ಹೈಪ್ರೊಫೈಲ್ ಮಾಂಸ ದಂಧೆ ಕೇಸ್ ಬಯಲಿಗೆ.. ದಾಳಿ ವೇಳೆ ಪೊಲೀಸರಿಗೆ ಕಾದಿತ್ತು ಶಾಕ್..!

author-image
Ganesh
Updated On
ಹೈಪ್ರೊಫೈಲ್ ಮಾಂಸ ದಂಧೆ ಕೇಸ್ ಬಯಲಿಗೆ.. ದಾಳಿ ವೇಳೆ  ಪೊಲೀಸರಿಗೆ ಕಾದಿತ್ತು ಶಾಕ್..!
Advertisment
  • ಸಮುದ್ರದ ಕಿನಾರೆಯಲ್ಲಿ ನಿಂತು ಗ್ರಾಹಕರ ಸೆಳೆಯುತ್ತಿದ್ದರು
  • ಕೆಲಸ ಕೊಡಿಸ್ತೀವಿ ಎಂದು ವಿದೇಶದಿಂದ ಕರೆ ತರುತ್ತಿದ್ದರು
  • ಇಲ್ಲಿಗೆ ಬರ್ತಿದ್ದಂತೆಯೇ ಹೆಚ್ಚಿನ ಹಣ ಆಮೀಷ ನೀಡಿ ದಂಧೆ

ಗೋವಾದಲ್ಲಿ ಹೈ-ಪ್ರೊಫೈಲ್ ಅಂತಾರಾಷ್ಟ್ರೀಯ ಸೆಕ್ಸ್​ ದಂಧೆಯನ್ನು ಎನ್​ಜಿಓ ARZ ಬಯಲಿಗೆ ಎಳೆದಿದ್ದು, ವಿದೇಶಿ ಯುವತಿಯರನ್ನು ರಕ್ಷಣೆ ಮಾಡಲಾಗಿದೆ.

ಉಗಾಂಡ ಮಹಿಳೆಯರನ್ನು ರಕ್ಷಣೆ ಮಾಡಿ ವಿಚಾರಣೆ ಒಳಪಡಿಸಲಾಗಿದೆ. ಜೊತೆಗೆ ವಿದೇಶಿ ಬ್ರೋಕರ್ ಜೊಜೋ ಎನ್ಕಿಂಟು (32) ಎಂಬಾತನನ್ನು ಪೊಲೀಸರು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಕ್ಷತ್ ಕೌಶಲ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ವಿರಾಟ್ ಕೊಹ್ಲಿ ಯಾಕೆ ಬಾಂಗ್ಲಾ ವಿರುದ್ಧ ಆಡಲಿಲ್ಲ..? ಕ್ಯಾಪ್ಟನ್ ರೋಹಿತ್ ಹೇಳಿದ್ದೇ ಬೇರೆ..!

ಗೋವಾದ ಮಾಂಡ್ರೆಮ್ ಪೊಲೀಸರು ಹಾಗೂ ಎನ್​ಜಿಓ ಎಆರ್​ಝೆಡ್ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಈ ವೇಳೆ ಸೆಕ್ಸ್​ ದಂಧೆ ನಡೆಯುತ್ತಿರೋದು ಬೆಳಕಿಗೆ ಬಂದಿದೆ. ಆಫ್ರಿಕಾ ದೇಶಗಳಿಂದ ಮಹಿಳೆಯರನ್ನು ಕರೆದುಕೊಂಡು ಬಂದು ದಂಧೆ ನಡೆಸಲಾಗುತ್ತಿತ್ತು. ಈ ಸಂಬಂಧ ಪಾಸ್​ಪೋರ್ಟ್, ವೀಸಾಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:20 ತಂಡಗಳು.. 28 ದಿನಗಳ ಕಾದಾಟ.. ಟಿ20 ವಿಶ್ವಕಪ್ ಗೆಲ್ಲುವ ತಂಡದ ಹೆಸರು ತಿಳಿಸಿದ ತಜ್ಞರು..!

ವಿದೇಶಿ ಯುವತಿಯರಿಗೆ ಮಸಾಜ್ ಪಾರ್ಲರ್, ಬ್ಯೂಟಿ ಪಾರ್ಲರ್ ಸೇರಿದಂತೆ ವಿವಿಧ ಕಡೆಗಳಲ್ಲಿ ಕೆಲಸ ಕೊಡಿಸುವ ಭರವಸೆ ನೀಡುತ್ತಿದ್ದರು. ಅದನ್ನು ನಂಬಿದ ಯುವತಿಯರು ಗೋವಾಗೆ ಬರುತ್ತಿದ್ದರು. ನಂತರ ಅವರಿಗೆ ಹಣದ ಆಮೀಷವೊಡ್ಡಿ ವೇಶ್ಯಾವಟಿಕೆಗೆ ಇಳಿಸುತ್ತಿದ್ದರು. ಗೋವಾದ ಬೀಚ್​ಗಳಲ್ಲಿ ನಿಂತು ಗ್ರಾಹಕರನ್ನು ಸೆಳೆಯುವಂತೆ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಓರ್ವ ಮಹಿಳೆಯ ಮೂಲಕ ಈ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಇದನ್ನೂ ಓದಿ:6, 6, 6, 6 ರಿಷಬ್ ಪಂತ್ ಸ್ಫೋಟಕ ಅರ್ಧ ಶತಕ.. ರೋಹಿತ್​ಗೆ ಖಡಕ್ ಮೆಸ್ಸೇಜ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment