Advertisment

4.48 ಲಕ್ಷ ಕೋಟಿ ರೂ. ಗಾತ್ರದ ಬೃಹತ್ ಬಜೆಟ್! ಶಿಕ್ಷಣ, ಮಹಿಳಾ ಕಲ್ಯಾಣಕ್ಕೆ ಸಿಂಹಪಾಲು, ಯಾವ ಇಲಾಖೆಗೆ ಎಷ್ಟು ಅನುದಾನ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಸಿದ್ದರಾಮಯ್ಯನವರು ಮಂಡಿಸಿರುವ 2026-27ನೇ ಸಾಲಿನ ರಾಜ್ಯ ಬಜೆಟ್‌ನ ಒಟ್ಟು ಗಾತ್ರ 4,48,004 ಕೋಟಿ ರೂ.ಗಳಿಗೆ ತಲುಪಿದೆ. ಅಭಿವೃದ್ಧಿ ವೆಚ್ಚದಲ್ಲಿ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಹಾಗೂ ಇಂಧನ ಇಲಾಖೆಗಳಿಗೆ ಅತಿ ಹೆಚ್ಚು ಅನುದಾನ ಮೀಸಲಿಡಲಾಗಿದೆ.

author-image
Ganesh Kerekuli
Updated On
budget (1)
Advertisment

ಬೆಂಗಳೂರು: ರಾಜ್ಯ ಸರ್ಕಾರದ 2026-27ನೇ ಸಾಲಿನ ಬಹುನಿರೀಕ್ಷಿತ ಆಯವ್ಯಯ (ಬಜೆಟ್) ಮಂಡನೆಯಾಗಿದ್ದು, ಈ ಬಾರಿಯ ಬಜೆಟ್‌ನ ಒಟ್ಟು ಗಾತ್ರ (ಸಂಚಿತ ನಿಧಿ) ಬರೋಬ್ಬರಿ 4,48,004 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. 2025-26ನೇ ಸಾಲಿನ ಪರಿಷ್ಕೃತ ಅಂದಾಜು 3,95,307 ಕೋಟಿ ರೂ.ಗಳಷ್ಟಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಬಜೆಟ್ ಗಾತ್ರದಲ್ಲಿ ಗಣನೀಯ ಏರಿಕೆಯಾಗಿದೆ.

Advertisment

ಬಜೆಟ್ ದಾಖಲೆಗಳ ‘ಆಯವ್ಯಯ ವಿಹಂಗಮ ನೋಟ'ದ ಪ್ರಕಾರ, ಅಭಿವೃದ್ಧಿ ಹಂಚಿಕೆಯಲ್ಲಿ ಎಂದಿನಂತೆ ಶಿಕ್ಷಣ ಕ್ಷೇತ್ರಕ್ಕೆ ಅತಿ ಹೆಚ್ಚು ಒತ್ತು ನೀಡಲಾಗಿದ್ದು, ಗ್ಯಾರಂಟಿ ಯೋಜನೆಗಳ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಎರಡನೇ ಅತಿ ದೊಡ್ಡ ಪಾಲು ಪಡೆದುಕೊಂಡಿದೆ.

ಇದನ್ನೂ ಓದಿ: ಡಿವೋರ್ಸ್​ ಅರ್ಜಿ ಬೆನ್ನಲ್ಲೇ ಒಂದೇ ಕಾರಿನಲ್ಲಿ ಬಂದಿಳಿದ ವಿಜಯ್-ತ್ರಿಷಾ.. ಸಂಗೀತಾ ಮೇಲೆ ಉಕ್ಕಿದ ಕನಿಕರ..!

ಯಾವ ವಲಯಕ್ಕೆ ಎಷ್ಟು ಅನುದಾನ?

ಅಭಿವೃದ್ಧಿ ಕಾರ್ಯಗಳಿಗಾಗಿ ಹಂಚಿಕೆ ಮಾಡಲಾಗಿರುವ ಒಟ್ಟು ಅನುದಾನದಲ್ಲಿ ವಿವಿಧ ವಲಯಗಳಿಗೆ ನೀಡಲಾದ ಮೊತ್ತ ಮತ್ತು ಶೇಕಡಾವಾರು ಪಾಲು ಈ ಕೆಳಗಿನಂತಿದೆ:

Advertisment
  • ಶಿಕ್ಷಣ: 47,224 ಕೋಟಿ ರೂ. (10%)
  • ಮಹಿಳಾ ಮತ್ತು ಮಕ್ಕಳ ಕಲ್ಯಾಣ: 34,929 ಕೋಟಿ ರೂ. (7%)
  • ಇಂಧನ: 29,947 ಕೋಟಿ ರೂ. (6%)
  • ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್: 26,559 ಕೋಟಿ ರೂ. (6%)
  • ಲೋಕೋಪಯೋಗಿ ಮತ್ತು ಸಾರಿಗೆ: 23,100 ಕೋಟಿ ರೂ. (5%)
  • ನೀರಾವರಿ: 22,436 ಕೋಟಿ ರೂ. (5%)
  • ನಗರಾಭಿವೃದ್ಧಿ ಮತ್ತು ವಸತಿ: 22,203 ಕೋಟಿ ರೂ. (5%)
  • ಕಂದಾಯ: 19,843 ಕೋಟಿ ರೂ. (4%)
  • ಸಮಾಜ ಕಲ್ಯಾಣ: 18,612 ಕೋಟಿ ರೂ. (4%)
  • ಆರೋಗ್ಯ ಮತ್ತು ಕುಟುಂಬ ಕಲ್ಯಾಣ: 17,817 ಕೋಟಿ ರೂ. (4%)
  • ಒಳಾಡಳಿತ (ಗೃಹ): 11,424 ಕೋಟಿ ರೂ. (2%)
  • ಕೃಷಿ ಮತ್ತು ತೋಟಗಾರಿಕೆ: 8,373 ಕೋಟಿ ರೂ. (2%)
  • ಆಹಾರ ಮತ್ತು ನಾಗರಿಕ ಸರಬರಾಜು: 7,942 ಕೋಟಿ ರೂ. (2%)
  • ಪಶುಸಂಗೋಪನೆ ಮತ್ತು ಮೀನುಗಾರಿಕೆ: 4,084 ಕೋಟಿ ರೂ. (1%)
  • ಇತರೆ ವಲಯಗಳು: 1,72,757 ಕೋಟಿ ರೂ. (37%)
  • ಬಂಡವಾಳ ಲೆಕ್ಕಾಚಾರ: ಸಾಲ ಮತ್ತು ವೆಚ್ಚದ ವಿವರ
  • ಸರ್ಕಾರದ ಬಂಡವಾಳ ಲೆಕ್ಕದ (Capital Account) ಅಂಕಿ-ಅಂಶಗಳ ಪ್ರಕಾರ:

ಒಟ್ಟು ಬಂಡವಾಳ ಜಮೆ: 1,32,190 ಕೋಟಿ ರೂ.


ಇದರಲ್ಲಿ ಬಹಿರಂಗ ಮಾರುಕಟ್ಟೆ ಸಾಲದ (Open market loans) ಮೂಲಕವೇ ಅತಿ ಹೆಚ್ಚು ಅಂದರೆ 1,22,340 ಕೋಟಿ ರೂ. ಸಂಗ್ರಹಿಸಲು ಅಂದಾಜಿಸಲಾಗಿದೆ. ಕೇಂದ್ರ ಸರ್ಕಾರದಿಂದ 6,810 ಕೋಟಿ ರೂ. ಸಾಲ ನಿರೀಕ್ಷಿಸಲಾಗಿದೆ.

ಒಟ್ಟು ವೆಚ್ಚ: 1,09,998 ಕೋಟಿ ರೂ.

ಇದರಲ್ಲಿ ಮೂಲಸೌಕರ್ಯ ಮತ್ತು ಇತರ ಬಂಡವಾಳ ವೆಚ್ಚಕ್ಕಾಗಿ (Capital Expenditure) 71,924 ಕೋಟಿ ರೂ. ಮೀಸಲಿಡಲಾಗಿದೆ. ಮಾರುಕಟ್ಟೆ ಸಾಲಗಳ ಮರುಪಾವತಿಗಾಗಿ 29,007 ಕೋಟಿ ರೂ. ಹಾಗೂ ಕೇಂದ್ರ ಸರ್ಕಾರದ ಸಾಲದ ಮರುಪಾವತಿಗೆ 2,700 ಕೋಟಿ ರೂ.ಗಳನ್ನು ತೆಗೆದಿರಿಸಲಾಗಿದೆ.

Advertisment

ಈ ಬಾರಿಯ ಆಯವ್ಯಯದಲ್ಲಿ ಕೃಷಿ, ನೀರಾವರಿ, ಗ್ರಾಮೀಣಾಭಿವೃದ್ಧಿಯಂತಹ ಮೂಲ ವಲಯಗಳ ಜೊತೆಗೆ ಶಿಕ್ಷಣ ಮತ್ತು ಮಹಿಳಾ ಸಬಲೀಕರಣಕ್ಕೆ ಸರ್ಕಾರ ಬಜೆಟ್‌ನಲ್ಲಿ ಸಿಂಹಪಾಲು ನೀಡಿದೆ. ಮತ್ತೊಂದೆಡೆ ಅಭಿವೃದ್ಧಿ ಕಾರ್ಯಗಳಿಗೆ ಸಂಪನ್ಮೂಲ ಕ್ರೋಢೀಕರಿಸಲು ಮಾರುಕಟ್ಟೆ ಸಾಲದ ಮೊರೆ ಹೋಗಿರುವುದು ದಾಖಲೆಗಳಿಂದ ಸ್ಪಷ್ಟವಾಗುತ್ತದೆ.

ಇದನ್ನೂ ಓದಿ: Karnataka Budget 2026 Live Updates: ಒಟ್ಟು ಬಜೆಟ್ ಗಾತ್ರ 448004 ಲಕ್ಷ ಕೋಟಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Siddaramaiah 17th budget Karnataka Budget 2026 budget 2026 Karnataka state budget
Advertisment
Advertisment
Advertisment