newsfirstkannada.com

ಧಾರಾಕಾರ ಮಳೆ, ಭಯಾನಕ ಸುಂಟರಗಾಳಿಗೆ 5 ಜನ ಸಾವು.. 33ಕ್ಕೂ ಹೆಚ್ಚು ಮಂದಿ ಗಂಭೀರ

Share :

Published April 28, 2024 at 11:51am

  ಸುಂಟರಗಾಳಿಗೆ ಮನೆ ಮೇಲ್ಛಾವಣಿ ಸೇರಿ ವಸ್ತುಗಳು ಹಾರಿ ಹೋಗ್ತಿವೆ

  ಸದ್ಯ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ

  ದಾಖಲೆ ಮಳೆಯಿಂದ ನೀರಿನ ಪ್ರಮಾಣ ಹೆಚ್ಚುತ್ತಿದ್ದು ಜನರಲ್ಲಿ ಆತಂಕ

ಚೀನಾದ ದಕ್ಷಿಣ ಭಾಗದ ಗುವಾಂಗ್‌ಝೌನಲ್ಲಿ ಭೀಕರ ಮಳೆ ಜೊತೆಗೆ ಸುಂಟರಗಾಳಿ ಬೀಸಿದ್ದರಿಂದ 5 ಜನರು ಸಾವನ್ನಪ್ಪಿದ್ದು 33ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಲ್ಲಿನ ಸರ್ಕಾರ ಹೇಳಿದೆ ಎನ್ನಲಾಗಿದೆ.

ಗುವಾಂಗ್‌ಝೌ ನಗರದಲ್ಲಿ ತೀವ್ರತರವಾದ ಸುಂಟರಗಾಳಿಗೆ 5 ಜನ ಸಾವನ್ನಪ್ಪಿದ್ದು 33ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಧಾರಾಕಾರ ಮಳೆ ಹಾಗೂ ಭಯಾನಕವಾದ ಗಾಳಿಯಿಂದ ನಗರ ಸೇರಿದಂತೆ ಇತರೆ ಪ್ರದೇಶಗಳಲ್ಲಿ ಭಾರೀ ಹಾನಿಯಾಗಿದೆ. ವಸ್ತುಗಳು ಗಾಳಿಯಲ್ಲಿ ತೂರಿಕೊಂಡು ಹೋಗುತ್ತಿವೆ. ಸೆಕೆಂಡಿಗೆ ಗರಿಷ್ಠ 20.6 ಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ.

ಇದನ್ನೂ ಓದಿ: ಗಿಲ್​ ಪಡೆಗೂ ಇದು ಡು ಆರ್​​ ಡೈ ಪಂದ್ಯ.. ಗೆಲುವಿನ ಉತ್ಸಾಹದಲ್ಲಿರೋ RCB ಮುಂದಿದೆ ಬಿಗ್​ ಚಾಲೆಂಜ್ 

ಎಲ್ಲಿ ನೋಡಿದರೂ ನೀರು ಹೆಚ್ಚಿನ ಪ್ರಮಾಣದಲ್ಲಿ ನಿಂತಿದ್ದರಿಂದ ರಕ್ಷಣಾ ಪಡೆ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: IPLನಲ್ಲಿ ಮೊಟ್ಟ ಮೊದಲ ಹಾಫ್​ಸೆಂಚುರಿ.. ಫ್ಯಾಮಿಲಿ ಜೊತೆ ಸಂಭ್ರಮಿಸಿದ ರಾಯಲ್ಸ್​ ಪ್ಲೇಯರ್​!

ಇದನ್ನೂ ಓದಿ: ಪಕ್ಕದ ಮನೆಯ ಕಾರಿನ ಗ್ಲಾಸ್​ಗಳನ್ನ ಒಡೆದು ಹಾಕಿದ ಸ್ಕೂಲ್ ಟೀಚರ್​.. ಕಾರಣವೇನು?

ಧಾರಾಕಾರ ಮಳೆ ಜೊತೆಗೆ ಸುಂಟರಗಾಳಿ ಬೀಸುತ್ತಿರುವುದರಿಂದ 141 ಕಾರ್ಖಾನೆ ಕಟ್ಟಡಗಳು ಹಾನಿಗೊಳಗಾಗಿವೆ. ಮನೆಗಳ ಮೇಲ್ಛಾವಣಿಗಳು ಹಾರಿ ಹೋಗಿವೆ. ಆದರೆ ಯಾವುದೇ ಮನೆಗಳು ಕುಸಿದು ಬಿದ್ದಿಲ್ಲ. ದಾಖಲೆ ಮಳೆಯಿಂದಾಗಿ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದು ಸ್ಥಳೀಯ ಜನರು ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನು ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ವ್ಯಾಪಕ ಪ್ರವಾಹ ಉಂಟಾಗಿದ್ದು 1 ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಧಾರಾಕಾರ ಮಳೆ, ಭಯಾನಕ ಸುಂಟರಗಾಳಿಗೆ 5 ಜನ ಸಾವು.. 33ಕ್ಕೂ ಹೆಚ್ಚು ಮಂದಿ ಗಂಭೀರ

https://newsfirstlive.com/wp-content/uploads/2024/04/CHINA_RAIN.jpg

Load More