Advertisment

ಇದು ಪೇದೆ ಅಪಹರಣಕಾರನಾದ ಕತೆ! ಸಮವಸ್ತ್ರದಲ್ಲೇ ಕಿಡ್ನಾಪ್​, 1 ಕೋಟಿ ಕೊಡುವಂತೆ ಬೇಡಿಕೆ!

author-image
AS Harshith
Updated On
ಇದು ಪೇದೆ ಅಪಹರಣಕಾರನಾದ ಕತೆ! ಸಮವಸ್ತ್ರದಲ್ಲೇ ಕಿಡ್ನಾಪ್​, 1 ಕೋಟಿ ಕೊಡುವಂತೆ ಬೇಡಿಕೆ!
Advertisment
  • ನ್ಯಾಯ ಒದಗಿಸುವ ಪೊಲೀಸ್​​ ಅಪಹರಣ ಮಾಡಿದನು
  • ಖಾಕಿ ಸಮವಸ್ತ್ರದಲ್ಲೇ ವ್ಯಾಪಾರಿಗಳನ್ನು ಕಿಡ್ನಾಪ್​ ಮಾಡಿದ ಪೇದೆ
  • ಕಿಡ್ನಾಪ್​ ಮಾಡಿದ್ದಲ್ಲದೆ ಒಂದು ಕೋಟಿ ರೂಪಾಯಿಗೆ ಬೇಡಿಕೆ

ಪೊಲೀಸರು ಜನರ ರಕ್ಷಣೆಗಾಗಿ ಇರುವವರು. ಏನೇ ತಾಪತ್ರಯವಾದರು ಪೊಲೀಸರು ಅದಕ್ಕೆ ನ್ಯಾಯ ಒದಗಿಸಿ ಕೊಡುತ್ತಾರೆ, ರಕ್ಷಿಸುತ್ತಾರೆ. ಆದರೆ ಇಲ್ಲೊಬ್ಬರು ಪೊಲೀಸ್ ನ್ಯಾಯ ಒದಗಿಸುವ ಕೊಡುವ ಬದಲು ಕಿಡ್ನಾಪರ್​ ಆಗಿದ್ದಾರೆ. ಸದ್ಯ ಬಂಧನಕ್ಕೊಳಗಾಗಿದ್ದಾರೆ.

Advertisment

ಹರಿಯಾಣ ಗುರುಗ್ರಾಮ್​​ನ ಸೆಕ್ಟರ್​15 ಮಾರುಕಟ್ಟೆಯಿಂದ ಇಬ್ಬರು ವ್ಯಕ್ತಿಗಳನ್ನು ಅಪಹರಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಮೂಲದ ಪೇದೆ ಮತ್ತು ಐವರು ಬಂಧಿತರಾಗಿದ್ದಾರೆ. ಮಾತ್ರವಲ್ಲದೆ ಅಪಹರಣ ಕೇಸ್​ನಲ್ಲಿ 1 ಕೋಟಿ ರೂಪಾಯಿಗೆ ಡಿಮ್ಯಾಂಡ್​​ ಮಾಡಿರುವ ವಿಚಾರವು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಹೃತಿಕ್​ ರೋಷನ್​ ಮುಂದೆಯೇ ಮಾಜಿ ಪತ್ನಿಯ ಲಿಪ್​ ಲಾಕ್​! ಮಕ್ಕಳೆದುರೇ ಗೆಳೆಯನಿಗೆ ಮುತ್ತಿಟ್ಟ ತಾಯಿ

ಅಪಹರಣಕ್ಕೊಳಗಾದವರು ವ್ಯಾಪಾರಿಗಳಾಗಿದ್ದು, ಐವರು ಇವರನ್ನ ಕಿಡ್ನಾಪ್​​ ಮಾಡುತ್ತಾರೆ. ಬಳಿಕ ಹಣಕ್ಕಾಗಿ ಬೇಡಿಕೆ ಇಡುತ್ತಾರೆ. ಬರೋಬ್ಬರಿ 1 ಕೋಟಿ ರೂಪಾಯಿ ನೀಡುವಂತೆ ಕೇಳುತ್ತಾರೆ. ​​

Advertisment

ಇದನ್ನೂ ಓದಿ: ONGC; ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.. SSLC, PUC, ಐಟಿಐ ಸೇರಿ ಪದವೀಧರರಿಗೂ ಅವಕಾಶ

ವ್ಯಾಪಾರಿಗಳಿಬ್ಬರ ಕಿಡ್ನಾಪ್​ ಕೇಸ್​​ ಪೊಲೀಸರ ಗಮನಕ್ಕೆ ಬಂದಂತೆ ತಂಡ ರಚಿಸಿದ ಅವರು ತನಿಖೆ ಶುರು ಮಾಡುತ್ತಾರೆ. ಕೊನೆಗೆ ಸೋಹ್ನಾ ರಸ್ತೆಯಿಂದ ಅಪಹರಣಕಾರರನ್ನು ಬಂಧಿಸಿ ವ್ಯಾಪಾರಿಗಳನ್ನು ಪೊಲೀಸರು ರಕ್ಷಿಸುತ್ತಾರೆ. ಬಳಿಕ ಅಪಹರಣಕಾರರನ್ನು ಬೆಂಡೆತ್ತಿದಂತೆ ಈ ಪ್ರಕರಣದಲ್ಲಿ ದೆಹಲಿ ಮೂಲದ ಪೇದೆ ಸುನೀಲ್​ ಎಂಬವರು ಇರುವ ಸಂಗತಿ ಬಯಲಾಗಿದೆ.

ಅಪಹರಣಕಾರರಾದ ಕುಲದೀಪ್​, ರಿಷಿಪಾಲ್​, ದೀಪಕ್ ಮತ್ತು ಸೋನು ಎಂಬವರ ಜೊತೆಗೆ ಸುನೀಲ್​ ಕೂಡ ಭಾಗಿಯಾಗಿದ್ದು, ಪೊಲೀಸ್​ ಸಮವಸ್ತ್ರದಲ್ಲೇ ವ್ಯಾಪಾರಿಗಳಿಬ್ಬರನ್ನು ಕಿಡ್ನಾಪ್​ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಈ ಪ್ರಕರಣ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment