/newsfirstlive-kannada/media/media_files/2025/09/15/cm_siddaramaiah-6-2025-09-15-22-51-58.jpg)
ನವೆಂಬರ್ ಕ್ರಾಂತಿಯ ಚರ್ಚೆ, ದಿನಕ್ಕೊಂದು ತಿರುವು ಪಡೆಯುತ್ತಿದೆ. ಕ್ಷಣಕ್ಕೊಂದು ಬಣ್ಣ ಕಟ್ಟಿಕೊಳ್ತಿದೆ.. ಎಲ್ಲ ಅಸ್ತ್ರ್ಗ, ಶಸ್ತ್ರಗಳು ಪ್ರಯೋಗ ಆಗುತ್ತಿವೆ. ಈಗ ಸಿದ್ದರಾಮಯ್ಯ ಅನಿವಾರ್ಯ ಅನ್ನೋ ಬ್ರಹ್ಮಾಸ್ತ್ರವನ್ನ ಸಿಎಂ ಕ್ಯಾಂಪ್​​ ತೂರಿಬಿಟ್ಟಿದೆ. ಇದೆಲ್ಲದ ಮಧ್ಯೆ ಮುಂದಿನ ತಿಂಗಳು ಸಿಎಂ, ಡಿಸಿಎಂ ದೆಹಲಿ ಯಾತ್ರೆ ಮಾಡಲಿದ್ದು, ಆಗ ಕುರ್ಚಿ ಕಿತ್ತಾಟಕ್ಕೆ ತೆರೆ ಬೀಳುವ ಸಾಧ್ಯತೆ ಇದೆ.
ಶಾಸಕರ ಬಲ, ಸಿದ್ದರಾಮಯ್ಯ ಮಾಸ್​​ ಲೀಡರ್​​. ಐದು ವರ್ಷ ನಾನೇ ಸಿಎಂ. ಸಂಪುಟ ಪುನಾರಚನೆ, ಅಹಿಂದ ಉತ್ತರಾಧಿಕಾರಿ. ಈ ಎಲ್ಲಾ ಸದ್ದಿನ ಮಧ್ಯೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ದೆಹಲಿ ಪಯಣಕ್ಕೆ ಸಜ್ಜಾಗಿದ್ದಾರೆ. ನವೆಂಬರ್ ಕ್ರಾಂತಿಯ ಮಧ್ಯೆ ಸಿಎಂ, ಡಿಸಿಎಂ ವರಿಷ್ಠರನ್ನ ಭೇಟಿ ಮಾಡಲು ಸಜ್ಜಾಗಿರೋದು ಭಾರೀ ಚರ್ಚೆಗೆ ಗ್ರಾಸವಾಗಿದೆ.
/filters:format(webp)/newsfirstlive-kannada/media/media_files/2025/08/26/dk-shivakumar-6-2025-08-26-23-07-18.jpg)
ಸಿಎಂಗೂ ಮೊದಲೇ ಡಿಸಿಎಂ ದೆಹಲಿಯಾತ್ರೆ ಪ್ಲಾನ್!
ಕೈ ಪಡೆಯಲ್ಲಿ ಈಗ ನವೆಂಬರ್ ಕ್ರಾಂತಿಯ ಸದ್ದು ಸ್ಫೋಟಗೊಳ್ಳುತ್ತಿದೆ. ಇನ್ನೇನು 2 ದಿನಗಳು ಕಳೆದರೆ ನವೆಂಬರ್ ತಿಂಗಳು ಬರಲಿದೆ. ನಿತ್ಯ ಮೊಳಗ್ತಿರುವ ಕ್ರಾಂತಿ ಗೀತೆಗೆ ರಾಗ ಸಂಯೋಜನೆ ಆಗಲಿದ್ದು, ಕಾಂಗ್ರೆಸ್‌ನ ರಾಜಕೀಯ ಚಟುವಟಿಕೆಗಳು ಗರಿಗೆದರಲಿವೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ನಡುವೆ ದಾಳಕ್ಕೆ ಪ್ರತಿದಾಳ, ತಂತ್ರಕ್ಕೆ ಪ್ರತಿತಂತ್ರಗಳು, ಶಕ್ತಿ ಪ್ರದರ್ಶನಗಳು ನಡೆಯುತ್ತಿವೆ. ನವೆಂಬರ್​ 2ನೇ ವಾರ ಡಿಸಿಎಂ ಡಿ.ಕೆ ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಪ್ರತ್ಯೇಕ ಡೆಲ್ಲಿ ದಂಡಯಾತ್ರೆ ಕೈಗೊಳ್ತಿದ್ದು, ಈ ಬೆಳವಣಿಗೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಇಂದ್ರಪ್ರಸ್ಥದಲ್ಲಿ ಕ್ಲೈಮ್ಯಾಕ್ಸ್​​!
- ಸಿಎಂ ಸಿದ್ದರಾಮಯ್ಯಗೂ ಮೊದಲೇ ಡಿಸಿಎಂ ಡಿಕೆಶಿ ಡೆಲ್ಲಿ ದಂಡಯಾತ್ರೆ
- ಸಿಎಂ ಸಿದ್ದು ಹೈಕಮಾಂಡ್ ಭೇಟಿಗೂ ಮೊದಲೇ ಡೆಲ್ಲಿಯಲ್ಲಿ ತಂತ್ರಗಾರಿಕೆ
- ಮೊನ್ನೆಯಷ್ಟೇ ಏಕಾಂಗಿಯಾಗಿ ದೆಹಲಿಗೆ ಹೋಗಿ ಬಂದಿರುವ ಡಿಸಿಎಂ ಡಿಕೆ
- ನವೆಂಬರ್​ 11 ಅಥವಾ 12 ರಂದು ರಾಹುಲ್​​​​ ಭೇಟಿಗೆ ಟೈಂ ಕೇಳಿದ ಡಿಕೆ
- ಸಿಎಂ ಸಿದ್ದರಾಮಯ್ಯಗೂ 3 ದಿನ ಮೊದಲೇ ಡೆಲ್ಲಿಯಲ್ಲಿ ಡಿಕೆಶಿ ವಾಸ್ತವ್ಯ
- ನವೆಂಬರ್ 14 ರಿಂದ 3 ದಿನಗಳ ಕಾಲ ಸಿದ್ದರಾಮಯ್ಯ ದೆಹಲಿ ಪ್ರವಾಸ
- ಕಪಿಲ್ ಸಿಬಲ್ ಪುಸ್ತಕ ಬಿಡುಗಡೆ ನೆಪದಲ್ಲಿ ಸಿಎಂ ಸಿದ್ದು ದೆಹಲಿ ಯಾತ್ರೆ
- ಇದೇ ವೇಳೆ ಹೈಕಮಾಂಡ್ ನಾಯಕರ ಭೇಟಿಗೂ ಪ್ಲಾನ್​​​ ಮಾಡಿದ ಸಿಎಂ
- ಡೆಲ್ಲಿಯಲ್ಲಿದ್ದು ಅಧಿಕಾರ ಹಂಚಿಕೆಗೆ ಪಟ್ಟು ಹಿಡಿಯಲು ಡಿಸಿಎಂ ತಯಾರಿ
- ಆದ್ರೆ, ಪವರ್​​ ಶೇರಿಂಗ್​​​ಗೆ ಟಕ್ಕರ್​​ ಕೊಡಲು ಸಿಎಂ ಪುನಾರಚನೆ ದಾಳ
- ಹೈಕಮಾಂಡ್​​ ಸೂಚಿಸಿದ್ದ ಪುನಾರಚನೆಯ ದಾಳವೇ ಸದ್ಯ ಸಿದ್ದುಗೆ ಅಸ್ತ್ರ
/filters:format(webp)/newsfirstlive-kannada/media/media_files/2025/10/17/state-contractors-association-met-cm-siddu-2025-10-17-17-33-36.jpg)
ರಾಜ್ಯದ ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಕ್ಯಾಂಪ್​​​ನ ನಡುವೆ ಶೀತಲ ಸಮರ ತಾರಕಕ್ಕೇರಿದೆ. ಅಧಿಕಾರ ಹಂಚಿಕೆ ಕಿಡಿ ಈಗ ಜ್ವಾಲೆಯಾಗಿ ಮಾರ್ಪಟ್ಟಿದ್ದು, ರಾಷ್ಟ್ರ ರಾಜಧಾನಿ ಡೆಲ್ಲಿಗೂ ವ್ಯಾಪಿಸಿಬಿಟ್ಟಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ನಡುವಿನ ಅಧಿಕಾರ ಸಮರಕ್ಕೆ ಸದ್ಯ ಅಂತಿಮ ಘಟ್ಟಕ್ಕೆ ಬಂದಿದ್ದು, ಹೈಕಮಾಂಡ್​​ ಬರೆಯುವ ಕ್ಲೈಮ್ಯಾಕ್ಸ್​​ ಏನು ಅನ್ನೋದೇ ಸಸ್ಪೆನ್ಸ್​​.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us