/newsfirstlive-kannada/media/media_files/2025/08/12/namma-metro4-2025-08-12-12-19-31.jpg)
ಖಾಲಿ ಹೊಟ್ಟೆಯಲ್ಲಿ, ನಿದ್ದೆಗಟ್ಟು ಬೆಳಗ್ಗೆ ನಮ್ಮ ಮೆಟ್ರೋದಲ್ಲಿ ಓಡಾಡೋ ಪ್ರಯಾಣಿಕರೇ ಇದು ನೀವು ಓದಲೇಬೇಕಾದ ಸ್ಟೋರಿ.. ಯಾಕಂದ್ರೆ ನಿಮಗೆ ಕಾದಿದೆ ಅತೀ ದೊಡ್ಡ ಅಪಾಯ.. ಯಾಕಂದ್ರೆ ಖಾಲಿ ಹೊಟ್ಟೆಯಲ್ಲಿ ಮೆಟ್ರೋ ಪ್ರಯಾಣ ಮಾಡಿ ಆಸ್ಪತ್ರೆಗೆ ದಾಖಲಾಗೋರ ಸಂಖ್ಯೆ ಹೆಚ್ಚಾಗ್ತಿದ್ದು, ಅಚ್ಚರಿ ಅಂದ್ರೆ ಇದರಲ್ಲಿ ಯುವಜನರೇ ಹೆಚ್ಚು ಅಂತ ವರದಿಯೊಂದು ಹೇಳ್ತಿದೆ..
ಬೆಳ್ಳಂಬೆಳಗ್ಗೆ ನಮ್ಮ ಮೆಟ್ರೋ ಕ್ಯಾಚ್​ ಮಾಡೋಕೆ ಹೋಗಿ ಬ್ರೇಕ್​ ಪಾಸ್ಟ್​​ ಸ್ಕಿಪ್​ ಮಾಡಿ ನಿದ್ದೆಗಟ್ಟು ರಶ್​ ಇರೋ ಮೆಟ್ರೋದಲ್ಲೇ ನೇತಾಡ್ಕೊಂಡು ನಿದ್ದೆಗೆ ಜಾರ್ತಿದ್ದೀರಾ? ಹಾಗಿದ್ರೆ ನಿಮಗೆ ಕಾದಿದೆ ಅಪಾಯ ಅಂತಿದ್ದಾರೆ ಮೆಟ್ರೋ ಅಧಿಕಾರಿಗಳು.
ಇದನ್ನೂ ಓದಿ:ಕಾಲು ಹಿಡಿದು ಬೇಡಿದ್ರೂ ಪ್ರಿಯಕರನನ್ನು ಬಿಟ್ಟು ಬಾರದ ಮಗಳು.. ಪೊಲೀಸ್ ಠಾಣೆಯಲ್ಲಿ ಹೈಡ್ರಾಮಾ..!
ಖಾಲಿ ಹೊಟ್ಟೆ, ನಿದ್ದೆಗೆಟ್ಟು ಪ್ರಯಾಣ ಮಾಡಿದ್ರೆ ಕಾದಿದೆ ಅಪಾಯ
ಶಾಕಿಂಗ್​ ಅನಿಸಿದ್ರೂ ಇದುವೇ ಸತ್ಯ.. ಖಾಲಿ ಹೊಟ್ಟೆಯಲ್ಲಿ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಿ ತಲೆ ತಿರುಗಿ ಬೀಳೋರ ಸಂಖ್ಯೆ 130ಕ್ಕೆ ಏರಿಕೆ ಆಗಿದ್ಯಂತೆ.. ಅಚ್ಚರಿ ಅಂದ್ರೆ ಯುವಜನರೇ ಈ ಹೊಸ ಕಾಯಿಲೆಗೆ ತುತ್ತಾಗ್ತಿದ್ದಾರಂತೆ..
ತಲೆಸುತ್ತು ತಡೆಯುವುದು ಹೇಗೆ?
- ನಿದ್ರೆ ಕಡಿಮೆ ಮಾಡಿ, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಪ್ರಯಾಣ ಮಾಡ್ಬೇಡಿ
- ಖಾಲಿ ಹೊಟ್ಟೆಯಲ್ಲಿ ಪ್ರಯಾಣಿಸಿದ್ರೆ ದೇಹದಲ್ಲಿ ರಕ್ತದೊತ್ತಡ ಸಮಸ್ಯೆ
- ಇದು ತಲೆ ತಿರುಗುವಿಕೆ, ಮಂದ ದೃಷ್ಟಿ, ವಾಂತಿ ಬರೋದು, ಬೆವರೋದು
- ಆಗಸ್ಟ್​​ನಿಂದ ಅಕ್ಟೋಬರ್​​ 3 ತಿಂಗಳಲ್ಲಿ 130 ಜನ ತಲೆಸುತ್ತಿ ಬಿದ್ದಿದ್ದಾರೆ
- 60% ಕ್ಕಿಂತ ಹೆಚ್ಚು ಜನರು 30 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಕರೇ
- ಮೆಟ್ರೋದಲ್ಲಿ ಪ್ರಯಾಣಿಸುವಾಗ ಬ್ರೇಕ್​​ಫಾಸ್ಟ್​ ಮಾಡಿ ಪ್ರಯಾಣಿಸಿ
- ಬೆಳಗ್ಗೆ ಮನೆಯಿಂದ ಹೊರಡ್ತಾ, ಬಾಳೆಹಣ್ಣು, ಡ್ರೈಫೂಟ್ಸ್​​, ಕಾಳು ತಿನ್ನೋದು
- ನೀರಿನ ಬಾಟಲಿಗೆ ತರೋದು.. ಮೆಟ್ರೋ ಡೋರ್​ ಬಳಿ ನಿಲ್ಲದೇ ಇರೋದು
- ಉಸಿರುಗಟ್ಟಿಸುವಂತಹ ಉಡುಪಗಳನ್ನು ಆದಷ್ಟು ಧರಿಸದೇ ಇರೋದು
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇನ್ಮುಂದೆ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸೋ ಪ್ರಯಾಣಿಕರೇ ಆದಷ್ಟು ಆರೋಗ್ಯದ ಕಡೆ ಗಮನ ವಹಿಸಿ, ಇಂತಹ ಸಮಸ್ಯೆಯಿಂದ ದೂರ ಇರಿ.. ಆಫೀಸ್​ಗೆ ಲೇಟ್​ ಆಗ್ತಿದೆ, ಕಾಲೇಜಿಗೆ ಬೇಗ ಹೋಗ್ಬೇಕು ಅಂತ ರಾತ್ರಿ ಚೆನ್ನಾಗಿ ನಿದ್ದೆ ಮಾಡದೇ ಮಾರ್ನಿಂಗ್​ ತಿಂಡಿ ಸ್ಕಿಪ್​ ಮಾಡಿ, ಓಡೋಗಿ ಮೆಟ್ರೋ ಏರ್ತೀರಾ? ಹಾಗಿದ್ರೆ ಅಪಾಯ ನಿಮ್ಮ ಬೆನ್ನ ಹಿಂದೆನೇ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us