newsfirstkannada.com

ಏನಾಯ್ತು ಈಗ.. ಸೋನು ಶ್ರೀನಿವಾಸ್ ಗೌಡ 4 ದಿನ ಪೊಲೀಸ್‌ ಕಸ್ಟಡಿಗೆ; ಮುಂದೇನು?

Share :

Published March 22, 2024 at 5:27pm

Update March 22, 2024 at 5:33pm

    ಹೆಚ್ಚಿನ ವಿಚಾರಣೆಗೆ ಸೋನು ಗೌಡ 4 ದಿನ ಪೊಲೀಸ್ ವಶಕ್ಕೆ

    ಕಾನೂನು ಬಾಹಿರವಾಗಿ 8 ವರ್ಷದ ಮಗುವನ್ನು ದತ್ತು ಪಡೆದ ಪ್ರಕರಣ

    ಮಗು ಹೇಳಿಕೆ ದಾಖಲಿಸಿದ ಬಳಿಕ ಸ್ಥಳ ಮಹಜರು ಮಾಡಲಿರೋ ಪೊಲೀಸ್

ಬೆಂಗಳೂರು: ಬಿಗ್​ಬಾಸ್ ಮಾಜಿ ಸ್ಪರ್ಧಿ ಹಾಗೂ ಸೋಷಿಯಲ್ ಮೀಡಿಯಾ ಸೆಲೆಬ್ರಿಟಿಯಾಗಿರೋ ಸೋನು ಶ್ರೀನಿವಾಸ್ ಗೌಡ ಅವರಿಗೆ ಸಂಕಷ್ಟ ಎದುರಾಗಿದೆ. ಅನಧಿಕೃತವಾಗಿ ಮನೆಯಲ್ಲಿ ಮಗುವನ್ನು ಇಟ್ಟುಕೊಂಡಿದ್ದ ಆರೋಪದಲ್ಲಿ ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನುಗೌಡ ಅವರನ್ನು ಕೋರ್ಟ್​ಗೆ ಹಾಜರು ಪಡಿಸಿದ್ದು ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ.

ಇದನ್ನು ಓದಿ: ಮದ್ವೆಯಾಗದೆ ಮಗುವನ್ನ ನೋಡಿಕೊಂಡಿರ್ತಿನಿ.. ಅರೆಸ್ಟ್ ಆದ ಸೋನುಗೌಡ ಹೇಳಿದ್ದೇನು?

ಸೋನು ಶ್ರೀನಿವಾಸ್ ಗೌಡರನ್ನು ಪೊಲೀಸರು ನೃಪತುಂಗ ರಸ್ತೆಯ ಬೆಂಗಳೂರು ಗ್ರಾಮಾಂತರ CJM ಕೋರ್ಟ್​ಗೆ ಬ್ಯಾಡರಹಳ್ಳಿ ಪೊಲೀಸರು ಸೋನು ಗೌಡರನ್ನು ಹಾಜರುಪಡಿಸಿದ್ದರು. ಹೆಚ್ಚಿನ ವಿಚಾರಣೆಗೆಂದು 4 ದಿನ ಸೋನು ಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಸೋನು ಶ್ರೀನಿವಾಸ್ ಗೌಡರನ್ನು ನ್ಯಾಯಾಧೀಶರ ಮುಂದೆ ಪೊಲೀಸರು ಹಾಜರು ಪಡಿಸಿದ್ದಾರೆ. ಹೆಚ್ಚಿನ ತನಿಖೆ ಹಾಗೂ ಮಹಜರ್ ನಡೆಸಬೇಕಾದ ಹಿನ್ನೆಲೆ ಸೋನು ಗೌಡ ಪೊಲೀಸ್​ ಕಸ್ಟಡಿಯಲ್ಲಿ ಇರಬೇಕಾಗುತ್ತದೆ. ಆರೋಪಿ ಸ್ಥಾನದಲ್ಲಿರೋ ಸೋನು ಗೌಡ ಸದ್ಯಕ್ಕೆ ಮಹಿಳಾ ಸಾಂತ್ವನ ನಿಲಯ ಆಶ್ರಯ ಪಡೆಯಲಿದ್ದಾರೆ. ನಾಳೆ ಸೋನು ಗೌಡರನ್ನು ರಾಯಚೂರಿಗೆ ಕರೆದುಕೊಂಡು ಹೋಗಿ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತದೆ.

ಏನಿದು ಪ್ರಕರಣ?
ಸಾಮಾಜಿಕ ಜಾಲತಾಣಲ್ಲಿ ಸಖತ್​ ಫೇಮಸ್ ಆಗಿದ್ದ ರೀಲ್ಸ್ ಸ್ಟಾರ್‌ ಸೋನು ಶ್ರೀನಿವಾಸ ಗೌಡ ಅವರು ಅನಧಿಕೃತವಾಗಿ ತಮ್ಮ ಮನೆಯಲ್ಲಿ ಮಗು ದತ್ತು ಪಡೆದುಕೊಂಡು ಇಟ್ಟುಕೊಂಡಿದ್ದರು. ಹೀಗಾಗಿ ಇದೇ ಆರೋಪದ ಅಡಿ ಮಕ್ಕಳ ಮತ್ತು ಮಹಿಳಾ ಸುರಕ್ಷತಾ ಅಧಿಕಾರಿ ಪೊಲೀಸರಿಗೆ ದೂರು ನೀಡಿದ್ದರು. ಮಗುವನ್ನು ದತ್ತು ಪಡೆದು ಮಗುವಿನ ಜೊತೆಗೆ ರೀಲ್ಸ್‌ ಮಾಡಿದ್ದು ಕಾನೂನಿನ ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಅವರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಸೋನು ಶ್ರೀನಿವಾಸ ಗೌಡ ಅವರ ಹೇಳಿಕೆಯನ್ನು ಪೊಲೀಸರು ದಾಖಲು ಮಾಡಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಏನಾಯ್ತು ಈಗ.. ಸೋನು ಶ್ರೀನಿವಾಸ್ ಗೌಡ 4 ದಿನ ಪೊಲೀಸ್‌ ಕಸ್ಟಡಿಗೆ; ಮುಂದೇನು?

https://newsfirstlive.com/wp-content/uploads/2024/03/sonu-gowda-3-1.jpg

Load More