/newsfirstlive-kannada/media/post_attachments/wp-content/uploads/2023/07/Siddu_Session.jpg)
ಬೆಂಗಳೂರು: ರಾಜ್ಯದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೊಂದು ದಾಖಲೆಯ ಬಜೆಟ್ (Karnataka Budget 2026) ಮಂಡಿಸಲು ಸಜ್ಜಾಗಿದ್ದಾರೆ. ಆದರೆ, ಈ ಬಾರಿಯ ಬಜೆಟ್ ಮಂಡನೆ ಸಿಎಂ ಪಾಲಿಗೆ ಅಷ್ಟು ಸುಲಭವಲ್ಲ. ‘ಗ್ಯಾರಂಟಿ’ ಯೋಜನೆಗಳ ನಿರ್ವಹಣೆ ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಹೊಂದಿಸುವುದು ಸಿಎಂಗೆ ಕಗ್ಗಂಟಾಗಿ ಪರಿಣಮಿಸಿದ್ದು, ಬಜೆಟ್ ಮಂಡನೆಗೂ ಮುನ್ನವೇ ಸರ್ಕಾರದ ಬೊಕ್ಕಸಕ್ಕೆ ಸಂಪನ್ಮೂಲ ಕೊರತೆಯ ಬಿಸಿ ತಟ್ಟಿದೆ.
ಸಂಪನ್ಮೂಲ ಕೊರತೆ.. ಸಿಎಂಗೆ ಟೆನ್ಷನ್!
ದಾಖಲೆಯ ಗಾತ್ರದ ಬಜೆಟ್ ಮಂಡಿಸಲು ಮುಂದಾಗಿರುವ ಸಿದ್ದರಾಮಯ್ಯ ಅವರಿಗೆ ಪ್ರಮುಖ ಇಲಾಖೆಗಳಿಂದ ನಿರೀಕ್ಷಿತ ಆದಾಯ ಹರಿದುಬಂದಿಲ್ಲ. ಇದು ಆರ್ಥಿಕ ಇಲಾಖೆಯ ಚಿಂತೆಗೆ ಕಾರಣವಾಗಿದೆ.
ವಾಣಿಜ್ಯ ತೆರಿಗೆ ಇಳಿಕೆ: ಕಳೆದ ವರ್ಷ ಸುಮಾರು 1 ಲಕ್ಷ ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹವಾಗಿತ್ತು. ಆದರೆ ಈ ವರ್ಷ ಅದು 90 ಸಾವಿರ ಕೋಟಿ ರೂ.ಗೆ ಸೀಮಿತವಾಗಿದ್ದು, ಭಾರಿ ಇಳಿಕೆ ಕಂಡಿದೆ.
ಇದನ್ನೂ ಓದಿ: ಹಣ ಸಾಗಿಸ್ತಿದ್ದ ಕಾರ್ಗೋ ವಿಮಾನ ಪತನ; ರಸ್ತೆಯಲ್ಲೆಲ್ಲಾ ಹಾರಾಡಿದ ನೋಟುಗಳು! ಹಣ ಬಾಚಲು ಮುಗಿಬಿದ್ದ ಜನ, 15 ಮಂದಿ ಸಾವು
ಮುದ್ರಾಂಕ ಶುಲ್ಕ: ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲೂ ಸುಮಾರು 10 ಸಾವಿರ ಕೋಟಿ ರೂ.ಗಳಷ್ಟು ಕೊರತೆ ಎದುರಾಗಿದೆ.
ಅಬಕಾರಿ ಮತ್ತು ಸಾರಿಗೆ: ಮೋಟಾರ್ ವಾಹನ ತೆರಿಗೆ ಸಂಗ್ರಹ ಕುಂಠಿತವಾಗಿದೆ. ಇನ್ನು ಅಬಕಾರಿ ಇಲಾಖೆಯಲ್ಲಿನ ಹೊಸ ಲೈಸೆನ್ಸ್ ವಿವಾದದಿಂದಾಗಿ ಸರ್ಕಾರದ ಹೆಚ್ಚುವರಿ ಆದಾಯಕ್ಕೆ ದೊಡ್ಡ ಹೊಡೆತ ಬಿದ್ದಿದೆ.
ಗ್ಯಾರಂಟಿಗಳಿಗೆ ಬೀಳುತ್ತಾ ಕತ್ತರಿ?
ಸಂಪನ್ಮೂಲದ ತೀವ್ರ ಕೊರತೆಯಿಂದಾಗಿ, ಪಂಚ ಗ್ಯಾರಂಟಿ ಯೋಜನೆಗಳ ನಿಯಮಗಳನ್ನು ಬಿಗಿಗೊಳಿಸಲು ಅಥವಾ ಕೆಲವಕ್ಕೆ ಕತ್ತರಿ ಹಾಕಲು ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ಆರ್ಥಿಕ ಇಲಾಖೆಯ ಅಧಿಕಾರಿಗಳೊಂದಿಗೆ ಸಿಎಂ ನಡೆಸಿದ ಸಾಲು ಸಾಲು ಸಭೆಗಳಲ್ಲಿ ಈ ಬಗ್ಗೆ ಪ್ರಮುಖ ಚರ್ಚೆಗಳು ನಡೆದಿವೆ.
ಇದನ್ನೂ ಓದಿ: PPF ಖಾತೆದಾರರೇ ಗಮನಿಸಿ.. ಒಂದಕ್ಕಿಂತ ಹೆಚ್ಚು ಖಾತೆ ಇದ್ದರೆ ಏನಾಗುತ್ತದೆ? ಇಲ್ಲಿದೆ ಮಾಹಿತಿ..
ಸರ್ಕಾರದ ಮುಂದಿರುವ ಕಠಿಣ ಕ್ರಮಗಳೇನು?
ಬಿಪಿಎಲ್ ಕಾರ್ಡ್ ರದ್ದು: ಸರ್ಕಾರಿ ನೌಕರರು, ಆದಾಯ ತೆರಿಗೆ (IT) ಪಾವತಿದಾರರು ಮತ್ತು ನಿಗದಿತ ಮಿತಿಗಿಂತ ಹೆಚ್ಚು ಜಮೀನು ಹೊಂದಿರುವವರ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಿ, ಅನ ಅರ್ಹರನ್ನು ಗ್ಯಾರಂಟಿಗಳಿಂದ ಹೊರಗಿಡುವ ಪ್ಲಾನ್ ಮಾಡಲಾಗಿದೆ.
ಗೃಹಲಕ್ಷ್ಮಿಗೆ ಹೊಸ ರೂಲ್ಸ್: ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಇನ್ಮುಂದೆ 'ಜೀವಂತ ಪ್ರಮಾಣ ಪತ್ರ' (Life Certificate) ಕಡ್ಡಾಯಗೊಳಿಸುವ ಸಾಧ್ಯತೆಯಿದೆ.
ತೆರಿಗೆ ಏರಿಕೆ ಬಿಸಿ?
ಆದಾಯದ ಕೊರತೆಯನ್ನು ನೀಗಿಸಲು ಮುಖ್ಯಮಂತ್ರಿಗಳು ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಇದರ ಭಾಗವಾಗಿ ಅಬಕಾರಿ (ಮದ್ಯ) ಮತ್ತು ವಿಲಾಸಿ ವಸ್ತುಗಳ ಮೇಲಿನ ತೆರಿಗೆಯನ್ನು ಹೆಚ್ಚಿಸುವ ಮೂಲಕ ಬೊಕ್ಕಸ ತುಂಬಿಸಲು ಸರ್ಕಾರ ಮುಂದಾಗುವ ಸಾಧ್ಯತೆ ದಟ್ಟವಾಗಿದೆ. ಒಟ್ಟಿನಲ್ಲಿ, ಅಭಿವೃದ್ಧಿ ಮತ್ತು ಜನಪ್ರಿಯ ಯೋಜನೆಗಳ ನಡುವೆ ಸಮತೋಲನ ಕಾಯ್ದುಕೊಳ್ಳುವ ಒತ್ತಡದಲ್ಲಿರುವ ಸಿದ್ದರಾಮಯ್ಯ ಅವರು, ಈ ಬಜೆಟ್‌ನಲ್ಲಿ ಯಾವ ಮ್ಯಾಜಿಕ್ ಮಾಡಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ:ಸೈಬರ್ ಚೋರರ ಹಾಟ್ ಫೇವರೆಟ್ ಆದ ಕೇಂದ್ರ ಸಚಿವೆ.. ಸೀತಾರಾಮನ್ ಹೆಸರಲ್ಲಿ ಹೊಸ ದಂಧೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us