newsfirstkannada.com

ಮದ್ವೆಯಾಗದೆ ಮಗುವನ್ನ ನೋಡಿಕೊಂಡಿರ್ತಿನಿ.. ಅರೆಸ್ಟ್ ಆದ ಸೋನುಗೌಡ ಹೇಳಿದ್ದೇನು?

Share :

Published March 22, 2024 at 12:05pm

Update March 22, 2024 at 12:24pm

    ಗಾರೆ ಕೆಲಸ ಮಾಡ್ತಿದ್ದ ದಂಪತಿ ಮಗಳು ಮನೆಗೆ ಬಂದು ಆಪ್ತಳಾದಳು

    ನಾನು ಬಾಲಕಿಯನ್ನು ದತ್ತು ತೆಗೆದುಕೊಳ್ಳಲು ಸಿದ್ಧತೆ ಕೂಡ ಮಾಡಿದ್ದೆ

    ದತ್ತು ತೆಗೆದುಕೊಳ್ಳುವ ಪ್ರೋಸೆಸ್ ಇಷ್ಟು ದೊಡ್ಡದು ಇದೆ ಎಂದು ನನಗೆ ಗೊತ್ತಿರಲಿಲ್ಲ

ಬೆಂಗಳೂರು: ಹೆಣ್ಣು ಮಗುವನ್ನ ದತ್ತು ತೆಗೆದುಕೊಳ್ಳುವಲ್ಲಿ ಕಾನೂನು ಉಲ್ಲಂಘಿಸಿರುವ ಆರೋಪದಲ್ಲಿ ರೀಲ್ಸ್ ಸ್ಟಾರ್‌ ಸೋನುಗೌಡ ಅವರನ್ನ ಅರೆಸ್ಟ್ ಮಾಡಲಾಗಿದೆ. ಮಕ್ಕಳ ಮತ್ತು ಮಹಿಳಾ ಕಲ್ಯಾಣ ಅಧಿಕಾರಿ ಈ ಬಗ್ಗೆ ದೂರು ನೀಡಿದ್ದು, ಪೊಲೀಸರು ಸೋನು ಗೌಡ ಅವರ ವಿಚಾರಣೆ ನಡೆಸಿದ್ದಾರೆ.

ಪೊಲೀಸರ ವಿಚಾರಣೆ ವೇಳೆ ನಟಿ ಸೋನು ಗೌಡ ಅವರು ಅಪಾರ್ಟ್‌ಮೆಂಟ್‌ ಬಳಿ ಗಾರೆ ಕೆಲಸ ಮಾಡ್ತಿದ್ದ ದಂಪತಿಯ ಮಗಳು ಮನೆಗೆ ಬಂದು ಆಟ ಆಡುತ್ತಾ ಆಪ್ತಳಾಗಿದ್ದಳು. ಅಲ್ಲಿಂದ ಊರಿಗೆ ಹೋದಾಗಲೂ ಆ ಹುಡುಗಿಗೆ ಹುಷಾರಿಲ್ಲದಾಗ ಕೂಡ ಅಕ್ಕನಿಗೆ ಕರೆ ಮಾಡಿ ಎಂದು ಹೇಳಿ ಮಾತಾಡಿದ್ದಳು. ಹೀಗಾಗಿ ಮಗುವನ್ನ ನಾನೇ ಸಾಕಿಕೊಳ್ಳೊದಾಗಿ ಹೇಳಿ ರಾಯಚೂರಿನಿಂದ ಕರೆದುಕೊಂಡು ಬಂದಿದ್ದೇನೆ ಎಂದು ಸೋನು ಗೌಡ ಹೇಳಿದ್ದಾರೆ.

ಇದನ್ನೂ ಓದಿ: ಸೋನು ಗೌಡ ಅರೆಸ್ಟ್; ಮಗು ದತ್ತು ಪಡೆಯಲು ನಿಯಮ ಏನು ಹೇಳುತ್ತೆ.. ಯಾರೆಲ್ಲ ಪಡೆಯಹುದು?

ನಾನು ಬಾಲಕಿಯನ್ನು ದತ್ತು ತೆಗೆದುಕೊಳ್ಳಲು ಸಿದ್ಧತೆ ಕೂಡ ಮಾಡಿದ್ದೆ ಎಂದಿರುವ ಸೋನುಗೌಡ ಅವರು ನಾನು ಮದುವೆ ಆಗದೆ ಮಗುವನ್ನ ನೋಡಿಕೊಂಡಿರ್ತಿನಿ ಎಂದು ಹೇಳಿದ್ದಾರೆ. ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ಬಂದ ಹಣವನ್ನ ಆಕೆಯ ಜೀವನ ರೂಪಿಸಲು ಉಪಯೋಗಿಸ್ತಿನಿ. ದತ್ತು ತೆಗೆದುಕೊಳ್ಳುವ ಪ್ರೋಸೆಸ್ ಇಷ್ಟು ದೊಡ್ಡದು ಇದೆ ಎಂದು ನನಗೆ ಗೊತ್ತಿರಲಿಲ್ಲ ಎಂದು ವಿಚಾರಣೆ ವೇಳೆ ಸೋನು ಗೌಡ ಅವರು ಹೇಳಿಕೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮದ್ವೆಯಾಗದೆ ಮಗುವನ್ನ ನೋಡಿಕೊಂಡಿರ್ತಿನಿ.. ಅರೆಸ್ಟ್ ಆದ ಸೋನುಗೌಡ ಹೇಳಿದ್ದೇನು?

https://newsfirstlive.com/wp-content/uploads/2024/03/Sonu-Gowda-2.jpg

Load More