Advertisment

ಬೆಂಗಳೂರಲ್ಲಿ ಲಾಕಪ್ ಡೆತ್..? ಇನ್ಸ್​ಪೆಕ್ಟರ್​ ಶಿವಕುಮಾರ್ ಸೇರಿ ನಾಲ್ವರ ಮೇಲೆ FIR

ವಿವೇಕನಗರ ಪೊಲೀಸರ ವಿರುದ್ಧ ಲಾಕಪ್ ಡೆತ್ ಆರೋಪ ಕೇಳಿಬಂದಿದೆ. ದರ್ಶನ್ ಮೃತ ವ್ಯಕ್ತಿ. ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿವೇಕನಗರ ಇನ್​​ಸ್ಪೆಕ್ಟರ್ ಶಿವಕುಮಾರ್ ಸೇರಿ ನಾಲ್ವರ ಮೇಲೆ FIR ಆಗಿದೆ.

author-image
Ganesh Kerekuli
Lock-up
Advertisment

ಬೆಂಗಳೂರು: ವಿವೇಕನಗರ ಪೊಲೀಸರ ವಿರುದ್ಧ ಲಾಕಪ್ ಡೆತ್ ಆರೋಪ ಕೇಳಿಬಂದಿದೆ. ಕಸ್ಟಡಿಯಲ್ಲಿದ್ದ ವ್ಯಕ್ತಿ ಮೇಲೆ ಗಂಭೀರ ಹಲ್ಲೆ ಮಾಡಿದ ಪರಿಣಾಮ ಮೃತಪಟ್ಟಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

Advertisment

ದರ್ಶನ್ ಮೃತ ವ್ಯಕ್ತಿ. ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿವೇಕನಗರ ಇನ್​​ಸ್ಪೆಕ್ಟರ್ ಶಿವಕುಮಾರ್ ಸೇರಿ ನಾಲ್ವರ ಮೇಲೆ FIR ಆಗಿದೆ.

ಆರೋಪ ಏನು?

ಮೃತ ದರ್ಶನ್ ನವೆಂಬರ್ 15ರಂದು ಕುಡಿದು ರಸ್ತೆಯಲ್ಲಿ ಗಲಾಟೆ ಮಾಡುತ್ತಿದ್ದ. ಇದನ್ನು ಪ್ರಶ್ನಿಸಿದ್ದ ಪೊಲೀಸರಿಗೆ ಮಚ್ಚು ತೋರಿಸಿದ್ದ ಎನ್ನಲಾಗಿದೆ. ಅದೇ ಕಾರಣಕ್ಕೆ ಆತನ ವಶಕ್ಕೆ ಪಡೆದು ಠಾಣೆಗೆ ಕರೆ ತಂದಿದ್ದರು. ಈ ವೇಳೆ ಯಾವುದೇ ಕೇಸ್ ಮಾಡದೆ, ಎರಡು ದಿನ ಕಸ್ಟಡಿಯಲ್ಲಿಟ್ಟು ಹಲ್ಲೆ ನಡೆಸಿದ್ದಾರೆ ಎಂಬ ಆರೋಪವಿದೆ.

ಎರಡು ದಿನಗಳ ಕಾಲ ನಿರಂತರವಾಗಿ ಹಲ್ಲೆ ನಡೆಸಿದ ಬಳಿಕ ನೆಲಮಂಗಲದ ಯುನಿಟಿ ಸೋಷಿಯಲ್ ಸರ್ವಿಸ್​ಗೆ ಪೊಲೀಸರು ಕರೆ ಮಾಡಿದ್ದಾರೆ. ಲಾಕಪ್​ನಲ್ಲಿದ್ದ ದರ್ಶನನ್ನ ರಿಹ್ಯಾಬ್ ಸೆಂಟರ್​ಗೆ ಸೇರಿಸಿದ್ದಾರೆ. ರಿಹ್ಯಾಬ್ ಸೆಂಟರ್​ನಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಮೃತಪಟ್ಟಿದ್ದಾನೆ.

Advertisment

ಮೊನ್ನೆ ದರ್ಶನ್ ಮೃತಪಟ್ಟಿದ್ದು, ಮರಣೋತ್ತರ ಪರೀಕ್ಷೆ ವೇಳೆ ಹಲ್ಲೆ ನಡೆಸಿರೋದು ಬೆಳಕಿಗೆ ಬಂದಿದೆ. ಈ ನಿಟ್ಟಿನಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭವಾಗಿದೆ. ವಿವೇಕನಗರ ಠಾಣೆ ಪೊಲೀಸ್ರ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.  ರಿಹ್ಯಾಬ್ ಸೆಂಟರ್ ಮಾಲೀಕರ ಮೇಲೂ FIR ದಾಖಲಾಗಿದೆ. ದರ್ಶನ್ ತಾಯಿ ಆದಿಲಕ್ಷ್ಮೀ ಮಗನ ಸಾವಿಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ:‘ನಮ್ಮ ಮೆಟ್ರೋ’ ಪ್ರಯಾಣಿಕರು ದೊಡ್ಡ ಅಪಾಯ ತಂದ್ಕೊಳ್ತಿದ್ದಾರಾ? ಶಾಕಿಂಗ್ ನ್ಯೂಸ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Lock-up death
Advertisment
Advertisment
Advertisment