/newsfirstlive-kannada/media/media_files/2025/09/24/cm_dcm-2025-09-24-20-40-17.jpg)
ಬೆಂಗಳೂರು: ಈವರೆಗೂ ನನೆಗುದಿಗೆ ಬಿದ್ದಿದ್ದ ನಿಗಮ-ಮಂಡಳಿಗೆ ದಸರಾ ಕೊಡುಗೆಯಾಗಿ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ರಾಜ್ಯದ ಒಟ್ಟು 39 ನಿಗಮ, ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿ ಹೈಕಮಾಂಡ್ ಮುದ್ರೆ ಹಾಕಿದೆ.
ಬಿಹಾರ್​ಕ್ಕೆ ಸಭೆಗೆಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರು ತೆರಳಿದ್ದಾರೆ. ಇದರ ಬೆನ್ನಲ್ಲೇ ನಿಗಮ, ಮಂಡಳಿಗಳಿಗೆ ಅಧ್ಯಕ್ಷರ ನೇಮಕವಾಗಿದೆ. 39 ನಿಗಮ ಹಾಗೂ ಮಂಡಳಿಗಳ ಅಧ್ಯಕ್ಷರ ಹೆಸರಿಗೆ ಹೈಕಮಾಂಡ್ ಮುದ್ರೆ ಹಾಕಿದೆ. ಶಾಸಕ ವಿನಯ್ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಅವರಿಗೂ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ.
ಇದನ್ನೂ ಓದಿ: ‘ಪರ್ವ’ ನಾಟಕ; SL ಭೈರಪ್ಪ ಮತ್ತು ಪ್ರಕಾಶ್ ಬೆಳವಾಡಿ ನಡುವೆ ಏನೇನು ಮಾತುಗಳು ನಡೆದಿದ್ದವು?
ಯಾರಿಗೆ ಯಾವ ನಿಗಮ, ಮಂಡಳಿಯ ಅಧ್ಯಕ್ಷ ಸ್ಥಾನ?
- ಸೈಯದ್ ಮೆಹಮೂದ್ ಚಿಸ್ತಿ- ಕರ್ನಾಟಕ ಸ್ಟೇಟ್ ಪಲ್ಸಸ್ ಅಭಿವೃದ್ಧಿ ಮಂಡಳಿ ಲಿಮಿಟೆಡ್,
- ಎಂ.ಎಸ್ ಮುತ್ತುರಾಜ್- ಕರ್ನಾಟಕ ಸವಿತಾ ಸಮಾಜ್ ಡೆವಲಪ್ಮೆಂಟ್ ಕಾರ್ಪೊರೇಷನ್
- ನಂಜಪ್ಪ- ಕರ್ನಾಟಕ ಮಡಿವಾಳ ಮಾಚಿ ದೇವ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್
- ವಿಶ್ವಾಸ ದಾಸ್- ಕರ್ನಾಟಕ ಗಾಣಿಗ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್
- ಆರ್ ಸತ್ಯನಾರಾಯಣ- ಕರ್ನಾಟಕ ಸ್ಟೇಟ್ ಟೆಂಪರೆನ್ಸ್ ಬೋರ್ಡ್
- ಗಂಗಾಧರ್- ಕರ್ನಾಟಕ ಸಿಲ್ಕ್ ಮಾರ್ಕೆಟಿಂಗ್ ಬೋರ್ಡ್ ಲಿಮಿಟೆಡ್
- ಶಿವಪ್ಪ- ಹಾಸನ್ ಅರ್ಬನ್ ಡೆವಲಪ್ಮೆಂಟ್ ಅಥಾರಿಟಿ
- ಬಿ.ಎಸ್ ಕವಲಗಿ- ಕರ್ನಾಟಕ ಲೈಮ್ ಡೆವಲಪ್ಮೆಂಟ್ ಬೋರ್ಡ್
- ಶ್ರೀನಿವಾಸ ವಲು- ಕುಂಬಾರ ಡೆವಲಪ್ಮೆಂಟ್ ಕಾರ್ಪೊರೇಷನ್
- ಟಿ.ಎಂ ಶಾಹೀದ್ ತಕ್ಕಿಲ್- ಕರ್ನಾಟಕ ಸ್ಟೇಟ್ ಮಿನಿಮಮ್ ವೇಜ್ ಬೋರ್ಡ್
- ಚೇತನ್ ಕೆ. ಗೌಡ- ಕರ್ನಾಟಕ ಸ್ಟೇಟ್ ಹ್ಯಾಂಡ್ ಲೂಮ್ಸ್ ಇನ್ಫ್ರಾಸ್ಟ್ರಕ್ಚರ್ (ಪವರ್ ಲೂಮ್ಸ್) ಬೋರ್ಡ್
- ಶರಣಪ್ಪ ಸಾರದ್ಪುರ್- ಕರ್ನಾಟಕ ಸ್ಟೇಟ್ ಅಗ್ರಿಕಲ್ಚರಲ್ ಪ್ರೊಡ್ಯೂಸ್ ಪ್ರೊಸೆಸಿಂಗ್ ಅಂಡ್ ಎಕ್ಸ್‌ಪೋರ್ಟ್ ಬೋರ್ಡ್
- ಶಿವಲೀಲಾ ಕುಲಕರ್ಣಿ- ಕರ್ನಾಟಕ ನಗ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
- ಪಿ. ರಘು: ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ
- ಲಾವಣ್ಯ ಬಲ್ಲಾಳ್ ಜೈನ್- ಕರ್ನಾಟಕ ಸ್ಟೇಟ್ ಸೀಡ್ ಅಂಡ್ ಆರ್ಗಾನಿಕ್ ಸರ್ಟಿಫಿಕೇಷನ್ ಏಜೆನ್ಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ