newsfirstkannada.com

×

ರಾಮೇಶ್ವರಂ ಕೆಫೆ ಕೇಸ್​​ಗೆ ಸ್ಫೋಟಕ ಟ್ವಿಸ್ಟ್​​.. ಬಾಂಬರ್​ ಮಾಸ್ಟರ್​​ ಪ್ಲಾನ್​​ಗೆ ಬೆಚ್ಚಿಬಿದ್ದ ಪೊಲೀಸ್ರು!

Share :

Published March 7, 2024 at 8:15pm

    ರಾಮೇಶ್ವರಂ ಕೆಫೆ ಬ್ಲಾಸ್ಟ್​ ಶಂಕಿತನ ಮಹತ್ವದ ಸುಳಿವು

    ಬಾಂಬ್​ ಬ್ಲಾಸ್ಟ್​ ಬಳಿಕ ಬಸ್​ನಲ್ಲೇ ಶಂಕಿತ ಪ್ರಯಾಣ!

    ಮಸೀದಿ ಬಳಿ ಬಟ್ಟೆ ಬದಲು ಟೋಪಿ ಬಿಟ್ಟು ಎಸ್ಕೇಪ್​

ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟ್​ ಪ್ರಕರಣ ಶಂಕಿತ ಉಗ್ರನ ಜಾಡು ಹಿಡಿದು ಹೋಗಿರುವ ಸಿಸಿಬಿ, ಎನ್​ಐಎ ತಂಡಕ್ಕೆ ಮಹತ್ವದ ಸುಳಿವು ಸಿಕ್ಕಿದೆ. ಬಾಂಬ್​ ಬ್ಲಾಸ್ಟ್​ ಬಳಿಕ ಆತ ಬಸ್​ನಲ್ಲೇ ಓಡಾಡಿದ್ದು, ಬಳಿಕ ಮಸೀದಿ ಬಳಿ ಬಟ್ಟೆ ಬದಲಿಸುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸುಳಿವು ಸಿಕ್ಕ ಜಾಗದಲ್ಲೇ ಜಾಲಾಡಿರುವ ಎನ್​ಐಎ ಶಂಕಿತ ಬಾಂಬರ್​ನ ರೇಖಾ ಚಿತ್ರವನ್ನು ಬಿಡುಗಡೆ ಮಾಡಿ ತನಿಖೆ ಮತ್ತಷ್ಟು ಚುರುಕುಗೊಳಿಸಿದೆ.

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಮಹತ್ವದ ಸುಳಿವು ಪತ್ತೆ
ಬಸ್‌ನಲ್ಲಿ ಮಾಸ್ಕ್​​ ಧರಿಸದೇ ಶಂಕಿತ ಉಗ್ರ ಪ್ರಯಾಣಿಸಿದ ದೃಶ್ಯ ಸೆರೆ

ಬೆಂಗಳೂರು ಪೊಲೀಸರಿಗೆ ಬಿಗ್​ ಚಾಲೆಂಜ್​ ಆಗಿರುವ ರಾಮೇಶ್ವರ ಕೆಫೆ ಬ್ಲಾಸ್ಟ್​ ಪ್ರಕರಣದ ಶಂಕಿತ ಉಗ್ರನ ಬಗ್ಗೆ ಮತ್ತಷ್ಟು ಸುಳಿವುಗಳು ಪತ್ತೆಯಾಗಿವೆ. ಒಂದೆಡೆ ಸಿಸಿಬಿ ಪೊಲೀಸರು, ಮತ್ತೊಂದೆಡೆ ಎನ್​ಐಎ ಅಧಿಕಾರಿಗಳು ಆರೋಪಿಯ ಸುಳಿವು ಸಿಕ್ಕ ಜಾಗದಲ್ಲೆಲ್ಲ ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ. ಇದೀಗ ಸತತ 6 ದಿನದ ಬಳಿಕ ಬಾಂಬರ್‌ನ ಸುಳಿವನ್ನು ಸಿಸಿಬಿ ಹಾಗೂ ಎನ್‌ಐಎ ತಂಡ ಪತ್ತೆ ಹಚ್ಚಿದೆ.

ಬಿಎಂಟಿಸಿ, ವೋಲ್ವೋ ಬಸ್​ನಲ್ಲಿ ಶಂಕಿತ ಆರೋಪಿ ಓಡಾಟ
ಸಿಸಿ ಕ್ಯಾಮರಾದ ಕಣ್ಣಿಗೆ ಬೀಳದಂತೆ ಮರೆಮಾಚಿ ಪ್ರಯಾಣ

ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ ಸಂಬಂಧಿಸಿದಂತೆ ಎನ್​ಐಎ ತನಿಖೆ ಚುರುಕುಗೊಂಡಿದೆ. ಶಂಕಿತ ಆರೋಪಿಯ ಚಲನವನಲದ ಮತ್ತಷ್ಟು ಸಿಸಿಟಿವಿ ದೃಶ್ಯಗಳು ಲಭ್ಯವಾಗಿವೆ. ಈತ ತನ್ನ ಹೆಜ್ಜೆ ಗುರುತು ಸಿಗದರಲೆಂದು ಯಾವೆಲ್ಲ ರೀತಿ ಪ್ಲಾನ್​ ಮಾಡಿದ್ದ ಅನ್ನೋದು ಈ ಸಿಸಿ ಕ್ಯಾಮರಾದ ದೃಶ್ಯಗಳನ್ನ ಗಮನಿಸಿದ್ರೆ ಗೊತ್ತಾಗುತ್ತೆ. ಬಿಎಂಟಿಸಿ ವೋಲ್ವೋ ಬಸ್​ಗಳಲ್ಲಿ ಶಂಕಿತ ಪ್ರಯಾಣ ಮಾಡಿರುವ ಮತ್ತಷ್ಟು ದೃಶ್ಯಗಳನ್ನು ತನಿಖಾ ತಂಡ ಬಹಿರಂಗ ಪಡಿಸಿದೆ. ವೋಲ್ವೋ ಬಸ್​ವೊಂದನ್ನು ಹತ್ತಿದ ಶಂಕಿ, ಸೀಟ್​ ಖಾಲಿ ಇದ್ದರೂ ಕೂಡ ಕುಳಿತುಕೊಂಡಿಲ್ಲ. ಬಳಿಕ ಸಿಸಿ ಕ್ಯಾಮರಾ ಇರೋದನ್ನು ಗಮನಿಸಿದ ಆರೋಪಿ, ಕೂಡಲೇ ಅಲರ್ಟ್​ ಆಗಿ, ಸಿಸಿ ಕ್ಯಾಮರಾದಲ್ಲಿ ಸೆರೆಯಾಗದಂತೆ ಮುಂದಿನ ಡೋರ್​ ಬಳಿ ಬಂದಿದ್ದಾನೆ. ಪ್ರತಿ ಬಸ್​ನಲ್ಲೂ ಸಂಚಾರ ಮಾಡುವಾಗ ಒಂದೊಂದು ವೇಷ ಬದಲಿಸಿದ್ದಾನೆ. ಒಮ್ಮೆ ಮುಖಕ್ಕೆ ಮಾಸ್ಕ್​ ಧರಿಸಿದ್ರೆ ಮತ್ತೊಮ್ಮೆ ಮಾಸ್ಕ್​ ಇಲ್ಲದೇ ಪ್ರಯಾಣ ಮಾಡಿದ್ದಾನೆ.

ಪೊಲೀಸರ ದಿಕ್ಕು ತಪ್ಪಿಸಲು ಶಂಕಿತ ಮಾಡಿದ್ದ ಮಾಸ್ಟರ್​ ಪ್ಲಾನ್​
ಮಸೀದಿ ಬಳಿ ಬಟ್ಟೆ ಬದಲಿಸಿ ಟೋಪಿ ಬಿಟ್ಟೋಗಿದ್ದ ಬಾಂಬರ್​

ಕುಂದಲಹಳ್ಳಿಯ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಮಹತ್ವದ ಸುಳಿವು ಪೊಲೀಸರಿಗೆ ಪತ್ತೆಯಾಗಿದೆ. ನ್ಯೂಸ್‌ ಫಸ್ಟ್‌ಗೆ ಲಭ್ಯವಾದ ಎಕ್ಸ್‌ಕ್ಲೂಸಿವ್ ಮಾಹಿತಿ ಪ್ರಕಾರ ಕೇವಲ ಬಸ್ ಅಷ್ಟೇ ಅಲ್ಲ ಹೂಡಿ ಬಳಿಯ ಮಸೀದಿಯೊಂದರ‌ ಬಳಿ ಬಟ್ಟೆ ಕೂಡ ಬದಲಿಸಿ ಬೇರೆ ಬಟ್ಟೆ ಧರಿಸಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.. ಈ ವೇಳೆ ಪೊಲೀಸರ ದಿಕ್ಕು ತಪ್ಪಿಸಲು ಮಸೀದಿ ಬಳಿ ಟೋಪಿ ಬಿಟ್ಟು ಹೋಗಿದ್ದಾನೆ. ಆ ಟೋಪಿಯನ್ನು ಪೊಲೀಸರು ಸೀಜ್​ ಮಾಡಿದ್ದಾರೆ.

ಹೂಡಿ ಮಸೀದಿ ಬಳಿ ಬಟ್ಟೆ ಬದಲಿಸಿ ತುಮಕೂರಿಗೆ ಪ್ರಯಾಣ

ಬಾಂಬ್​ ಬ್ಲಾಸ್ಟ್​ ಬಳಿಕ ಬಸ್​ನಲ್ಲಿ ಹೂಡಿಗೆ ತೆರಳಿ ಅಲ್ಲಿ ಮಸೀದಿ ಬಳಿ ಬಟ್ಟೆ ಬದಲಿಸಿ ತುಮಕೂರಿಗೆ ಪ್ರಯಾಣ ಮಾಡಿದ್ದಾನೆ. ಬಳಿಕ ತುಮಕೂರಿನ ಮೂಲಕ ಬಳ್ಳಾರಿ ಬಸ್​ ನಿಲ್ದಾಣ ತಲುಪಿದ್ದಾನೆ. ಮಾ.1ರ ರಾತ್ರಿ 8.58ಕ್ಕೆ ಉಗ್ರನ ಓಡಾಟ ಪತ್ತೆ ಆಗಿದ್ದು, ಮುಂಜಾನವೆರಗೂ ಬಳ್ಳಾರಿಯ ಬಸ್​ ನಿಲ್ದಾಣದಲ್ಲೇ ಶಂಕಿತ ಇದ್ದಾನೆ. ಇನ್ನು ತುಮಕೂರಿನಲ್ಲಿ ಪರಿಶೀಲನೆ ನಡೆಸಿ, ಎನ್​ಐಎ ಅಧಿಕಾರಿಗಳು ಬಳ್ಳಾರಿಗೆ ತಲುಪುವಷ್ಟರಲ್ಲಿ ಬಾಂಬರ್​ ಮಂತ್ರಾಯಲ-ಗೋಕರ್ಣ ಮಾರ್ಗದ ಬಸ್​ಮೂಲಕ ಭಟ್ಕಳಕ್ಕೆ ಅಥವಾ ಬೀದರ್​ಗೆ ತೆರಳಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಬಳ್ಳಾರಿಯ ಬಸ್​ನಿಲ್ದಾಣದಲ್ಲಿ ಎನ್​ಐಎ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಎನ್​ಐಎದಿಂದ ಶಂಕಿತ ಬಾಂಬರ್​ನ ರೇಖಾ ಚಿತ್ರ ಬಿಡುಗಡೆ

ಬಾಂಬರ್​ನ ಜಾಲವನ್ನು ಹುಡುಕಾಡುತ್ತಿರುವ ಎನ್​ಐಎ ಅಧಿಕಾರಿಗಳು ಸುಳಿವು ಸಿಕ್ಕ ಜಾಗಗಳಲೆಲ್ಲಾ ತನಿಖೆ ನಡೆಸುತ್ತಿದೆ. ಸಿಸಿಕ್ಯಾಮರಾದಲ್ಲಿ ಸಿಕ್ಕಿರುವ ದೃಶ್ಯದ ಆಧಾರ ಮೇಲೆ ಶಂಕಿತ ಆರೋಪಿಯ ಸ್ಕೆಚ್​ ಅನ್ನು ಎನ್​ಐಎ ಅಧಿಕಾರಿಗಳು ಬಿಡುಗಡೆಗೊಳಿಸಿದ್ದಾರೆ. ಮಾಸ್ಕ್​ ಮತ್ತು ಮಾಸ್ಕ್​ ಇಲ್ಲದ ಶಂಕಿತ ರೇಖಾ ಚಿತ್ರವನ್ನು ಬಿಡುಗಡೆ ಮಾಡಿದ್ದು, ಮಾಹಿತಿ ಸಿಕ್ಕ ಕೂಡಲೇ ಸ್ಥಳೀಯ ಪೊಲೀಸರಿಗೆ ತಿಳಿಸುವಂತೆ ಸೂಚನೆ ನೀಡಿದ್ದಾರೆ. ಒಟ್ಟಾರೆ. ಸರ್ಕಾರಕ್ಕೆ ಸವಾಲಾಗಿರುವ ಶಂಕಿತನನ್ನು ಆದಷ್ಟು ಬೇಗ ಹೆಡೆಮುರಿಕಟ್ಟಲು ಸಿಸಿಬಿ ಮತ್ತು ಎನ್​ಐಎ ಸರ್ವ ಸನ್ನದ್ಧವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮೇಶ್ವರಂ ಕೆಫೆ ಕೇಸ್​​ಗೆ ಸ್ಫೋಟಕ ಟ್ವಿಸ್ಟ್​​.. ಬಾಂಬರ್​ ಮಾಸ್ಟರ್​​ ಪ್ಲಾನ್​​ಗೆ ಬೆಚ್ಚಿಬಿದ್ದ ಪೊಲೀಸ್ರು!

https://newsfirstlive.com/wp-content/uploads/2024/03/WhatsApp-Image-2024-03-07-at-10.07.28-AM.jpeg

Load More