Advertisment

ದರ್ಶನ್ ಕೇಸ್​ಗೆ ಬಿಗ್ ಟ್ವಿಸ್ಟ್ ಕೊಡಲು ಪೊಲೀಸರು ನಿರ್ಧಾರ; ಆರೋಪಿಗಳಿಗೆ ಮತ್ತೆ ಢವಢವ..!

author-image
Ganesh
Updated On
ಒಂಟಿತನ, ಸೊಳ್ಳೆಕಾಟ, ನಿತ್ಯ ಕರ್ಮದ ಸಮಸ್ಯೆ.. ಬಳ್ಳಾರಿ ಜೈಲಲ್ಲಿ ದರ್ಶನ್‌ಗೆ 4 ನರಕ ದರ್ಶನ; ಏನಾಯ್ತು?
Advertisment
  • ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರ
  • ಪೊಲೀಸರಿಂದ 3 ಆಯಾಮದಲ್ಲಿ ಸಾಕ್ಷಿಗಳ ವಿಂಗಡಣೆ
  • ಕೃತ್ಯಕ್ಕೆ ಬಳಸಿದ್ದ ವಾಹನಗಳ ದಾಖಲೆ, DNA ರಿಪೋರ್ಟ್

ನಟ ದರ್ಶನ್​ಗೆ ಸದ್ಯ ಢವಢವ ಶುರುವಾಗಿದೆ. ಬೆಂಗಳೂರು ಪರಪ್ಪನ ಮಡಿಲಲ್ಲಿ ರಾಜಾತಿಥ್ಯ ಸ್ವೀಕರಿಸಿ ಹಾಯಾಗಿದ್ದ ದರ್ಶನ್ ಸದ್ಯ ಬಳ್ಳಾರಿ ಜೈಲಿಗೆ ಶಿಫ್ಟ್​ ಆಗಿದ್ದಾರೆ. ಈ ನಡುವೆ ಇಂದು ಅಥವಾ ನಾಳೆ ಡೆವಿಲ್ ಗ್ಯಾಂಗ್​ನ ದೋಷಾರೋಪ ಪಟ್ಟಿಯನ್ನು ಕೋರ್ಟ್​ಗೆ ಸಲ್ಲಿಸಲು ಪೊಲೀಸರು ಭರ್ಜರಿ ಸಿದ್ಧತೆ ನಡೆಸಿದ್ದಾರೆ.

Advertisment

ಬೆಂಗಳೂರು ಪರಪ್ಪನ ಅಗ್ರಹಾರ ಜೈಲಲ್ಲಿ ದರ್ಶನ್​ಗೆ ಸಿಕ್ಕ ರಾಜಾತಿಥ್ಯದ ಬಳಿಕ ಕೇಸ್​ಗೆ ಬಹುದೊಡ್ಡ ತಿರುವೇ ಸಿಕ್ಕಂತಾಗಿದೆ. ಇಡೀ ಪೊಲೀಸ್ ಇಲಾಖೆಯೇ ಅಲ್ಲಾಡಿ ಹೋಗಿದೆ. ಸದ್ಯ ಪರಪ್ಪನ ಮಡಿಲಿನಲ್ಲಿ ಹಾಯಾಗಿದ್ದ ಡೆವಿಲ್ ಗ್ಯಾಂಗ್​ನ ಸದಸ್ಯರು ರಾಜ್ಯದ ವಿವಿಧ ಕಾರಾಗೃಹಗಳಿಗೆ ಎತ್ತಂಗಡಿ ಆಗಿದ್ದಾರೆ. ಈಗ ಎಲ್ಲರ ಕಣ್ಣು ನೆಟ್ಟಿರುವುದು ಪೊಲೀಸರ ಆ ಒಂದು ವರದಿ ಮೇಲೆ..

ಇದನ್ನೂ ಓದಿ:3 ಸಿಸಿಟಿವಿ, 3 ಬಾಡಿ ವೋರ್ನ್ ಕ್ಯಾಮೆರಾ; ಅಬ್ಬಾಬ್ಬ..! ದರ್ಶನ್ ಮೇಲೆ 24 ಗಂಟೆ ನಿಗಾ ಇಡಲು ಏನೆಲ್ಲ ವ್ಯವಸ್ಥೆ ಗೊತ್ತಾ?

ಇಂದು ಅಥವಾ ನಾಳೆ ಚಾರ್ಜ್​ಶೀಟ್​ ಸಲ್ಲಿಸುವ ಸಾಧ್ಯತೆ!
ಚಿತ್ರದುರ್ಗದ ರೇಣುಕಾಸ್ವಾಮಿಯ ಬರ್ಬರ ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಸೇರಿ ಒಟ್ಟು 17 ಆರೋಪಿಗಳು ಸದ್ಯ ಜೈಲುಗಳಲ್ಲಿ ಕಂಬಿ ಎಣಿಸುತ್ತಿದ್ದಾರೆ. ಈಗಾಗಲೇ ಪ್ರಕರಣದ ಆಳ-ಅಗಲ ಬಿಡದೇ ಇಂಚಿಂಚೂ ತನಿಖೆ ನಡೆಸಿರುವ ಪೊಲೀಸರು ದರ್ಶನ್ ಗ್ಯಾಂಗ್​ನ ಹಣೆಬರಹ ಬರೆದಿದ್ದಾರೆ. ಬರೋಬ್ಬರಿ 4,500 ಪುಟಗಳಲ್ಲಿ ಪಾಪಕೃತ್ಯಗಳ ಲೆಕ್ಕವನ್ನ ಚಿತ್ರಗುಪ್ತನಂತೆ ಪೊಲೀಸರು ರೆಡಿಮಾಡಿದ್ದಾರೆ. ಈ ಚಾರ್ಜ್​ಶೀಟ್​ಅನ್ನು ಇಂದು ಅಥವಾ ನಾಳೆ ಕೋರ್ಟ್​ಗೆ ಸಲ್ಲಿಸುವ ಸಾಧ್ಯತೆ ದಟ್ಟವಾಗಿದೆ. ಪೊಲೀಸರು 3 ಆಯಾಮಗಳಲ್ಲಿ ಸಾಕ್ಷ್ಯಗಳನ್ನು ಡಿವೈಡ್ ಮಾಡಿದ್ದಾರೆ. ಡಿಗ್ಯಾಂಗ್ ವಿರುದ್ಧ ಹೆಕ್ಕಿ ತೆಗೆದಿರುವ ಸಾಕ್ಷ್ಯಗಳನ್ನು ಉಲ್ಲೇಖಿಸಿದ್ದಾರೆ. ಸುಲಭವಾಗಿ ಭೇದಿಸಲಾಗದಂತೆ ಪೊಲೀಸರು ಚಾರ್ಜ್​ಶೀಟ್​ ಚಕ್ರವ್ಯೂಹ ರಚಿಸಿದ್ದಾರೆ.

Advertisment

ಚಾರ್ಜ್​ಶೀಟ್ ‘ಚಕ್ರ’ವ್ಯೂಹ!

  • ಪೊಲೀಸರಿಂದ 3 ಆಯಾಮದಲ್ಲಿ ಸಾಕ್ಷಿಗಳ ವಿಂಗಡಣೆ
  • ಕಿಡ್ನಾಪ್, ಕೊಲೆ, ಸಾಕ್ಷ್ಯನಾಶ ಸಂಬಂಧದ ಸಾಕ್ಷ್ಯಗಳು
  • ‘ಡಿ’ ಗ್ಯಾಂಗ್ ವಿರುದ್ಧ ಸಂಗ್ರಹಿಸಿರುವ ಸಾಕ್ಷಿಗಳ ಉಲ್ಲೇಖ
  • ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು, 40ಕ್ಕೂ ಹೆಚ್ಚು 164 ಹೇಳಿಕೆ
  • 200ಕ್ಕೂ ಹೆಚ್ಚು ಜನರ ಹೇಳಿಕೆ, 200ಕ್ಕೂ ಹೆಚ್ಚು ಎವಿಡೆನ್ಸ್
  • ಸಾವಿರಕ್ಕೂ ಅಧಿಕ ಪುಟಗಳ ಸಿಡಿಆರ್ ದಾಖಲೆಗಳು
  • ಕೃತ್ಯಕ್ಕೆ ಬಳಸಿದ್ದ ವಾಹನಗಳ ದಾಖಲೆ, DNA ರಿಪೋರ್ಟ್
  • ಬಳ್ಳಾರಿ ಜೈಲಿಗೆ ಮತ್ತಷ್ಟು ಸಿಸಿಟಿವಿ ಅಳವಡಿಕೆ

ಇನ್ನು ಅದ್ಯಾವಾಗ ನಟ ದರ್ಶನ್ ಬೆಂಗಳೂರು ಜೈಲಿನಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರವಾದ್ರೋ ಅಲ್ಲಿಂದ ಬಳ್ಳಾರಿ ಜೈಲಿನ ಲುಕ್ಕೇ ಚೇಂಜ್​ ಆಗಿದೆ. ಭದ್ರತೆಯಲ್ಲೂ ಹಲವು ಮಾರ್ಪಾಡು ಮಾಡಲಾಗಿದೆ. ಈ ನಡುವೆ ಬಳ್ಳಾರಿ ಜೈಲಿಗೆ ಮತ್ತಷ್ಟು ಸಿಸಿಟಿವಿ ಅಳವಡಿಸಲಾಗಿದೆ. ನಾಲ್ವರು ತಾಂತ್ರಿಕ ಸಿಬ್ಬಂದಿ ಬಳ್ಳಾರಿ ಸೆಂಟ್ರಲ್ ಜೈಲ್ ಗೋಡೆಗಳಿಗೆ ಕ್ಯಾಮರಾ ಅವಳವಡಿಸಿದ್ದಾರೆ. ಮುಖ್ಯ ಗೇಟ್ ಮುಂಭಾಗದ ಚಲನವಲನ ಕುರಿತು ಅರಿಯಲು, ಮಾಧ್ಯಮ ಪ್ರತಿನಿಧಿಗಳು ನಿಲ್ಲುವ ಸ್ಥಳ ಹಾಗೂ ಜೈಲ್‌ನ ಮುಖ್ಯ ದ್ವಾರ ಕಾಣುವ ಸ್ಥಳಕ್ಕೆ ಕ್ಯಾಮರಾಗಳು ಲಗ್ಗೆ ಇಟ್ಟಿವೆ.

ಕೊಲೆ ಕೇಸ್​​ನಲ್ಲಿ ದರ್ಶನ್ ಅರೆಸ್ಟ್ ಆಗಿ ಇಂದಿಗೆ 85 ದಿನಗಳು ಕಳೆದಿವೆ. 90 ದಿನದಲ್ಲಿ ಪೊಲೀಸರು ಚಾರ್ಜ್​ಶೀಟ್ ಸಲ್ಲಿಸಬೇಕಿದೆ. ಚಾರ್ಜ್​ಶೀಟ್ ಸಲ್ಲಿಕೆಗೆ ಇನ್ನು ಐದೇ ದಿನಗಳು ಬಾಕಿ ಇದೆ. ಆದರೆ ಗೌರಿ-ಗಣೇಶ ಹಬ್ಬದ ಹಿನ್ನೆಲೆ 2 ದಿನ ಮಾತ್ರ ಬಾಕಿ ಇದೆ. ಒಂದ್ವೇಳೆ ಚಾರ್ಜ್​ಶೀಟ್ ಸಲ್ಲಿಸದಿದ್ರೆ ಆರೋಪಿಗಳಿಗೆ ಲಾಭವಾಗಲಿದೆ. ಹೀಗಾಗಿ ಇಂದು ಅಥವಾ ನಾಳೆ ಪೊಲೀಸರು ಚಾರ್ಜ್​ಶೀಟ್​ ಸಲ್ಲಿಸಲೇಬೇಕಾಗಿದೆ.

Advertisment

ಇದನ್ನೂ ಓದಿ:ನಾನು DG ಅಲ್ಲ, ಆದರೆ.. ದರ್ಶನ್ ಬಗ್ಗೆ ಮತ್ತೆ ಮಾತನಾಡಿದ ಸಚಿವ ಜಮೀರ್ ಅಹ್ಮದ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment