Advertisment

‘ಮುಂದಿನ ಚುನಾವಣೆಯಲ್ಲೂ ಸಿದ್ದರಾಮಯ್ಯ ಸ್ಪರ್ಧೆ’.. ಸಚಿವ ಬೈರತಿ ಸುರೇಶ್ ಏನ್ ಹೇಳಿದರು?

ಮುಂದಿನ ಚುನಾವಣೆಗೂ ಸಿದ್ದರಾಯಮಯ್ಯ ಸ್ಪರ್ಧೆ ಮಾಡ್ತಾರೆ ಅಂತ ಅವರ ಶಿಷ್ಯ, ಸಚಿವ ಬೈರತಿ ಸುರೇಶ್ ಹೇಳಿಕೆ ನೀಡಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಸ್ಪರ್ಧಿಸುವುದು ಖಚಿತ ಅಂತ ಕಡ್ಡಿ ಮುರಿದಂತೆ ಮಾತನಾಡಿದ್ದಾರೆ.

author-image
Bhimappa
Bhyrati_Suresh_CM
Advertisment

ಕಾಂಗ್ರೆಸ್‌ನಲ್ಲಿ ಕುರ್ಚಿ ಕಿತ್ತಾಟ ಡೆಲ್ಲಿ ತಲುಪಲು ವೇದಿಕೆ ಸಜ್ಜಾಗುತ್ತಿದೆ. ಇದರ ಮಧ್ಯೆ ಸಿಎಂ, ಡಿಸಿಎಂ ಎರಡು ಬಣಗಳು ಪಟ್ಟದ ಆಟದಲ್ಲಿ ಮಾತಿನ ಪೈಪೋಟಿಯಲ್ಲಿ ನಿರತವಾಗಿವೆ. ತಮ್ಮ ತಮ್ಮ ನಾಯಕರ ಪರ ಬ್ಯಾಟಿಂಗ್ ಮಾಡುತ್ತಲೇ ಇದ್ದಾರೆ. ಹೈಕಮಾಂಡ್ ನಾಯಕರ ನೋಟಿಸ್ ಚಾಟಿಗೂ ಬಗ್ಗದೇ ಹೇಳಿಕೆ ನೀಡ್ತಿದ್ದಾರೆ. ಇದೀಗ ಸಚಿವ ಬೈರತಿ ಸುರೇಶ್ ಒಂದು ಹೆಜ್ಜೆ ಮುಂದೆ ಹೋಗಿ ಮುಂದಿನ ಅವಧಿಯ ಬಗ್ಗೆಯೂ ಹೊಸ ವರಸೆ ತೆಗೆದಿದ್ದಾರೆ.

Advertisment

ಕರ್ನಾಟಕದಲ್ಲಿ ಸಿದ್ದರಾಮಯ್ಯ ಅಂದ್ರೇನೆ ಗತ್ತು. ಗೈರತ್ತು. ತಾಕತ್ತು. ಸಿದ್ದು ಶಕ್ತಿಯೇ ಅಂಥದ್ದು. ಮತ ಕಿತ್ತು ತರುವ ಮತ ಸಮೀಕರಣದ ಚಾಣಾಕ್ಷ್ಯತನ ಶಕ್ತಿ-ಸಾಮರ್ಥ್ಯ, ಸಿದ್ದುಗೆ ಸಿದ್ದುನೇ ಸಾಟಿ. ಈಗ ಅದೇ ಸಿದ್ದು ಶಕ್ತಿ ಸಾಮರ್ಥ್ಯವನ್ನೇ ಸಿಎಂ ಪಡೆ ದಾಳವಾಗಿ ಇಟ್ಟಿದೆ. ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಅನಿವಾರ್ಯ ಅನ್ನೋ ಮಾತನ್ನೇ ಬಹುತೇಕ ಸಚಿವರು, ಶಾಸಕರು ಅಭಿಪ್ರಾಯ ಪಟ್ಟಿದ್ದಾರೆ. ಇದೀಗ ಆ ಲಿಸ್ಟ್‌ಗೆ ಮತ್ತೊಬ್ಬರ ಸೇರ್ಪಡೆಯಾಗಿದೆ.

Bhyrati_Suresh

ಸಿಎಂ ಸ್ಪರ್ಧೆಯ ಬಗ್ಗೆ ಸಚಿವ ಬೈರತಿ ಸುರೇಶ್ ಹೇಳಿಕೆ

ಸಿದ್ದರಾಮಯ್ಯ ರಾಜಕೀಯದ ಕೊನೆಘಟ್ಟದಲ್ಲಿದ್ದಾರೆ. ಮುಂದಿನ ಬಾರಿ ಸ್ಪರ್ಧೆ ಮಾಡಲ್ಲ ಅನ್ನೋ ಮಾತನ್ನ ಅವರ ಪುತ್ರ ಯತೀಂದ್ರ ಕಳೆದ ವಾರವಷ್ಟೇ ಹೇಳಿದ್ರು. ಇದೇ ಕೊನೆಯ ಚುನಾವಣೆ ಎಂಬ ಸುಳಿವು ಕೊಟ್ಟಿದ್ದರು. ಸ್ವತಃ ಸಿದ್ದರಾಮಯ್ಯ ಕೂಡ ಇದೇ ಕೊನೆ ಚುನಾವಣೆ ಅಂತ ಎಲೆಕ್ಷನ್ ಟೈಮ್‌ನಲ್ಲಿ ಮಾತನಾಡಿದರು. ಆದ್ರೀಗ ಮುಂದಿನ ಚುನಾವಣೆಗೂ ಸಿದ್ದರಾಯಮಯ್ಯ ಸ್ಪರ್ಧೆ ಮಾಡ್ತಾರೆ ಅಂತ ಅವರ ಶಿಷ್ಯ, ಸಚಿವ ಬೈರತಿ ಸುರೇಶ್ ಹೇಳಿಕೆ ನೀಡಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಸ್ಪರ್ಧಿಸುವುದು ಖಚಿತ ಅಂತ ಕಡ್ಡಿ ಮುರಿದಂತೆ ಮಾತನಾಡಿದ್ದಾರೆ. 

ಸಿಎಂ ಸಿದ್ದರಾಮಯ್ಯ ಅವರು 2028ಕ್ಕೂ ಚುನಾವಣೆಗೆ ಸ್ಪರ್ಧೆ ಮಾಡುತ್ತಾರೆ. ಎಲ್ಲರೂ ನಾವು ಚೆನ್ನಾಗಿಯೇ ಇದ್ದೇವೆ. ಯಾವಾಗಲೂ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರು ಒಂದೇ. ನಾವು ಎಲ್ಲರೂ ಕಾಂಗ್ರೆಸ್​ ಪಕ್ಷದ ಕಟ್ಟಾಳುಗಳು. ಹೈಕಮಾಂಡ್ ಏನು ಹೇಳುತ್ತದೆ ಆ ನಿರ್ಧಾರಕ್ಕೆ ಬರೋಣ. ಸಿಎಂ, ಡಿಸಿಎಂ, ಪಕ್ಷದ ಅಧ್ಯಕ್ಷರು ಯಾರು ಆಗಬೇಕು ಎನ್ನುವುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಜಿಬಿಎ ಎಲೆಕ್ಷನ್ ಬರುತ್ತಿದೆ. ಪಕ್ಷದ ಕಾರ್ಯಕರ್ತರು ಎಲ್ಲ ವೈಮನಸ್ಸು ಮರೆತು ಕೆಲಸ ಮಾಡಬೇಕು. 

Advertisment

ಬೈರತಿ ಸುರೇಶ್, ಸಚಿವ 

ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ ಹೈ ನಿರ್ಧಾರ!

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮತ್ತು ಸಂಪುಟ ಪುನಾರಚನೆ ವಿಚಾರ ಸದ್ದು ಮಾಡ್ತಿದೆ. ಇದೇ ವಿಚಾರವಾಗಿ ಮಾತನಾಡಿರೋ ಸಚಿವ ಬೈರತಿ ಸುರೇಶ್, ಈ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು ಅಂತ  ಹೇಳಿಕೆ ನೀಡಿದ್ದಾರೆ. 

ಇದನ್ನೂ ಓದಿ:ಅಂತಿಮ ಘಟ್ಟಕ್ಕೆ ಬಂತಾ ಸಿದ್ದರಾಮಯ್ಯ, DK ಶಿವಕುಮಾರ್ ನಡುವಿನ ಅಧಿಕಾರ ಸಮರ.. ಕ್ಲೈಮ್ಯಾಕ್ಸ್​​..?

Siddaramaiah (5)

ಜಿಬಿಎ ಚುನಾವಣೆಗೆ ಸಿದ್ಧರಾಗುವಂತೆ ಬೈರತಿ ಸುರೇಶ್ ಕರೆ

ಜಿಬಿಎ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಿದ್ಧರಾಗಬೇಕು. ಯಾವುದೇ ವೈಮಸ್ಸು ಇದ್ದರೂ ಅದನ್ನ ಬಗೆಹರಿಸಿಕೊಂಡು ಪಕ್ಷದ ಅಭ್ಯರ್ಥಿಗಳು ಗೆಲ್ಲುವಂತೆ ಮಾಡಬೇಕು ಅಂತ ಸಚಿವ ಬೈರತಿ ಸುರೇಶ್ ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದ್ರು.

Advertisment

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಸ್ಪರ್ಧಿಸ್ತಾರೆ ಅಂತ ಬೈರತಿ ಸುರೇಶ್ ಹೇಳ್ತಿದ್ದಾರೆ. ಈಗಲೇ ಸಿಎಂ ಪಟ್ಟಕ್ಕಾಗಿ ಪೈಪೋಟಿ ನಡೀತಿದೆ. ಇದೆಲ್ಲದರ ಮಧ್ಯೆ ನವೆಂಬರ್ ಕ್ರಾಂತಿಯಲ್ಲಿ ಸಿಎಂ ಪಟ್ಟ ಉಳಿಸಿಕೊಳ್ತಾರಾ? ಐದು ವರ್ಷವೂ ಅವರೇ ಸಿಎಂ ಆಗಿರ್ತಾರಾ? ವರ್ಷಾಂತ್ಯಕ್ಕೆ ಗೊತ್ತಾಗಲಿದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

DK Shivakumar CM SIDDARAMAIAH
Advertisment
Advertisment
Advertisment