newsfirstkannada.com

ರಾಮೇಶ್ವರಂ ಕೆಫೆ ಸ್ಫೋಟ, ನೇಹಾ ಹಿರೇಮಠ ಕೊಲೆ ಕೇಸ್‌; ಸಿದ್ದು ಸರ್ಕಾರದ ವಿರುದ್ಧ ಮೋದಿ ಕೆಂಡಾಮಂಡಲ; ಏನಂದ್ರು?

Share :

Published April 28, 2024 at 3:06pm

    ಭಾಷಣದೂದ್ದಕ್ಕೂ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ

    ಶಿರಸಿಯ ವಿಜಯ ಸಂಕಲ್ಪ ಸಮಾವೇಶದಲ್ಲಿ ಪಿಎಂ ಮೋದಿಗೆ ಸನ್ಮಾನ

    ನರೇಂದ್ರ ಮೋದಿ ಅವರ ಭಾವಚಿತ್ರ ಬಿಡಿಸಿ ಪ್ರಧಾನಿಗೆ ನೀಡಿದ ಅಭಿಮಾನಿ

ಉತ್ತರ ಕನ್ನಡ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಕ್ಷೇತ್ರಗಳಲ್ಲಿ ನಮೋ ಅಬ್ಬರಿಸುತ್ತಿದ್ದಾರೆ. ಇದೇ ವೇಳೆ ಉತ್ತರ ಕನ್ನಡದ ಶಿರಸಿಯಲ್ಲಿ ನಡೆಯುತ್ತಿರುವ ವಿಜಯ ಸಂಕಲ್ಪ ಸಮಾವೇಶದಲ್ಲಿ ಕೇಸರಿ ಶಾಲು ಹೊದಿಸಿ, ನವಿಲಿನ ಕಿರೀಟ, ಮಾರಿಕಾಂಬಾ ದೇವಿಯ ವಿಗ್ರಹ ನೀಡಿ ಪ್ರಧಾನಿ ಮೋದಿಯವರನ್ನು ಸನ್ಮಾನ ಮಾಡಲಾಯಿತು.

ಪ್ರಧಾನಿ ನರೇಂದ್ರ ಮೋದಿಯವರಿಗೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ ಪ್ರಹ್ಲಾದ ಜೋಷಿ ಹಾಗೂ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕ್​ ಸೇರಿ ಸನ್ಮಾನ ಮಾಡಿದರು. ಪ್ರಧಾನಿ ಮೋದಿ ನೋಡಲೆಂದೆ ಸಾಕಷ್ಟು ಜನರು ಸಮಾವೇಶಕ್ಕೆ ಆಗಮಿಸಿದ್ದರು. ಮೋದಿ ಅವರ ಭಾವಚಿತ್ರ ಬಿಡಿಸಿದ್ದ ಅಭಿಮಾನಿಯೊಬ್ಬರು ಪ್ರಧಾನಿಗೆ ನೀಡಿ ಖುಷಿ ಪಟ್ಟರು.

ಇದನ್ನೂ ಓದಿ: MS ಧೋನಿಗೆ ಅತ್ಯಂತ ಹಿರಿಯ ವಯಸ್ಸಿನ ಫ್ಯಾನ್​.. ಈ ಅಭಿಮಾನಿಯ ಆಸೆ ಏನು ಗೊತ್ತಾ?

ಸರ್ಕಾರದ ಕಾಮಗಾರಿಗಳೆಲ್ಲ ನಿಂತು ಹೋಗಿವೆ

ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿಯವರು, ಭಾಷಣದ ವೇಳೆ ಕಾಂಗ್ರೆಸ್​ ವಿರುದ್ಧ ಹರಿಹಾಯ್ದಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ರಾಜ್ಯದಲ್ಲಿ ಅಭಿವೃದ್ಧಿಯಾಗುತ್ತಿಲ್ಲ. ಕರ್ನಾಟಕದಲ್ಲೂ ಕಾಂಗ್ರೆಸ್ ಬಂದ ಮೇಲೆ ರಸ್ತೆ, ನೀರಿನ ಕಾಮಗಾರಿ ಸೇರಿದಂತೆ ಸರ್ಕಾರದ ಕಾಮಗಾರಿಗಳೆಲ್ಲ ನಿಂತು ಹೋಗಿವೆ. ಇದರಿಂದ ಯಾವುದೇ ಕೆಲಸವಾಗದೇ ಜನರು ಬೇಸತ್ತು ಹೋಗಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಅಭಿವೃದ್ಧಿ ಇರುವುದಿಲ್ಲ ಎಂಬುದನ್ನು ಮತದಾರರು ಅರಿತುಕೊಂಡಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ಇದನ್ನೂ ಓದಿ: T20 ವಿಶ್ವಕಪ್​​; ಸೆಲೆಕ್ಟರ್ಸ್​ ಟೆನ್ಷನ್ ಹೆಚ್ಚಿಸಿದ ಟೀಮ್​ ಇಂಡಿಯಾದ ಆಯ್ಕೆ!

ಭಾಷಣದಲ್ಲಿ ಬೆಳಗಾವಿ ವಂಟಮೂರಿಯಲ್ಲಿ ಆದಿವಾಸಿ ಮಹಿಳೆ ಮೇಲೆ ದೌರ್ಜನ್ಯ, ಚಿಕ್ಕೋಡಿ ಜೈನ್ ಮುನಿ ಹತ್ಯೆ, ಹುಬ್ಬಳ್ಳಿ ನೇಹಾ ಹತ್ಯೆ ನಡೆದಿದೆ. ಬೆಂಗಳೂರಿನಲ್ಲಿ ರಾಮೇಶ್ವರಂ ಬಾಂಬ್ ಸ್ಫೋಟ ಘಟನೆಯನ್ನು ಪ್ರಸ್ತಾಪಿಸಿದರು. ಕಾಂಗ್ರೆಸ್ ತುಷ್ಟೀಕರಣ ರಾಜಕಾರಣಕ್ಕಾಗಿ ಪ್ರಕರಣದ ದಿಕ್ಕು ತಪ್ಪಿಸುವಂತಹ ಹೇಳಿಕೆ ನೀಡುತ್ತಿದೆ. ನಿಮ್ಮಿಂದ ಆಗದಿದ್ರೆ ಬಿಟ್ಟು ಮನೆಗೆ ನಡೆಯಿರಿ. ಕಾಂಗ್ರೆಸ್​ ಇದ್ದಲ್ಲಿ ಇದೆಲ್ಲ ನಡೆಯುವುದು ಸಾಮಾನ್ಯ ಎಂದರು. ಭಯೋತ್ಪಾದನೆಗೆ ಪ್ರೋತ್ಸಾಹಿಸುವ, ದೇಶ ವಿರೋಧಿ ಸಂಘಟನೆಯಾದ ಪಿಎಫ್​​ಐ ಸಂಘಟನೆಯನ್ನ ನಾವು ನಿರ್ಬಂಧ ಮಾಡಿದೇವು. ನಮ್ಮೆಲ್ಲರ ಸ್ವಾತಂತ್ರ್ಯ ಹೋರಾಟವನ್ನ ಕಾಂಗ್ರೆಸ್​ನವರು ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಧಾರಾಕಾರ ಮಳೆ, ಭಯಾನಕ ಸುಂಟರಗಾಳಿಗೆ 5 ಜನ ಸಾವು.. 33ಕ್ಕೂ ಹೆಚ್ಚು ಮಂದಿ ಗಂಭೀರ

ಕಳೆದ 10 ವರ್ಷಗಳಿಂದ ಭಾರತ ಬಲಿಷ್ಠವಾಗುತ್ತಿದೆ

ಛತ್ರಪತಿ ಶಿವಾಜಿಯವರನ್ನು ನಾವೆಲ್ಲರೂ ಇಷ್ಟಪಟ್ಟು ಹೊಗುಳುತ್ತೇವೆ. ಅವರನ್ನು ಅಭಿಮಾನದಿಂದ ಕಾಣುತ್ತೇವೆ. ಬಸವಣ್ಣನವರ ವಚನಗಳನ್ನ ಅನುಸರಿಸಿ ಅವರ ಹಾದಿಯಲ್ಲಿ ನಡೆಯುತ್ತೇವೆ. ಶಿವಾಜಿ ಮಹಾರಾಜರು ಬಲಿಷ್ಠ ಭಾರತವನ್ನು ಕಟ್ಟಲು ಬಯಸಿದ್ದರು. ಹೀಗಾಗಿಯೇ ಅವರು ವಿಶ್ವಕ್ಕೇ ಪ್ರಜಾಪ್ರಭುತ್ವದ ಮಾದರಿ ನೀಡಿದ್ದರು. ಕಳೆದ 10 ವರ್ಷಗಳಿಂದ ಭಾರತ ಬಲಿಷ್ಠವಾಗುತ್ತಿದೆ. ಇದಕ್ಕೆ ನಾವೆಲ್ಲರು ಖುಷಿ ಪಟ್ಟು ಇನ್ನಷ್ಟು ವೇಗವಾಗಿ ಕೆಲಸ ಮಾಡಬೇಕು. ಆದರೆ ಇದನ್ನು ಕಾಂಗ್ರೆಸ್​ಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಮೋದಿ ಹೇಳಿದ್ದಾರೆ.

ಭಾರತದ ಸಂಸ್ಕೃತಿ ಒಡೆದು, ಇತಿಹಾಸವನ್ನು ಕಾಂಗ್ರೆಸ್ ಬದಲಾಯಿಸಿತ್ತು. ಶಿವಾಜಿ ಮಹಾರಾಜರಿಗೆ ಕಾಂಗ್ರೆಸ್‌ನವರು ಬಯ್ಯುತ್ತಾರೆ. ನವಾಬ್, ಸುಲ್ತಾನರಿಗೆ ಕಾಂಗ್ರೆಸ್‌ನವರು ಯಾವಾಗ್ಲಾದ್ರೂ ಬೈದಿದ್ದಾರಾ ಹೇಳಿ. ಇದ್ಕೆಲ್ಲ ಕಾರಣ ಓಟ್ ಬ್ಯಾಂಕ್. ಷಹಜಹಾನ್ ಅತ್ಯಾಚಾರಿಯಂತೆ ಕಾಣ್ತಾನೆ. ಆದರೆ ಆತನಿಗೆ ಕ್ಲೀನ್ ಚಿಟ್ ನೀಡಲಾಗಿದೆ. ನಮ್ಮ ರಾಜ, ಮಹಾರಾಜರನ್ನು ಅತ್ಯಾಚಾರಿಗಳಂತೆ ಬಿಂಬಿಸಲಾಗ್ತಿದೆ ಎಂದು ಹೇಳಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
newsfirstkannada, newsfirstlive, news1stkannada, news1stlive, news1st, newsfirst,

ರಾಮೇಶ್ವರಂ ಕೆಫೆ ಸ್ಫೋಟ, ನೇಹಾ ಹಿರೇಮಠ ಕೊಲೆ ಕೇಸ್‌; ಸಿದ್ದು ಸರ್ಕಾರದ ವಿರುದ್ಧ ಮೋದಿ ಕೆಂಡಾಮಂಡಲ; ಏನಂದ್ರು?

https://newsfirstlive.com/wp-content/uploads/2024/04/MODI_BGM_NEW.jpg

Load More