newsfirstkannada.com

ಹಾಸನ ಸೆಕ್ಸ್​ ವಿಡಿಯೋ ಶೇರ್​ ಮಾಡೋರೇ ಎಚ್ಚರ! ಚೂರು ಯಾಮಾರಿದ್ರೂ ಜೈಲು ಸೇರೋದು ಗ್ಯಾರಂಟಿ

Share :

Published May 6, 2024 at 8:57pm

    ಹಾಸನ ಅಶ್ಲೀಲ ವಿಡಿಯೋ ಹಂಚೋರಿಗೆ ಎಸ್​​ಐಟಿಯಿಂದ ಖಡಕ್​ ಎಚ್ಚರಿಕೆ

    ಯಾವುದೇ ಕಾರಣಕ್ಕೂ ಸೆಕ್ಸ್​ ವಿಡಿಯೋ ಹಂಚಬಾರದು ಎಂದು ಆದೇಶ!

    ಒಂದು ವೇಳೆ ಹಾಸನ ಸೆಕ್ಸ್​ ವಿಡಿಯೋ ಹಂಚಿದ್ರೆ ಜೈಲು ಸೇರೋದು ಗ್ಯಾರಂಟಿ

ಬೆಂಗಳೂರು: ಹಾಸನ ಅಶ್ಲೀಲ ವಿಡಿಯೋಗಳನ್ನು ಹಂಚುತ್ತಿರೋ ಎಲ್ಲರಿಗೂ ಎಸ್ಐಟಿ ಅಧಿಕಾರಿಗಳು ಖಡಕ್​ ಎಚ್ಚರಿಕೆ ನೀಡಿದ್ದಾರೆ. ಯಾರಾದ್ರೂ ವಿಡಿಯೋಗಳನ್ನು ಶೇರ್​ ಮಾಡಿದ್ರೂ ತಮ್ಮ ಬಳಿ ಇಟ್ಟುಕೊಂಡ್ರೂ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಆದೇಶ ಹೊರಡಿಸಿದ್ದಾರೆ.

ಪೊಲೀಸ್ರು ಕೊಟ್ಟ ಎಚ್ಚರಿಕೆಯೇನು?

ಅಶ್ಲೀಲ ವಿಡಿಯೋಗಳನ್ನು ಜನರು ತಮ್ಮ ಬಳಿ ಇಟ್ಟುಕೊಳ್ಳುವುದು ಕೂಡ ಅಪರಾಧ. ಮಾಹಿತಿ ಮತ್ತು ತಂತ್ರಜ್ಞಾನ ಅಧಿನಿಯಮದಲ್ಲಿ ಯಾವುದೇ ವ್ಯಕ್ತಿ ಸಂದೇಶಗಳನ್ನು ರೂಪಿಸುವ, ಇಟ್ಟುಕೊಳ್ಳುವ, ಪ್ರಸಾರ ಮಾಡುವ ವ್ಯಕ್ತಿಗಳನ್ನು ಸಂದೇಶದ ರಚನಾಕಾರರು ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಯಾರಾದರೂ ತಮ್ಮ ಬಳ ಅಶ್ಲೀಲ ವಿಡಿಯೋ, ಚಿತ್ರಗಳು ಹಾಗೂ ಧ್ವನಿ ಮುದ್ರಣಗಳನ್ನು ಇಟ್ಟುಕೊಂಡಿದ್ದರೂ ಅದು ಅಪರಾಧವಾಗುತ್ತದೆ. ಕಾರಣ ಜನರು ಯಾವುದೇ ಎಲೆಕ್ಟ್ರಾನಿಕ್ ರೂಪದಲ್ಲಿ ಅಶ್ಲೀಲ ವಿಡಿಯೋ ಹಾಗೂ ಚಿತ್ರಗಳನ್ನು ಇಟ್ಟುಕೊಳ್ಳುವುದನ್ನು ಅಥವಾ ಪ್ರಸಾರ ಮಾಡುವುದನ್ನು ನಿರ್ಬಂಧಿಸಿಕೊಳ್ಳುವುದು ಸೂಕ್ತ. ಒಂದು ವೇಳೆ ಅಂಥಹ ವಿಡಿಯೋ, ಚಿತ್ರಗಳು ಮತ್ತು ಧ್ವನಿ ಮುದ್ರಣಗಳನ್ನು ತಮ್ಮ ಮೊಬೈಲ್ ಅಥವಾ ಇತರೆ ಸಾಧನಗಳಲ್ಲಿ ಹೊಂದಿದ್ದರೆ ‘ಡಿಲಾಟ್’ ಮಾಡುವುದರಿಂದ ಕಾನೂನಿನ ಕ್ರಮಗಳಿಂದ ಪಾರಾಗುವ ಸಾಧ್ಯತೆ ಇರುತ್ತದೆ ಎಂದು ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ.

ಇನ್ನು, ಕೇಸ್​ ತನಿಖೆ ನಡೆಸುತ್ತಿರೋ ವಿಶೇಷ ತನಿಖಾ ತಂಡದ ಮುಖ್ಯಸ್ಥರೇ ಈ ಆದೇಶ ಹೊರಡಿಸಿದ್ದಾರೆ. ಹಾಗಾಗಿ ಯಾರ ಬಳಿಯಾದ್ರೂ ಈ ವಿಡಿಯೋಗಳಿದ್ದರೆ ಕೂಡಲೇ ಡಿಲೀಟ್​ ಮಾಡಿದ್ರೆ ಒಳಿತು.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪೆನ್​ಡ್ರೈವ್ ಕೇಸ್​ಗೆ ಮತ್ತೊಂದು ಟ್ವಿಸ್ಟ್​​​.. ಡಿಕೆಶಿ ಬಗ್ಗೆ ದೇವರಾಜೇಗೌಡ ಸ್ಫೋಟಕ ಸುಳಿವು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾಸನ ಸೆಕ್ಸ್​ ವಿಡಿಯೋ ಶೇರ್​ ಮಾಡೋರೇ ಎಚ್ಚರ! ಚೂರು ಯಾಮಾರಿದ್ರೂ ಜೈಲು ಸೇರೋದು ಗ್ಯಾರಂಟಿ

https://newsfirstlive.com/wp-content/uploads/2024/04/Prajwal-Revanna-1-1.jpg

Load More