/newsfirstlive-kannada/media/media_files/2025/08/16/bjp-dharmasthala-2025-08-16-07-20-08.jpg)
ಱಲಿ ಹೊರಟ ಬಿಜೆಪಿ ನಾಯಕರು
ಧರ್ಮಸ್ಥಳದ ಬಗ್ಗೆ ಅಪಪ್ರಚಾರ ನಡೆಯುತ್ತಿದೆ ಅಂತಿರೋ ಬಿಜೆಪಿ ನಾಯಕರು ಇಂದು ಧರ್ಮಸ್ಥಳಕ್ಕೆ ಬೈಕ್ ಱಲಿ ಮೂಲಕ ತೆರಳಲಿದ್ದಾರೆ. ಈಗಾಗ್ಲೇ ಯಲಹಂಕದಿಂದ ಬಿಜೆಪಿ ನಾಯಕರು ಹೊರಟಿದ್ದು, ಮಧ್ಯಾಹ್ನ ಧರ್ಮಸ್ಥಳ ತಲುಪಿ ಸಂಜೆ ಮಂಜುನಾಥ ಸ್ವಾಮಿ ದರ್ಶನ ಪಡೆಯಲಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಆರ್.ಅಶೋಕ್ ಜೊತೆ 35ಕ್ಕೂ ಹೆಚ್ಚು ಶಾಸಕರು ದರ್ಶನ ಪಡೆಯಲಿದ್ದಾರೆ. ಈ ಬಗ್ಗೆ ಮಾತನಾಡಿರುವ ಬಿಜೆಪಿ ನಾಯಕ ಎಸ್.ಆರ್.ವಿಶ್ವನಾಥ್, ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಖಂಡಿಸಿ ಧರ್ಮಸ್ಥಳಕ್ಕೆ ಹೋಗುತ್ತಿದ್ದೇವೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು ಅಂತಾ ಸಂಕಲ್ಪ ಮಾಡುತ್ತೇವೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ವಿಪಕ್ಷ ನಾಯಕ ಆರ್.ಅಶೋಕ್ ಜೊತೆ 35ಕ್ಕೂ ಹೆಚ್ಚು ಶಾಸಕರು ಮಂಜುನಾಥಸ್ವಾಮಿ ದರ್ಶನ ಪಡೆಯುತ್ತೇವೆ.
ಇದನ್ನೂ ಓದಿ:ಗೃಹ ಸಚಿವರ ಮನೆಯಲ್ಲಿ ಡಿನ್ನರ್ ಮೀಟಿಂಗ್.. ಸಚಿವರು, ಶಾಸಕರು, ಪರಿಷತ್ ಸದಸ್ಯರು ಭಾಗಿ
ಶಿವಕುಮಾರ್ಗೆ ದೇವರು ಒಳ್ಳೆಯದು ಮಾಡಲಿ
ಡಿಸಿಎಂ ಡಿ.ಕೆ. ಶಿವಕುಮಾರ್ ಧರ್ಮಸ್ಥಳದ ಜೊತೆ ಇರುತ್ತೇನೆ ಎಂದು ಹೇಳಿರುವುದು ಸಂತೋಷದ ಸಂಗತಿ. ಸರ್ಕಾರದ ಭಾಗವಾಗಿ ಎಸ್ಐಟಿ ತನಿಖೆಯಲ್ಲಿ ಏನು ಆಗಿದೆ ಎಂದು ಅವರಿಗೆ ಗೊತ್ತಿದೆ. ಡಿಸಿಎಂ ಅವರಿಗೆ ಮಂಜುನಾಥಸ್ವಾಮಿ ಒಳ್ಳೆಯದು ಮಾಡಲಿ. ಡಿ.ಕೆ. ಶಿವಕುಮಾರ್ ಅವರಿಗೆ ಷಡ್ಯಂತ್ರ ನಡೆದಿರುವ ಬಗ್ಗೆ ಮಾಹಿತಿ ಇರುತ್ತದೆ. ಬಿಜೆಪಿ ಮೊದಲಿನಿಂದಲೂ ಇಲ್ಲಿ ಅಪಪ್ರಚಾರದ ಹುನ್ನಾರ ನಡೆಯುತ್ತಿದೆ ಎಂದು ಹೇಳಿತ್ತು ಎಂದಿದ್ದಾರೆ.
ಇದನ್ನೂ ಓದಿ: ಇಡಿ ಭರ್ಜರಿ ಬೇಟೆ.. ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಮನೆಯಲ್ಲಿ ಕೋಟಿ ಮೌಲ್ಯದ ನಗದು, ಚಿನ್ನ ಪತ್ತೆ
ಅಂತಿಮವಾಗಿ ವೀರೇಂದ್ರ ಹೆಗ್ಗಡೆಯವರನ್ನೇ ಫಿಕ್ಸ್ ಮಾಡಬೇಕು, ಅಲ್ಲಿಯವರೆಗೆ ತನಿಖೆ ಮುಂದುವರಿಯಬೇಕು ಅಂತಾ ಉದ್ದೇಶ ಇತ್ತು. ಎಸ್ಐಟಿ ತನಿಖೆಯೇ ಅಂತಿಮ, ನಮ್ಮ ಪೊಲೀಸರು ದಕ್ಷರಿದ್ದಾರೆ. ಶೋಧ ಆರಂಭಿಸಿದಾಗ ನಮಗೆ ಆತಂಕ ಆಗಿತ್ತು. ಮತ್ತೆ ಧರ್ಮಸ್ಥಳಕ್ಕೆ ಹೆಚ್ಚು ಜನ ಹೋಗುತ್ತಿದ್ದಾರೆ. ಶಕ್ತಿ ಯೋಜನೆಯಡಿ ಧರ್ಮಸ್ಥಳಕ್ಕೆ ಹೋದ ಮಹಿಳೆಯರು ಎಲ್ಲರೂ ಈಗ ಸರ್ಕಾರದ ನಿರ್ಧಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ:ಸೆಪ್ಟೆಂಬರ್ ಬಳಿಕ ದೇಶದಲ್ಲಿ ಎರಡೇ ಜಿಎಸ್‌ಟಿ ದರಗಳು! ಜಿಎಸ್‌ಟಿ ಪರಿಷ್ಕರಣೆಗೆ ಕೇಂದ್ರದ ನಿರ್ಧಾರ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ