ರಾಜ್ಯದಲ್ಲಿ ಸಿಎಂ ಕುರ್ಚಿ ಕಿತ್ತಾಟ ತಾರಕಕ್ಕೇರಿದ್ದು, ಶಿವಮೊಗ್ಗದಲ್ಲಿ ಈ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪ ರಿಯ್ಯಾಕ್ಟ್ ಮಾಡಿದ್ದಾರೆ. ಇದು ಕಾಂಗ್ರೆಸ್ ವಿಚಾರ. ನಮಗೆ ಸಂಬಂಧ ಇಲ್ಲ. ಕಳೆದು ಏಳೆಂಟು ತಿಂಗಳಿಂದ ಸರ್ಕಾರ ಯಾವುದೇ ಅಭಿವೃದ್ದಿ ಕಡೆ ಗಮನ ನೀಡುತ್ತಿಲ್ಲ. ಯಾರು ಮುಖ್ಯಮಂತ್ರಿ ಆಗಬೇಕು ಎನ್ನುವುದರಲ್ಲೇ ತಲ್ಲೀನರಾಗಿದ್ದಾರೆ. ಇಡೀ ರಾಜ್ಯದ ಜನ ಇವರ ಆಡಳಿತದಿಂದ ಬೇಸತ್ತು ಛೀಮಾರಿ ಹಾಕುತ್ತಿದ್ದಾರೆ. ಇಷ್ಟಾದರು ಸರಿಪಡಿಸಿಕೊಳ್ಳದೆ ತಮ್ಮದೇ ಗೊಂದಲದಲ್ಲಿ ನಿರತರಾಗಿದ್ದಾರೆ. ಮುಂಬರುವ ದಿನದಲ್ಲಿ ರಾಜ್ಯದ ಜನರೇ ಇವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಸರ್ಕಾರದ ವಿರುದ್ಧ ಬಿಎಸ್​ವೈ ಆಕ್ರೋಶ ಹೊರಹಾಕಿದ್ದಾರೆ.
ಇದೇ ವೇಳೆ ಮಾಧ್ಯಮಗಳು, ಯಡಿಯೂರಪ್ಪ ಅವರಿಗೆ ತಮ್ಮ ಹಿಂದಿನ ಹೇಳಿಕೆಯನ್ನು ನೆಪಿಸಿದವು. ಈ ಹಿಂದೆ ನೀವು, ಡಿಕೆಶಿಗೆ ಒಂದು ಮಾತು ಹೇಳಿದ್ದೀರಿ. ನೀವು ಕಾಂಗ್ರೆಸ್​ನಲ್ಲಿದ್ದರೆ ಸಿಎಂ ಆಗಲ್ಲ ಎಂದು. ಈಗ ಅದಕ್ಕೆ ಏನು ಹೇಳ್ತೀರ ಎಂದು ಕೇಳಲಾಯಿತು. ಅದಕ್ಕೆ ನಕ್ಕು ಹಾಗೆ ಹೋದರು. ಯಡಿಯೂರಪ್ಪ ಏನೆಲ್ಲ ಮಾತನ್ನಾಡಿದ್ದರು ಅನ್ನೋದನ್ನು ತಿಳಿದುಕೊಳ್ಳಲು ಮೇಲಿನ ಲಿಂಕ್ ಕ್ಲಿಕ್ ಮಾಡಿ..
ಇದನ್ನೂ ಓದಿ: ಬೆಂಗಳೂರಲ್ಲಿ ಲಾಕಪ್ ಡೆತ್..? ಇನ್ಸ್​ಪೆಕ್ಟರ್​ ಶಿವಕುಮಾರ್ ಸೇರಿ ನಾಲ್ವರ ಮೇಲೆ FIR
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us