Advertisment

ಪ್ರೀತಿಸಿ ಮದ್ವೆಯಾದ ಜೋಡಿಯನ್ನ ಬೇರ್ಪಡಿಸಿದ ಪೊಲೀಸರು! ಪತ್ನಿಗಾಗಿ ಸ್ಟೇಷನ್ ಮುಂದೆ ಪತಿ ಪ್ರತಿಭಟನೆ

author-image
AS Harshith
Updated On
ಪ್ರೀತಿಸಿ ಮದ್ವೆಯಾದ ಜೋಡಿಯನ್ನ ಬೇರ್ಪಡಿಸಿದ ಪೊಲೀಸರು! ಪತ್ನಿಗಾಗಿ ಸ್ಟೇಷನ್ ಮುಂದೆ ಪತಿ ಪ್ರತಿಭಟನೆ
Advertisment
  • ಮದ್ವೆಯಾದ 15 ದಿನಗಳಲ್ಲೇ ಬೇರೆ ಬೇರೆ ಮಾಡಿದ ಪೊಲೀಸರು
  • ಹೆಂಡತಿ ಬೇಕು ಅಂತ ಸ್ಟೇಷನ್ ಮುಂದೆ ಯುವಕನ ಪ್ರತಿಭಟನೆ
  • ರಕ್ಷಣೆ ಕೋರಿ ​​ಠಾಣೆ ಮೆಟ್ಟಿಲೇರಿದ ಜೋಡಿಗೆ ಪೊಲೀಸರೇ ವಿಲನ್

ಪ್ರೀತಿ ಮಾಡಬಾರದು.. ಮಾಡಿದರೇ ಜಗಕೆ ಹೆದರಬಾರದು. ಹೀಗೆ ಅಂದ್ಕೊಂಡೆ ಇಲ್ಲೊಂದು ಜೋಡಿ ಯಾರಿಗೂ ಜಗ್ಗದೇ ಬಗ್ಗದೇ ಪ್ರೇಮಲೋಕದಲ್ಲಿ ಮುಳುಗಿತ್ತು. ಹೀಗೆ ಪ್ರೀತಿ ಮಾಡುತ್ತಾ ಹೆತ್ತವರ ವಿರೋಧದ ಮಧ್ಯೆಯೂ ವಿವಾಹವಾಗಿತ್ತು. ಆದರೀಗ ಯುವ ಜೋಡಿಗೆ ಪೊಲೀಸರೇ ವಿಲನ್ ಆಗಿದ್ದಾರೆ. ನವಜೋಡಿಯನ್ನ ಬೇರ್ಪಡಿಸಿ ಪ್ರಿಯಕರನ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

Advertisment

ಬೇಕೇ ಬೇಕು ನ್ಯಾಯ ಬೇಕು ಎಂಬ ಘೋಷಣೆ. ನಿಷ್ಕಲ್ಮಷ ಪ್ರೀತಿಗೆ ನ್ಯಾಯ ಸಿಗಬೇಕು ಎಂಬ ಪ್ರಾರ್ಥನೆ. ಪೊಲೀಸ್ ಠಾಣೆಯ ಮುಂದೆ ಯುವಕನ ಪ್ರತಿಭಟನೆ. ಇದು ಪ್ರೀತಿಗಾಗಿ ಹೋರಾಟ. ಪ್ರೀತಿಸಿ ಮದುವೆಯಾದ ಹೆಂಡತಿಗಾಗಿ ಪತಿಯ ಆಕ್ರೋಶ.

publive-image

ಪ್ರೀತಿಸಿ ಮದುವೆಯಾದ ಅಂತರ್​ ಧರ್ಮೀಯ ಜೋಡಿ

ಪ್ರಿಯಕರ ಪ್ರದೀಪ್​ ಬಣಕಾರ್ ಪ್ರಿಯತಮೆ​ ತಂಜಿಮ್ ಭಾನುವನ್ನು ಪ್ರೀತಿಸುತ್ತಿದ್ದ. ಕೊನೆಗೆ ಇಬ್ಬರು ಮನವೊಪ್ಪಿಕೊಂಡು ಮದ್ವೆ ಕೂಡ ಆಗಿದ್ದಾರೆ. ಆದರೆ ಅಂತರ್​​ ಧರ್ಮೀಯ ಮದುವೆ ಆಗಿರುವ ಈ ನವಜೋಡಿಗೆ ಈಗ ಧರ್ಮವೇ ಅಡ್ಡಿಯಾಗಿದೆ. ಮದುವೆಯಾದ 15 ದಿನಕ್ಕೆ ಜೋಡಿಹಕ್ಕಿಗಳನ್ನ ಪೊಲೀಸರೇ ಬೇರ್ಪಡಿಸಿರೋ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ದರುಶನ ಕರುಣಿಸಿದ ಹಾಸನಾಂಬೆ.. ಇಂದಿನಿಂದ ನವೆಂಬರ್ 3ರವರೆಗೆ ದೇವಸ್ಥಾನ ಓಪನ್

Advertisment

ಪ್ರೀತಿಗೆ ಪೊಲೀಸರೇ ವಿಲನ್?

ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಮೇಡ್ಲೆರಿ ಗ್ರಾಮದ ಪ್ರದೀಪ್‌ ಬಣಕಾರ್, ಗುತ್ತಲ ಪಟ್ಟಣದ ಅನ್ಯಕೋಮಿನ ಯುವತಿ ತಂಜಿಮ್ ಭಾನು ಪರಸ್ಪರ ಪ್ರೀತಿಸ್ತಿದ್ರು. 3 ವರ್ಷಗಳಿಂದ ಪ್ರೀತಿ-ಪ್ರೇಮದಲ್ಲಿ ಮುಳುಗಿದ್ದ ಪ್ರದೀಪ್ ಬಣಕಾರ್-ತಂಜಿಮ್ ಭಾನು, 15 ದಿನಗಳ ಹಿಂದೆ ಮನೆಬಿಟ್ಟು ಹೋಗಿ ಮದುವೆಯಾಗಿದ್ರು. ಬಳಿಕ ರಕ್ಷಣೆಗಾಗಿ ಹಾವೇರಿ ಮಹಿಳಾ ಠಾಣೆಗೆ ಈ ಜೋಡಿ ಬಂದಿತ್ತು. ಆದ್ರೆ, ರಕ್ಷಣೆ ಕೊಡಬೇಕಾದ ಪೊಲೀಸರೇ ನವಜೋಡಿಯನ್ನ ಬೇರ್ಪಡಿಸಿರುವ ಆರೋಪ ಕೇಳಿಬಂದಿದೆ. ಪ್ರದೀಪ್‌ನಿಂದ ತಂಜೀಮ್‌ನ ಬೇರ್ಪಡಿಸಿ ಮಹಿಳಾ ಸಾಂತ್ವನಕ್ಕೆ ಪೊಲೀಸರೇ ಕಳಿಸಿಕೊಟ್ಟಿದ್ದಾರೆ ಎಂಬ ಆರೋಪವಿದೆ.

publive-image

ಇದನ್ನೂ ಓದಿ: Rain Effect: ಕೆರೆಯಂತಾದ ರಸ್ತೆ, ರಸ್ತೆಯಲ್ಲಿ ಪಲ್ಟಿ ಹೊಡೆದ ಸ್ಕೂಟರ್​ ಸವಾರ.. ಬೆಂಗಳೂರಲ್ಲಿ ಸಾಲು ಸಾಲು ಅವಾಂತರ

ಹೀಗೆ ತನ್ನ ಪತ್ನಿಯನ್ನ ಸಾಂತ್ವನ ಕೇಂದ್ರಕ್ಕೆ ಕಳಿಸಿಕೊಡ್ತಿದ್ದಂತೆ ಪ್ರದೀಪ್ ಬಣಕಾರ್ ಆಕ್ರೋಶದ ಕಟ್ಟೆಯೊಡೆದಿತ್ತು. ಪ್ರೀತಿಸಿ ಮದುವೆಯಾದವಳನ್ನ ಪೊಲೀಸರೇ ಬೇರ್ಪಡಿಸಿದ್ದಾರೆ ಅಂತ ಪೊಲೀಸ್ ಠಾಣೆ ಎದುರು ಪ್ರದೀಪ್ ಪ್ರತಿಭಟನೆ ಮಾಡಿದ್ದಾನೆ. ಪ್ರದೀಪ್ ಹೋರಾಟಕ್ಕೆ ಆತನ ಸ್ನೇಹಿತರೂ ಕೈ ಜೋಡಿಸಿದ್ರು.

Advertisment

ಇನ್ನೂ ತನ್ನ ಪತ್ನಿಯನ್ನ ಕಳಿಸಿಕೊಡುವಂತೆ ಪ್ರದೀಪ್ ಬಣಕಾರ್, ಎಸ್‌ಪಿ ಅಂಶುಕುಮಾರ್‌ಗೂ ಮನವಿ ಮಾಡಿದ್ದಾನೆ. ಒಟ್ಟಾರೆ, ಯುವತಿಯ ಪೋಷಕರ ಒತ್ತಾಯವೋ? ಯುವಕನ ಕಡೆಯವರ ಒತ್ತಡವೋ? ಪೊಲೀಸರು ನವಜೋಡಿಯನ್ನ ಬೇರ್ಪಡಿಸಿದೆ. ಆದ್ರೆ, ಜೋಡಿಹಕ್ಕಿಯನ್ನ ಬೇರ್ಪಡಿಸಿರೋ ಹಿಂದಿನ ಕಾರಣ ಏನು ಅನ್ನೋದನ್ನ ಪೊಲೀಸರೇ ಹೇಳಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment