newsfirstkannada.com

×

ಜೈಲಿಗೆ ಹೋದ ಮೇಲೆ ಮತ್ತೆ ಮೂರು ತಪ್ಪು ಮಾಡಿದ ದರ್ಶನ್; ಜಾಮೀನು ಅಷ್ಟು ಸುಲಭ ಇಲ್ಲವೇ ಇಲ್ಲ..!

Share :

Published September 14, 2024 at 11:30am

Update September 14, 2024 at 11:31am

    A2 ಆರೋಪಿ ದರ್ಶನ್​ಗೆ​ ಬೆನ್ನು ಬಿಡದ ಕಾನೂನು ಕಂಟಕ

    ಜೈಲಿನಿಂದ ಹೊರಬರಲು ಬೇಲ್​ಗೆ ಅರ್ಜಿ ಸಲ್ಲಿಸೋ ಸಾಧ್ಯತೆ

    ದರ್ಶನ್​ಗೆ ಜಾಮೀನು ನೀಡದಂತೆ ಪೊಲೀಸರು ಆಕ್ಷೇಪಣೆಗೆ ಸಿದ್ಧತೆ

ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್​ ಬಳ್ಳಾರಿ ಜೈಲು ಶಿಫ್ಟ್​​ ಆದರೂ ಕಾನೂನು ಕಂಟಕ ಅವರನ್ನು ಬೆನ್ಮು ಬಿಡದಂತಿದೆ. ಒಂದು ಕಡೆ ಜಾಮೀನು ಸಲ್ಲಿಕೆಗೆ ವಕೀಲರ ತಂಡ ಪ್ಲಾನ್ ಮಾಡಿದರೆ, ಮತ್ತೊಂದು ಕಡೆ ದರ್ಶನ್ ಗೆ ಜಾಮೀನು ನೀಡದಂತೆ ಪೊಲೀಸರು ಆಕ್ಷೇಪಣೆಗೆ ಸಿದ್ಧತೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ದರ್ಶನ್​​ಗೆ ಜಾಮೀನು ಸಿಗದಂತೆ ಪೊಲೀಸರು ಮೂರು ಪ್ರಮುಖ ಅಂಶಗಳನ್ನ ಇಟ್ಕೊಂಡು ಆಕ್ಷೇಪಣೆ ಸಲ್ಲಿಸೋಕೆ ಸಿದ್ಧತೆ ಮಾಡಿಕೊಂಡಿದ್ದಾರಂತೆ. ಹಾಗಿದ್ರೆ ದರ್ಶನ್ ಬೇಲ್‌ಗೆ ಕಂಟಕವಾಗುವ ಆ ಮೂರು ಅಂಶಗಳು ಯಾವುವು? ನೋಡೋಣ.

ದರ್ಶನ್ ಜಾಮೀನು ಆಕ್ಷೇಪಣೆಗೆ ಪ್ರಮುಖ ಅಸ್ತ್ರ ಪರಪ್ಪನ ಅಗ್ರಹಾರದಲ್ಲಿ ರಾಜಾಥಿತ್ಯ ನೀಡಿರುವ ಸಂಗತಿ. ಜೈಲಿನಲ್ಲಿ ಸಿಗರೇಟ್, ಟೀ ಕಪ್, ರೌಡಿಶೀಟರ್ ಜೊತೆ ಪೋಸ್ ಕೊಟ್ಟಿರುವ ಫೋಟೋ. ಈ ವಿಚಾರವನ್ನ ಪ್ರಮುಖವಾಗಿ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಲಿದ್ದಾರೆ.

ಇದನ್ನೂ ಓದಿ: ಬರೀ 95 ರೂಪಾಯಿಗೆ OTT ಸೇವೆ! ಗ್ರಾಹಕರ ಮನಗೆದ್ದ ಅಗ್ಗದ ಬೆಲೆಯ ಬೆಸ್ಟ್​​ ಪ್ಲಾನ್​ಗಳಿವು

ಮತ್ತೊಂದೆಡೆ ದರ್ಶನ್​​ಗೆ ಪ್ರಭಾವಿಗಳ ಕಾಂಟ್ಯಾಕ್ಟ್ ಇದೆ. ರೌಡಿಶೀಟರ್​​ಗಳ ಜೊತೆ ಕಾಂಟ್ಯಾಕ್ಟ್, ಪ್ರಭಾವಿಗಳ ಸಹಾಯದಿಂದ ಜೈಲಿನಲ್ಲಿ ರಾಜಾತಿಥ್ಯ ಸಿಕ್ಕಿದೆ. ಜಾಮೀನು ಕೊಟ್ರೆ ತನ್ನ ಪ್ರಭಾವ ಬಳಸಿ ಸಾಕ್ಷ್ಯ ನಾಶ ಮಾಡುವ ಆರೋಪವಿದೆ ಎಂಬುದನ್ನ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಲಿದ್ದಾರೆ.

ದರ್ಶನ್​ಗೆ ವಿಡಿಯೋ ಕಾಲ್ ಕೂಡ ಜಾಮೀನಿಗೆ ಕಂಟಕ ಆಗುವ ಸಾಧ್ಯತೆ ಇದೆ. ಜೈಲಿನಲ್ಲಿ ಇದ್ಕೊಂಡು ರೌಡಿಶೀಟರ್ ಮಗನೊಬ್ಬನಿಗೆ ವಿಡಿಯೋ ಕಾಲ್ ಮಾಡಿರುವ ಸಂಗತಿಯನ್ನು ಪ್ರಮುಖ ಅಂಶವಾಗಿ ಪೊಲೀಸರು ಉಲ್ಲೇಖ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಜೈಲಿನಲ್ಲಿದ್ದು ಮೊಬೈಲ್ ಬಳಕೆ ಮಾಡಿರೋದು, ಖುದ್ದು ತಾನೇ ಮೊಬೈಲ್ ಬಳಕೆ ಮಾಡದಿದ್ರೂ ಮತ್ತೊಬ್ಬರ ಸಹಾಯದಿಂದ ಮೊಬೈಲ್ ಬಳಕೆ ಮಾಡಿರುವ ವಿಚಾರವನ್ನು ಪೊಲೀಸರು ಆಕ್ಷೇಪಣೆ ಪತ್ರದಲ್ಲಿ ಉಲ್ಲೇಖಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಮೂಲಕ ಸಾಕ್ಷ್ಯ ನಾಶಕ್ಕೆ ಯತ್ನ, ಪ್ರಭಾವ ಬಳಕೆಗೆ ಯತ್ನ, ಸಾಕ್ಷಿಗಳಿಗೆ ಬೆದರಿಕೆ ಸಾಧ್ಯತೆಯಿದೆ.

ಇದನ್ನೂ ಓದಿ: ಯಾರೂ ಊಹಿಸಲಾಗದ ಟ್ವಿಸ್ಟ್​ ಪಡೆದುಕೊಂಡ ಶ್ರೀರಸ್ತು ಶುಭಮಸ್ತು; ಆ ಸುದ್ದಿ ಕೇಳಿ ಬೆಚ್ಚಿಬಿದ್ದ ವೀಕ್ಷಕರು

ಸದ್ಯ ಪರಪ್ಪನ ಅಗ್ರಹಾರ ಜೈಲಿನ ವಿಚಾರಕ್ಕೆ ತನಿಖೆ ನಡೀತಿದೆ. ಇನ್ನೂ ಕೂಡ ತನಿಖೆ ಕಂಪ್ಲೀಟ್ ಆಗಿಲ್ಲ. ಹೀಗಾಗಿ ತನಿಖೆ ಆಗುವವರೆಗೂ ಬೇಲ್ ಕೊಡಬಾರದು ಅಂತಾ ಕೇಳುವ ಸಾಧ್ಯತೆಯಿದೆ.

ಮತ್ತೊಂದೆಡೆ ಬಳ್ಳಾರಿ ಜೈಲಿನಲ್ಲಿ ದರ್ಶನ್ ತೋರಿಸಿದ ಅಸಭ್ಯ ವರ್ತನೆ ಕೂಡ ಜಾಮೀನಿಗೆ ಮುಳುವಾಗುತ್ತಾ ಎಂಬ ಪ್ರಶ್ನೆ ಮೂಡಿದೆ. ಮಧ್ಯದ ಬೆರಳು ತೋರಿಸಿ ಅಸಭ್ಯವಾಗಿ ವರ್ತಿಸಿದ್ದರು. ಅಕ್ಕ ಪಕ್ಕ ಪೊಲೀಸ್ ಅಧಿಕಾರಿಗಳು ಇದ್ದರೂ ಸಹ ವಿಚಿತ್ರವಾಗಿ ವರ್ತಿಸಿದ್ದರು. ಈ ವಿಚಾರವನ್ನು ಸಹ ಪೊಲೀಸರು ಪ್ರಸ್ತಾಪ ಮಾಡಲಿರುವ ಸಾಧ್ಯತೆ ಇದೆ.

ಇದನ್ನೂ ಓದಿ: ಮತ್ತೆ ಬಿಗ್​ಬಾಸ್​ಗೆ ಹೋಗ್ತೀನಿ ಎಂದ ಗಾಯಕಿ ಇಶಾನಿ; ಇದು ನಿಜಾನಾ?

ಕೊಲೆ ಆರೋಪ, ರಾಜಾಥಿತ್ಯ, ಬಳ್ಳಾರಿ ಜೈಲಿಗೆ ಶಿಫ್ಟ್ ಆದರೂ ಸಹ ದರ್ಶನ್​ ದುರ್ವತನೆ ಮಾತ್ರ ಕಡಿಮೆಯಾಗಿಲ್ಲ. ಯಾವುದೇ ಪಶ್ಚಾತ್ತಾಪದ ಭಾವನೆ ಇಲ್ಲ. ಈಗಾಗಲೇ ಸಾಕ್ಷ್ಯ ನಾಶಕ್ಕೆ ಹಲವು ಪ್ರಯತ್ನ ಮಾಡಿದ್ದು, ಜೈಲಿನಿಂದ ಹೊರಗಡೆ ಬಂದ್ರೆ ಮತ್ತೆ ಪ್ರಭಾವ ಬಳಸಿ ಸಾಕ್ಷ್ಯ ನಾಶಕ್ಕೆ ಯತ್ನ ಮಾಡಲಿರುವ ಸಾಧ್ಯತೆಯಿದೆ. ರೌಡಿಶೀಟರ್​​​ಗಳು, ಪ್ರಭಾವಿಗಳ ಸಹಾಯದಿಂದ ಸಾಕ್ಷಿಗಳಿಗೆ ಬೆದರಿಕೆ ಹಾಕಿಸುವ ಸಾಧ್ಯತೆಯಿದೆ. ಹೀಗಾಗಿ ದರ್ಶನ್ ಗೆ ಜಾಮೀನು ನೀಡಬಾರದು ಅಂತಾ ಪೊಲೀಸರು ಆಕ್ಷೇಪಣೆ ಸಲ್ಲಿಸಲಿದ್ದಾರೆ ಎನ್ನಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೈಲಿಗೆ ಹೋದ ಮೇಲೆ ಮತ್ತೆ ಮೂರು ತಪ್ಪು ಮಾಡಿದ ದರ್ಶನ್; ಜಾಮೀನು ಅಷ್ಟು ಸುಲಭ ಇಲ್ಲವೇ ಇಲ್ಲ..!

https://newsfirstlive.com/wp-content/uploads/2024/09/DARSHAN_BALLARY_4.jpg

Load More