ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರ
ಪೊಲೀಸರಿಂದ 3 ಆಯಾಮದಲ್ಲಿ ಸಾಕ್ಷಿಗಳ ವಿಂಗಡಣೆ
ಕೃತ್ಯಕ್ಕೆ ಬಳಸಿದ್ದ ವಾಹನಗಳ ದಾಖಲೆ, DNA ರಿಪೋರ್ಟ್
ನಟ ದರ್ಶನ್ಗೆ ಸದ್ಯ ಢವಢವ ಶುರುವಾಗಿದೆ. ಬೆಂಗಳೂರು ಪರಪ್ಪನ ಮಡಿಲಲ್ಲಿ ರಾಜಾತಿಥ್ಯ ಸ್ವೀಕರಿಸಿ ಹಾಯಾಗಿದ್ದ ದರ್ಶನ್ ಸದ್ಯ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದಾರೆ. ಈ ನಡುವೆ ಇಂದು ಅಥವಾ ನಾಳೆ ಡೆವಿಲ್ ಗ್ಯಾಂಗ್ನ ದೋಷಾರೋಪ ಪಟ್ಟಿಯನ್ನು ಕೋರ್ಟ್ಗೆ ಸಲ್ಲಿಸಲು ಪೊಲೀಸರು ಭರ್ಜರಿ ಸಿದ್ಧತೆ ನಡೆಸಿದ್ದಾರೆ.
ಬೆಂಗಳೂರು ಪರಪ್ಪನ ಅಗ್ರಹಾರ ಜೈಲಲ್ಲಿ ದರ್ಶನ್ಗೆ ಸಿಕ್ಕ ರಾಜಾತಿಥ್ಯದ ಬಳಿಕ ಕೇಸ್ಗೆ ಬಹುದೊಡ್ಡ ತಿರುವೇ ಸಿಕ್ಕಂತಾಗಿದೆ. ಇಡೀ ಪೊಲೀಸ್ ಇಲಾಖೆಯೇ ಅಲ್ಲಾಡಿ ಹೋಗಿದೆ. ಸದ್ಯ ಪರಪ್ಪನ ಮಡಿಲಿನಲ್ಲಿ ಹಾಯಾಗಿದ್ದ ಡೆವಿಲ್ ಗ್ಯಾಂಗ್ನ ಸದಸ್ಯರು ರಾಜ್ಯದ ವಿವಿಧ ಕಾರಾಗೃಹಗಳಿಗೆ ಎತ್ತಂಗಡಿ ಆಗಿದ್ದಾರೆ. ಈಗ ಎಲ್ಲರ ಕಣ್ಣು ನೆಟ್ಟಿರುವುದು ಪೊಲೀಸರ ಆ ಒಂದು ವರದಿ ಮೇಲೆ..
ಇಂದು ಅಥವಾ ನಾಳೆ ಚಾರ್ಜ್ಶೀಟ್ ಸಲ್ಲಿಸುವ ಸಾಧ್ಯತೆ!
ಚಿತ್ರದುರ್ಗದ ರೇಣುಕಾಸ್ವಾಮಿಯ ಬರ್ಬರ ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಸೇರಿ ಒಟ್ಟು 17 ಆರೋಪಿಗಳು ಸದ್ಯ ಜೈಲುಗಳಲ್ಲಿ ಕಂಬಿ ಎಣಿಸುತ್ತಿದ್ದಾರೆ. ಈಗಾಗಲೇ ಪ್ರಕರಣದ ಆಳ-ಅಗಲ ಬಿಡದೇ ಇಂಚಿಂಚೂ ತನಿಖೆ ನಡೆಸಿರುವ ಪೊಲೀಸರು ದರ್ಶನ್ ಗ್ಯಾಂಗ್ನ ಹಣೆಬರಹ ಬರೆದಿದ್ದಾರೆ. ಬರೋಬ್ಬರಿ 4,500 ಪುಟಗಳಲ್ಲಿ ಪಾಪಕೃತ್ಯಗಳ ಲೆಕ್ಕವನ್ನ ಚಿತ್ರಗುಪ್ತನಂತೆ ಪೊಲೀಸರು ರೆಡಿಮಾಡಿದ್ದಾರೆ. ಈ ಚಾರ್ಜ್ಶೀಟ್ಅನ್ನು ಇಂದು ಅಥವಾ ನಾಳೆ ಕೋರ್ಟ್ಗೆ ಸಲ್ಲಿಸುವ ಸಾಧ್ಯತೆ ದಟ್ಟವಾಗಿದೆ. ಪೊಲೀಸರು 3 ಆಯಾಮಗಳಲ್ಲಿ ಸಾಕ್ಷ್ಯಗಳನ್ನು ಡಿವೈಡ್ ಮಾಡಿದ್ದಾರೆ. ಡಿಗ್ಯಾಂಗ್ ವಿರುದ್ಧ ಹೆಕ್ಕಿ ತೆಗೆದಿರುವ ಸಾಕ್ಷ್ಯಗಳನ್ನು ಉಲ್ಲೇಖಿಸಿದ್ದಾರೆ. ಸುಲಭವಾಗಿ ಭೇದಿಸಲಾಗದಂತೆ ಪೊಲೀಸರು ಚಾರ್ಜ್ಶೀಟ್ ಚಕ್ರವ್ಯೂಹ ರಚಿಸಿದ್ದಾರೆ.
ಚಾರ್ಜ್ಶೀಟ್ ‘ಚಕ್ರ’ವ್ಯೂಹ!
ಇನ್ನು ಅದ್ಯಾವಾಗ ನಟ ದರ್ಶನ್ ಬೆಂಗಳೂರು ಜೈಲಿನಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರವಾದ್ರೋ ಅಲ್ಲಿಂದ ಬಳ್ಳಾರಿ ಜೈಲಿನ ಲುಕ್ಕೇ ಚೇಂಜ್ ಆಗಿದೆ. ಭದ್ರತೆಯಲ್ಲೂ ಹಲವು ಮಾರ್ಪಾಡು ಮಾಡಲಾಗಿದೆ. ಈ ನಡುವೆ ಬಳ್ಳಾರಿ ಜೈಲಿಗೆ ಮತ್ತಷ್ಟು ಸಿಸಿಟಿವಿ ಅಳವಡಿಸಲಾಗಿದೆ. ನಾಲ್ವರು ತಾಂತ್ರಿಕ ಸಿಬ್ಬಂದಿ ಬಳ್ಳಾರಿ ಸೆಂಟ್ರಲ್ ಜೈಲ್ ಗೋಡೆಗಳಿಗೆ ಕ್ಯಾಮರಾ ಅವಳವಡಿಸಿದ್ದಾರೆ. ಮುಖ್ಯ ಗೇಟ್ ಮುಂಭಾಗದ ಚಲನವಲನ ಕುರಿತು ಅರಿಯಲು, ಮಾಧ್ಯಮ ಪ್ರತಿನಿಧಿಗಳು ನಿಲ್ಲುವ ಸ್ಥಳ ಹಾಗೂ ಜೈಲ್‌ನ ಮುಖ್ಯ ದ್ವಾರ ಕಾಣುವ ಸ್ಥಳಕ್ಕೆ ಕ್ಯಾಮರಾಗಳು ಲಗ್ಗೆ ಇಟ್ಟಿವೆ.
ಕೊಲೆ ಕೇಸ್ನಲ್ಲಿ ದರ್ಶನ್ ಅರೆಸ್ಟ್ ಆಗಿ ಇಂದಿಗೆ 85 ದಿನಗಳು ಕಳೆದಿವೆ. 90 ದಿನದಲ್ಲಿ ಪೊಲೀಸರು ಚಾರ್ಜ್ಶೀಟ್ ಸಲ್ಲಿಸಬೇಕಿದೆ. ಚಾರ್ಜ್ಶೀಟ್ ಸಲ್ಲಿಕೆಗೆ ಇನ್ನು ಐದೇ ದಿನಗಳು ಬಾಕಿ ಇದೆ. ಆದರೆ ಗೌರಿ-ಗಣೇಶ ಹಬ್ಬದ ಹಿನ್ನೆಲೆ 2 ದಿನ ಮಾತ್ರ ಬಾಕಿ ಇದೆ. ಒಂದ್ವೇಳೆ ಚಾರ್ಜ್ಶೀಟ್ ಸಲ್ಲಿಸದಿದ್ರೆ ಆರೋಪಿಗಳಿಗೆ ಲಾಭವಾಗಲಿದೆ. ಹೀಗಾಗಿ ಇಂದು ಅಥವಾ ನಾಳೆ ಪೊಲೀಸರು ಚಾರ್ಜ್ಶೀಟ್ ಸಲ್ಲಿಸಲೇಬೇಕಾಗಿದೆ.
ಇದನ್ನೂ ಓದಿ:ನಾನು DG ಅಲ್ಲ, ಆದರೆ.. ದರ್ಶನ್ ಬಗ್ಗೆ ಮತ್ತೆ ಮಾತನಾಡಿದ ಸಚಿವ ಜಮೀರ್ ಅಹ್ಮದ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ