newsfirstkannada.com

ಅಕ್ರಮ ಮರಳು ಸಾಗಿಸ್ತಿದ್ದ ಟ್ರ್ಯಾಕ್ಟರ್​ನ ಓವರ್ ಟೇಕ್ ಮಾಡುವಾಗ ಅನಾಹುತ; ಪೊಲೀಸ್ ಜೀಪ್ ಪಲ್ಟಿ

Share :

Published April 15, 2024 at 12:25pm

  ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಗಾಯ, ಆಸ್ಪತ್ರೆಗೆ ದಾಖಲು

  ಸಿಂಧನೂರು ಟ್ರಾಫಿಕ್ ‌ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ

  ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ದಂಧೆಕೋರರು

ರಾಯಚೂರು: ಮರಳು ವಾಹನ ಸೀಜ್ ಮಾಡಲು ಹೋಗುವಾಗ ಪೊಲೀಸ್ ಜೀಪ್ ಪಲ್ಟಿಯಾದ ಘಟನೆ ಜಿಲ್ಲೆಯ ‌ಸಿಂಧನೂರು ತಾಲೂಕಿ‌ನ ರೈತನಗರ ಕ್ಯಾಂಪ್ ಬಳಿ ನಡೆದಿದೆ.

ಮರಳಿನ ಟ್ರ್ಯಾಕ್ಟರ್ ಓವರ್ ಟೇಕ್ ಮಾಡಲು ಹೋದಾಗ ವಾಹನ ಪಲ್ಟಿಯಾಗಿದೆ. ಅಪಘಾತದಲ್ಲಿ ಹೋಂ ಗಾರ್ಡ್ ಶಕ್ಷಾವಲಿ (33), ಪೇದೆ ಕರಿಯಪ್ಪ (35) ಎಂಬುವವರಿಗೆ ಗಾಯವಾಗಿದೆ. ಅಕ್ರಮವಾಗಿ ಸಾಗಿಸುತ್ತಿದ್ದ ಮರಳಿನ ಟ್ರ್ಯಾಕ್ಟರ್ ತಡೆಯಲು ಹೋಗಿ ದುರ್ಘಟನೆ ಸಂಭವಿಸಿದೆ.

ಇದನ್ನೂ ಓದಿ: 200 ಕೋಟಿ ರೂಪಾಯಿ ಮೌಲ್ಯದ ಎಲ್ಲಾ ಆಸ್ತಿಗಳನ್ನೂ ದಾನ ಮಾಡಿ ಸನ್ಯಾಸತ್ವ ಸ್ವೀಕರಿಸಿದ ಕೋಟ್ಯಾಧಿಪತಿ..!

ಗಾಯಾಳುಗಳನ್ನ ಸಿಂಧನೂರು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಿಂಧನೂರು ಟ್ರಾಫಿಕ್ ‌ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊನೆಗೆ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ವಾಹನವನ್ನು ಸೀಜ್ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಕ್ರಮ ಮರಳು ಸಾಗಿಸ್ತಿದ್ದ ಟ್ರ್ಯಾಕ್ಟರ್​ನ ಓವರ್ ಟೇಕ್ ಮಾಡುವಾಗ ಅನಾಹುತ; ಪೊಲೀಸ್ ಜೀಪ್ ಪಲ್ಟಿ

https://newsfirstlive.com/wp-content/uploads/2024/04/TRACTOR.jpg

Load More