Advertisment

ದರ್ಶನ್​​ಗೆ ಮತ್ತಷ್ಟು ಸಂಕಷ್ಟ.. ಪೊಲೀಸರಿಗೆ ಸಿಗ್ತಿದೆ ಬಲವಾದ ಸಾಕ್ಷಿಗಳು..!

author-image
Ganesh
Updated On
ದರ್ಶನ್​​ಗೆ ಮತ್ತಷ್ಟು ಸಂಕಷ್ಟ.. ಪೊಲೀಸರಿಗೆ ಸಿಗ್ತಿದೆ ಬಲವಾದ ಸಾಕ್ಷಿಗಳು..!
Advertisment
  • ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ ಗ್ಯಾಂಗ್ ಬಂಧನ
  • ಬಂಧನ ಬೆನ್ನಲ್ಲೇ ತೀವ್ರ ವಿಚಾರಣೆ ನಡೆಸ್ತಿರುವ ಅಧಿಕಾರಿಗಳು
  • 27 ಮಂದಿಯಲ್ಲಿ ಹಲವರ ಹೇಳಿಕೆಯನ್ನು ಸಾಕ್ಷಿಯಾಗಿ ಪರಿಗಣನೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅಂಡ್ ಗ್ಯಾಂಗ್ ಬಂಧನವಾಗಿದ್ದು, ಪೊಲೀಸ್​ ಕಸ್ಟಡಿಯಲ್ಲಿ ತೀವ್ರ ವಿಚಾರಣೆ ಮುಂದುವರಿದಿದೆ. ಸ್ಟಾರ್ ನಟನನ್ನು ಇಂದು ಮೈಸೂರಿಗೆ ಕರೆದುಕೊಂಡು ಹೋಗಿ ತನಿಖೆ ನಡೆಸಲಾಗುತ್ತಿದೆ.

Advertisment

ಪೊಲೀಸ್ ಅಧಿಕಾರಿಗಳ ಇಂಚಿಂಚು ತನಿಖೆಯಿಂದಾಗಿ ಕೊಲೆ ಮಾಡಿದ ಆರೋಪಿಗಳಿಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ ಎನ್ನಲಾಗುತ್ತಿದೆ. ಈಗಾಗಲೇ ರೇಣುಕಾಸ್ವಾಮಿ ಕೊಲೆ ಸಂಬಂಧ ಹಲವು ಮಂದಿಯ ವಿಚಾರಣೆ ನಡೆದಿದೆ. ಬಂಧಿತ ಆರೋಪಿಗಳಲ್ಲದೇ ಇನ್ನೂ ಹಲವು ಮಂದಿಯ ವಿಚಾರಣೆಗೆ ಪೊಲೀಸ್ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

ಇದನ್ನೂ ಓದಿ:ಬಿಸಿಸಿಐಗೆ ಬಿಗ್ ಶಾಕ್ ಕೊಟ್ಟ ಗಂಭೀರ್​.. ಷರತ್ತುಗಳಿಗೆ ಬೆಚ್ಚಿಬಿದ್ದ ಬಿಗ್​ಬಾಸ್..!

publive-image

ವಿಚಾರಣೆ ನಡೆಸಿ ಅವರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಹೇಳಿಕೆ ನೀಡಿದವರನ್ನ ಸಾಕ್ಷ್ಯಗಳಾಗಿ ಪರಿಗಣಿಸಲಾಗುತ್ತಿದೆ. ಪ್ರಕರಣದಲ್ಲಿ ಆರೋಪಿಗಳು ಸೇರಿ 27ಕ್ಕೂ ಹೆಚ್ಚು ಮಂದಿ ವಿಚಾರಣೆ ನಡೆಸಲಾಗಿದೆ. ಈ 27 ಮಂದಿಯಲ್ಲಿ 17 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ನಟ ದರ್ಶನ್, ಪವಿತ್ರಗೌಡ ಸೇರಿ 17 ಮಂದಿಯ ಬಂಧಿನ ಆಗಿದೆ.

Advertisment

ಉಳಿದವರ ಹೇಳಿಕೆಗಳನ್ನು ಸಾಕ್ಷ್ಯಿಯಾಗಿ ಅಧಿಕಾರಿಗಳು ಪರಿಗಣಿಸಿದ್ದಾರೆ. ಘಟನಾ ಸ್ಥಳದಲ್ಲಿ ಹಾಜರಿದ್ದ ಕೆಲವರು, ಬೇರೆಬೇರೆ ಕಡೆಗಳಲ್ಲಿ ಪ್ರತ್ಯಕ್ಷ ಪರೋಕ್ಷವಾಗಿ ಕಂಡು ಬಂದ ವ್ಯಕ್ತಿಗಳ ವಿಚಾರಣೆ ಮಾಡಿದ್ದಾರೆ. ಅದರಂತೆ ಪಟ್ಟಣಗೆರೆ ಶೆಡ್​ನಲ್ಲಿದ್ದ ಇನ್ನೂ ಹಲವರ ಹೇಳಿಕೆಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ:ಚಿಕ್ಕಣ್ಣ, ಯಶಸ್ ಸೂರ್ಯ ಮಾತ್ರವಲ್ಲ.. ದರ್ಶನ್ ಪಾರ್ಟಿಯಲ್ಲಿ ಸ್ಟಾರ್ ನಿರ್ಮಾಪಕ..?

publive-image

ಘಟನೆ ಹೇಗಾಯ್ತು? ಯಾಱರು ಇದ್ದರು? ಎಷ್ಟು ಜನ ಸೇರಿದ್ದರು? ದರ್ಶನ್ ಬಂದಿದ್ದು ಎಷ್ಟೊತ್ತಿಗೆ? ದರ್ಶನ್ ಹಲ್ಲೆ ಮಾಡಿದ್ದು ಯಾವ್ಯಾವ ಆಯುಧಗಳಿಂದ? ಹೀಗೆ ಹಲವು ವಿಚಾರಗಳ ಬಗ್ಗೆ ಶೆಡ್​​ನಲ್ಲಿದ್ದವರ ಬಳಿ ಕೇಳಿದ್ದಾರಂತೆ. ಎಲ್ಲರ ಹೇಳಿಕೆಗಳನ್ನೂ ದಾಖಲಿಸಿಕೊಂಡಿರುವ ಪೊಲೀಸರು ಕೋರ್ಟ್​​ ಮುಂದೆ ಇಡಲು ತಯಾರಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಘಟನೆ ವೇಳೆ ಹಾಜರಿದ್ದವರ ಪ್ರತ್ಯಕ್ಷ ಹೇಳಿಕೆಯಿಂದ ದರ್ಶನ್​​ಗೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

Advertisment

ಇದನ್ನೂ ಓದಿ:ಪಟ್ಟಣಗೆರೆ ಶೆಡ್​ನಲ್ಲಿ ರಕ್ತ ಚರಿತ್ರೆಗಳ ಕತೆ..? ಸಿಕ್ಕ ರಕ್ತದ ಕಲೆಗಳು ಹೇಳ್ತಿವೆಯಂತೆ ಪಾಪಿಗಳ ಲೋಕದ ಕತೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment