/newsfirstlive-kannada/media/media_files/2025/11/28/love-marriage-2025-11-28-08-41-05.jpg)
ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು.. ಇದು ಕ್ರೇಜಿಸ್ಟಾರ್​ ರವಿಚಂದ್ರನ್​​ ಅಭಿನಯದ ಸೂಪರ್ ಹಿಟ್​ ರಣಧೀರ ಚಿತ್ರದ ಗೀತೆ.. ಸಿನಿಮಾದ ಗೀತೆಯಂತೆಯೇ ಪ್ರೀತಿಸಿದ ಈ ಜೋಡಿ.. ಹೆತ್ತವರ ವಿರೋಧದ ನಡುವೆ.. ಯಾರಿಗೂ ಅಂಜದೇ ಪ್ರಣಯ ಪಕ್ಷಿಗಳು ಒಂದಾಗಿದ್ದಾರೆ. ಆದ್ರೆ.. ಇಷ್ಟು ವರ್ಷ ಹೆತ್ತು ಹೊತ್ತು ಸಾಕಿದ ಮಗಳು ಪ್ರಿಯಕರನ ಬಿಟ್ಟು ಬಾರದೇ ಇದ್ದಕ್ಕೆ ಪೋಷಕರು ಕಣ್ಣೀರಿಟ್ಟಿದ್ದಾರೆ..
ಪೋಷಕರ ವಿರೋಧದ ನಡುವೆ.. ಹೇಳದೇ ಕೇಳದೇ ಪ್ರಿಯಕರನ ಮನೆಗೆ ಹೋಗಿ ದೇವಸ್ಥಾನದಲ್ಲಿ ಮದುವೆಯಾದ ಜೋಡಿ.. ಎಸ್​​ಪಿ ಕಚೇರಿಯಲ್ಲಿ ಒಂದಾಗಿದ್ದಾರೆ. ಹೊಸಕೋಟೆ ತಾಲೂಕಿನ ಚೀಮಂಡಹಳ್ಳಿ ನಿವಾಸಿಯಾದ ಯುವತಿ, ಬೆಂಗಳೂರಿನ ಖಾಸಗಿ ಪದವಿ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾಭ್ಯಾಸ ಮಾಡ್ತಿದ್ದಾಳೆ.. ಇನ್ನು ಚಿಕ್ಕಬಳ್ಳಾಪುರದ ಬಂಡಹಳ್ಳಿ ನಿವಾಸಿ ಅನಿಲ್ ಕುಮಾರ್, ಸಣ್ಣ​ ಹೋಟೆಲ್ ವ್ಯಾಪಾರ ಮಾಡ್ತಿದ್ದು, ಹೊಸಕೋಟೆಗೆ ಹೋಗಿ ಬರ್ತಿದ್ದ.. ಹೊಸಕೋಟೆಗೆ ಹೋದಾಗೆಲ್ಲ ಅನಿಲ್​ಗೆ ಜಯಶ್ರೀಯನ್ನು ನೋಡ್ತಿದ್ನಂತೆ.. ಬಳಿಕ ಇಬ್ಬರಿಗೂ ಇನ್​ಸ್ಟಾದಲ್ಲಿ ಪರಿಚಯವಾಗಿ ಸ್ನೇಹ ಬೆಳೆದು ಬಳಿಕ ಅದು ಪ್ರೀತಿಗೆ ತಿರುಗಿದೆ. ಆದ್ರೆ ಜಯಶ್ರೀ ಮನೆಯವರಿಗೆ ವಿಷಯ ಗೊತ್ತಾಗಿ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗೂ ಮಗಳಿಗೆ ಬೇರೆ ಹುಡುಗನ್ನು ನೋಡಿ ಮದುವೆ ಮಾಡಲು ಮುಂದಾಗಿದ್ದಾರೆ. ಈ ವಿಷ್ಯ ಗೊತ್ತಾಗಿ, ಯುವತಿ, ಮನೆಯಲ್ಲಿ ಕಾಲೇಜಿಗೆ ಹೋಗಿ ಬರ್ತೀನಿ ಎಂದು ಹೇಳಿ.. ನೇರವಾಗಿ ಪ್ರಿಯಕರನ ಮನೆಗೆ ಬಂದು.. ಬಳಿಕ ಇಬ್ಬರೂ ದೇವಸ್ಥಾನದಲ್ಲಿ ಮದುವೆ ಆಗಿದ್ದಾರೆ.
ಇದನ್ನೂ ಓದಿ: ಮೆಗಾ ಹರಾಜಿನಲ್ಲಿ RCB ಜಾಣ್ಮೆಯ ಆಟ.. ಹೊಸ ಟೀಂ ಹೇಗಿದೆ..?
/filters:format(webp)/newsfirstlive-kannada/media/post_attachments/wp-content/uploads/2025/01/JOB_LOVE_1.jpg)
ಇತ್ತ ಮಗಳು ಕಾಣೆಯಾದ ಬಗ್ಗೆ ಜಯಶ್ರೀ ಪೋಷಕರು, ಹೊಸಕೋಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದರಿಂದ ಬೆದರಿದ ಜೋಡಿ, ನೇರವಾಗಿ ಚಿಕ್ಕಬಳ್ಳಾಪುರ ಎಸ್ಪಿ ಕಚೇರಿಗೆ ಆಗಮಿಸಿ, ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. ಈ ವಿಷ್ಯ ತಿಳಿಯುತ್ತಿದ್ದಂತೆ ಯುವತಿ ಪೋಷಕರು ಪೊಲೀಸ್​ ಠಾಣೆಗೆ ಆಗಮಿಸಿ, ವಾಪಸ್ ಮನೆಗೆ ಬರುವಂತೆ ಪರಿಪರಿಯಾಗಿ ಮಗಳನ್ನು ಬೇಡಿಕೊಂಡಿದ್ದಾರೆ. ನಾವೇ ಮದ್ವೆ ಮಾಡ್ತೀವಿ ಬಾ ಮಗಳೆ ಎಂದು ಪೋಷಕರು ಕಾಲು ಹಿಡಿದು ಬೇಡಿಕೊಂಡ್ರೂ.. ಯುವತಿ ಮಾತ್ರ ಹೆತ್ತವರ ಮಾತಿಗೆ ಬೆಲೆ ಕೊಡದೇ ಧಿಕ್ಕರಿಸಿ.. ನಾನು ಮೇಜರ್​​.. ನನ್ನಿಷ್ಟ ಎಂದು 19 ವರ್ಷದಿಂದ ಕಣ್ಣಲ್ಲಿ ಕಣ್ಣಿಟ್ಟು ಪ್ರೀತಿಯಿಂದ ಸಾಕಿ ಬೆಳೆಸಿದ್ದ ಪೋಷಕರನ್ನು ತಿರಸ್ಕರಿಸಿ, ಪ್ರಿಯಕರನ ಜೊತೆ ಹೋಗಿದ್ದಾಳೆ. ಇನ್ನು ಅನಿಲ್​​, ನಮಗೆ ಬೆದರಿಕೆ ಇದ್ದು ರಕ್ಷಣೆ ನೀಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾನೆ.
ಪ್ರೀತಿ ಕುರುಡು ಅನ್ನೊ ಹಾಗೆ.. ಪೋಷಕರು ವಿರೋಧಿಸಿದ್ದಕ್ಕೆ ಯುವತಿ ಮನೆ ಬಿಟ್ಟು ಬರಲು ಕಾರಣವಾಗಿದೆ.. ಇನ್ನೂ ಇತ್ತ 19 ವರ್ಷಗಳ ಕಾಲ ಮಗಳನ್ನು ಮುದ್ದಾಗಿ ಸಾಕಿದ್ದ ತಂದೆ ತಾಯಿಗೆ, ಮಗಳ ನಡೆಯಿಂದ ಆಕಾಶವೇ ತಲೆ ಮೇಲೆ ಕುಸಿದಂತೆ ಆಗಿದೆ.
ಇದನ್ನೂ ಓದಿ: ಬಂಗಾಳಕೊಲ್ಲಿಯಲ್ಲಿ ಮತ್ತೊಂದು ಸೈಕ್ಲೋನ್.. ಹವಾಮಾನ ಇಲಾಖೆ ಎಚ್ಚರಿಕೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us