಮೋದಿ, ಪ್ರತಿ ತಿಂಗಳು 300 ಯೂನಿಟ್​ವರೆಗೆ ಉಚಿತ ವಿದ್ಯುತ್ ನೀಡಲಾಗುವುದು ಎಂದು ತಿಳಿಸಿದ್ದಾರೆ.

1 ಕೋಟಿ ಮನೆಗಳಿಗೆ ಪ್ರತಿ ತಿಂಗಳು 300 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು. ಜೊತೆಗೆ ಜನರ ಬ್ಯಾಂಕ್ ಖಾತೆಗೆ ನೇರವಾಗಿ ಸಬ್ಸಿಡಿ ನೀಡುವುದರ ಜೊತೆಗೆ ರಿಯಾಯಿತಿ ದರದಲ್ಲಿ ಬ್ಯಾಂಕ್ ಸಾಲ ಸೌಲಭ್ಯ ನೀಡಲಾಗುತ್ತದೆ. ಯಾವುದೇ ಹೊರೆಯಾಗದಂತೆ ಕೇಂದ್ರ ನೋಡಿಕೊಳ್ಳುತ್ತದೆ. ಸ್ಥಳೀಯ ಸಂಸ್ಥೆಗಳು ಮನೆ ರೂಫ್ ಟಾಪ್ ಸೋಲಾರ್‌ ಜನಪ್ರಿಯಗೊಳಿಸಲು ಸೂಚಿಸಲಾಗಿದೆ. ಯೋಜನೆಯಿಂದ ಜನರಿಗೆ ಹೆಚ್ಚಿನ ಆದಾಯ, ಕಡಿಮೆ ವಿದ್ಯುತ್ ಬಿಲ್, ಉದ್ಯೋಗ ಸೃಷ್ಟಿ ಆಗಲಿದೆ. ಇದಕ್ಕೆ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಎಕ್ಸ್​ ಖಾತೆ ಮೂಲಕ ಪ್ರಧಾನಿ ಮೋದಿ ಕರೆ ನೀಡಿದ್ದಾರೆ.

ಪಿಎಂ ಸೂರ್ಯಘರ್ ಮುಫ್ತ್ ಬಿಜಲಿ ಯೋಜನೆ ಏನದು?

ಈ ಯೋಜನೆಯಡಿಯಲ್ಲಿ, ಜನರು ತಮ್ಮ ಮನೆಗಳ ಮೇಲ್ಛಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಸಲು ಸರ್ಕಾರದಿಂದ ಹೆಚ್ಚಿನ ಸಹಾಯಧನ ನೀಡಲಾಗುತ್ತದೆ. ಜನರು ಈಗ ತಮ್ಮ ಮೇಲ್ಛಾವಣಿಯ ಮೇಲೆ 1 ರೂಪಾಯಿ ಖರ್ಚು ಮಾಡದೇ ವಿದ್ಯುತ್ ಉತ್ಪಾದಿಸಲು ಸಾಧ್ಯವಾಗುತ್ತದೆ. ಕೇಂದ್ರ ಸರ್ಕಾರದ ಮಾಹಿತಿ ಪ್ರಕಾರ, ಮೇಲ್ಛಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಸಲು ಶೇ.40 ರಷ್ಟು ಸಬ್ಸಿಡಿಯನ್ನು ಪಡೆಯುತ್ತಾರೆ. ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆಯಡಿಯಲ್ಲಿ ಶೇಕಡಾ 60 ರಷ್ಟು ಸಬ್ಸಿಡಿ ಪಡೆಯುತ್ತಾರೆ. ಉಳಿದ 40 ರಷ್ಟು ಪ್ರತಿಶತ ಹಣ ಸಾಲವಾಗಿ ತೆಗೆದುಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ.

ಯಾರಿಗೆ ಲಾಭ..?

ಆರ್ಥಿಕವಾಗಿ ದುರ್ಬಲರಾಗಿರೋರು ಈ ಯೋಜನೆಯ ಗರಿಷ್ಠ ಪ್ರಯೋಜನ ಪಡೆಯಬಹುದು. ಈ ಯೋಜನೆಯಡಿ 1 ಕೋಟಿ ಮನೆಗಳ ಮೇಲ್ಛಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಸುವ ಗುರಿ ಸರ್ಕಾರ ಹೊಂದಿದೆ. ಸಬ್ಸಿಡಿ ಹೆಚ್ಚಿಸುವ ಮೂಲಕ, ಹೆಚ್ಚು ಹೆಚ್ಚು ಜನರು ಈ ಯೋಜನೆಯಡಿ ಮನೆಗಳಲ್ಲಿ ಸೌರ ಫಲಕಗಳನ್ನು ಅಳವಡಿಸಿಕೊಳ್ಳಬಹುದು. ಜೊತೆಗೆ ಮಾಸಿಕವಾಗಿ ವಿದ್ಯುತ್ ಬಳಕೆ 300 ಯೂನಿಟ್‌ಗಿಂತ ಕಡಿಮೆ ಇರೋರ ಮೇಲೆ ವಿಶೇಷ ಗಮನ ನೀಡಲಾಗುತ್ತದೆ.

ಇದನ್ನೂ ಓದಿ: 6 ತಿಂಗಳ ಆಹಾರ, ಡೀಸೆಲ್ ತಂದ ರೈತರು; ದೆಹಲಿ ಗಡಿಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ; ಸರ್ಕಾರಕ್ಕೆ ಸಂಕಷ್ಟ!

ಮೇಲ್ಛಾವಣಿ ವಿದ್ಯುತ್ ಮೂಲಕ ಸಾಲ ಮರುಪಾವತಿ

ಒಬ್ಬ ವ್ಯಕ್ತಿಯು ಸಾಲ ತೆಗೆದುಕೊಳ್ಳಲು ಬಯಸಿದರೂ, ಅವನ ಮೇಲೆ ಯಾವುದೇ ಒತ್ತಡ ಇರಲ್ಲ. ಈ ಯೋಜನೆ ಜಾರಿಗೊಳಿಸಲು ಸರ್ಕಾರ ವಿಶೇಷ ವಾಹನ ಪರಿಚಯಿಸುತ್ತಿದೆ. ಪ್ರತಿ ರಾಜ್ಯಕ್ಕೂ ಪ್ರತ್ಯೇಕ ಎಸ್‌ಪಿವಿಗಳನ್ನು ರಚಿಸುತ್ತದೆ. ಸರ್ಕಾರದಿಂದ ಪಡೆದ 60 ಪ್ರತಿಶತ ಸಹಾಯಧನ ಹೊರತುಪಡಿಸಿ, ಉಳಿದ 40 ಪ್ರತಿಶತ ಎಸ್‌ಪಿವಿಯಿಂದ ಸಾಲವಾಗಿ ತೆಗೆದುಕೊಳ್ಳಬಹುದು. ಫಲಾನುಭವಿಯ ಮೇಲ್ಛಾವಣಿಯಲ್ಲಿ ಅವರ ಅಗತ್ಯಕ್ಕಿಂತ ಹೆಚ್ಚಿನ ವಿದ್ಯುತ್ ಅನ್ನು ಎಸ್‌ಪಿವಿ ಖರೀದಿಸುತ್ತದೆ ಮತ್ತು ಅದರಿಂದ ಸಾಲ ಮರುಪಾವತಿ ಮಾಡಿಸಿಕೊಳ್ಳುತ್ತದೆ. ಈ ರೀತಿಯಾಗಿ ಸಾಲವನ್ನು 10 ವರ್ಷಗಳಲ್ಲಿ ಮರುಪಾವತಿ ಮಾಡುತ್ತದೆ. ಸಾಲ ಮರುಪಾವತಿ ನಂತರ ಸೋಲಾರ್ ಪ್ಯಾನಲ್ ಆಸ್ತಿ ಫಲಾನುಭವಿಯ ಹೆಸರಿಗೆ ವರ್ಗಾಯಿಸಲಾಗುತ್ತದೆ ಎಂದು ಕೇಂದ್ರ ಹೇಳಿದೆ.

ಈ ಯೋಜನೆಯ ಮೂಲಕ ಜನರು ವಾರ್ಷಿಕವಾಗಿ 15 ಸಾವಿರದಿಂದ 18 ಸಾವಿರ ರೂಪಾಯಿ ಉಳಿಸಬಹುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದರು. ದೇಶದಲ್ಲಿ ಸೌರಶಕ್ತಿಯಿಂದ 100 ಗಿಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಸರ್ಕಾರ ಹೊಂದಿದೆ. 2019-20ನೇ ಹಣಕಾಸು ವರ್ಷದಲ್ಲಿ ಸೌರಶಕ್ತಿಯಿಂದ ಸುಮಾರು 35 ಗಿಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಈ ಉತ್ಪಾದನೆಯು 73 ಗಿಗಾವ್ಯಾಟ್‌ಗಳನ್ನು ಮೀರುವ ನಿರೀಕ್ಷೆಯಿದೆ. ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ ಅಡಿಯಲ್ಲಿ 1 ಕೋಟಿ ಮನೆಗಳ ಮೇಲ್ಛಾವಣಿಯ ಮೇಲೆ ಮೇಲ್ಛಾವಣಿಯ ಸೌರ ಫಲಕಗಳನ್ನು ಅಳವಡಿಸುವುದರಿಂದ ಸರ್ಕಾರವು 100 GW ಗುರಿ ಸಾಧಿಸಲು ಸಹಾಯ ಮಾಡುತ್ತದೆ ಎಂದು ತಿಳಿದು ಬಂದಿದೆ.

ವಿಶೇಷ ವರದಿ- ಭೀಮಪ್ಪ, ನ್ಯೂಸ್​ ಫಸ್ಟ್​, ಡಿಜಿಟಲ್ ಡೆಸ್ಕ್​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೋದಿ ಸರ್ಕಾರದಿಂದ ಗುಡ್​ನ್ಯೂಸ್​​.. 300 ಯೂನಿಟ್​ ಕರೆಂಟ್​ ಫ್ರೀ; ನಿಮಗೂ ಸಿಗುತ್ತಾ?

https://newsfirstlive.com/wp-content/uploads/2024/02/MODI_SURYA.jpg

Load More