/newsfirstlive-kannada/media/media_files/2025/10/28/siddaramaiah-5-2025-10-28-21-39-11.jpg)
ಒಂದ್ಕಡೆ ನವೆಂಬರ್ ಕ್ರಾಂತಿಯ ಚರ್ಚೆಯಾಗ್ತಿದ್ರೆ, ಈ ನಡುವೆಯೇ ಸಿಎಂ ಸಿದ್ದರಾಮಯ್ಯ ದೆಹಲಿ ಪ್ರವಾಸಕ್ಕೆ ಮುಹೂರ್ತ ಫಿಕ್ಸಾಗಿದೆ. ಆದ್ರೆ ಹೈಕಮಾಂಡ್ ನಾಯಕರ ಮುಂದೆ ಸಿಎಂ ಬದಲಾವಣೆ ಚರ್ಚೆಯಾಗುತ್ತಾ ಅನ್ನೋ ಪ್ರಶ್ನೆಗಳೂ ಮೂಡಿದೆ. ಆದ್ರೆ ಈ ಚರ್ಚೆಗೆ ತಿಲಾಂಜಲಿ ಇಟ್ಟಂತೆ ಸಿಎಂ ಸಿದ್ದರಾಮಯ್ಯ ಅವರು ಸಂಪುಟ ವಿಸ್ತರಣೆಯ ಬಾಣ ಬಿಟ್ಟಿದ್ದಾರೆ.
ನಾಯಕತ್ವ ಬದಲಾವಣೆನಾ ಅಥವಾ ಸಂಪುಟ ವಿಸ್ತರಣೆನಾ.. ರಾಜ್ಯ ರಾಜಕೀಯದ ಮೊಗಸಾಲೆಯಲ್ಲಿ ಈಗ ನವೆಂಬರ್ ಕ್ರಾಂತಿಯ ಗೌಜು-ಗದ್ದಲ ಜೋರಾಗಿ ಕೇಳಿಸ್ತಿದೆ.. ಹಾಗಂತೆ, ಹೀಗಂತೆ ಎನ್ನುವ ಅಂತೆ-ಕಂತೆಗಳ ಪುರಾಣ ರೀಲುಗಟ್ಟಲೇ ಹರಿದಾಡ್ತಿದೆ.. ದಿನ ಬೆಳಗಾದ್ರೆ ಕ್ಯಾಪ್ಟನ್ಸಿ ಬಗ್ಗೆಯೇ ಚರ್ಚೆಯಾಗ್ತಿದೆ.. ಸದ್ಯ ಕಾಂಗ್ರೆಸ್​ನ ರಾಷ್ಟ್ರೀಯ ನಾಯಕರು ಬಿಹಾರ ಚುನಾವಣೆಯ ಪ್ರಚಾರ ಹಾಗೂ ಲೆಕ್ಕಾಚಾರದ ವ್ಯಸ್ತರಾಗಿದ್ದಾರೆ. ಬಿಹಾರ ಎಲೆಕ್ಷನ್ ಬಳಿಕ ರಾಜ್ಯದಲ್ಲಿ ಕ್ರಾಂತಿಕಾರಕ ಬದಲಾವಣೆಯ ಚಕ್ರ ಸುತ್ತಿದೆ.
ಸಂಪುಟ ವಿಸ್ತರಣೆಯ ಗುಟ್ಟು ಬಿಚ್ಚಿಟ್ಟ ಸಿಎಂ ಸಿದ್ದು!
ಬಿಹಾರ ಚುನಾವಣೆ ಬಳಿಕ ಸಂಪುಟಕ್ಕೆ ಮೇಜರಿ ಸರ್ಜರಿ ಎಂಬ ಸುದ್ದಿಗೆ ಈಗ ಬಲ ಬಂದಂತಾಗಿದೆ. ಕಾರಣ ಇದನ್ನು ಹೇಳ್ತಿರೋದು ಬೇರೆ ಯಾರೂ ಅಲ್ಲ. ಸ್ವತಃ ಸಿಎಂ ಸಿದ್ದರಾಮಯ್ಯ ಬಿಹಾರ ಮತ ಕದನದ ಬಳಿಕ ಸಂಪುಟಕ್ಕೆ ಆಪರೇಷನ್ ಮಾಡಲು ಸಿಎಂ ಸಿದ್ದರಾಮಯ್ಯ ಚಿಂತನೆ ನಡೆಸಿದ್ದು ಇವತ್ತು ತಮ್ಮ ತವರು ಮೈಸೂರಲ್ಲಿ ಮಾಧ್ಯಮಗಳ ಎದುರೇ ಈ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ನವೆಂಬರ್ 15ರಂದು ದೆಹಲಿ ಯಾತ್ರೆ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಮಾಧ್ಯಮಗಳ ಮೇಲೆ ಸಿಟ್ಟಾದ ಸಿಎಂ ಸಿದ್ದರಾಮಯ್ಯ
ನಿನ್ನೆ ಬೆಂಗಳೂರಲ್ಲಿ ಬಿಹಾರ ಸಮಾಜದ ಮುಖಂಡರು ಡಿಸಿಎಂ ಡಿಕೆಶಿ ಸಿಎಂ ಆಗಲಿ ಎಂಬ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಪಕ್ಷದಲ್ಲಿ ನಮ್ಮದೇನೂ ಇಲ್ಲ.. ಎಲ್ಲವನ್ನು ಹೈಕಮಾಂಡ್ ತೀರ್ಮಾನಿಸುತ್ತೆ ಅಂತ ಸಚಿವ ಬೋಸರಾಜು ಪಕ್ಷನಿಷ್ಠೆ ತೋರಿಸಿದ್ದಾರೆ. ಎಲ್ಲರಿಗೂ ಸಚಿವ ಸ್ಥಾನ ಬೇಕು.. ನಾಯಕತ್ವ ಬದಲಾವಣೆ ಹೈಕಮಾಂಡ್​ಗೆ ಬಿಟ್ಟಿದ್ದು ಎಂದಿದ್ದಾರೆ.
ಪವರ್​ಶೇರಿಂಗ್ ಪ್ರಸ್ತಾಪ ಇಲ್ಲ ಎಂದ ಸಚಿವ ದಿನೇಶ್
ನವೆಂಬರ್​​ನಲ್ಲಿ ಪವರ್​ ಶೇರಿಂಗ್ ಪ್ರಸ್ತಾಪವೇ ಇಲ್ಲ ಅಂತ ದಿನೇಶ್ ಗುಂಡೂರಾವ್ ಮಗುಮ್ಮಾಗಿ ಉತ್ತರ ನೀಡಿದ್ದಾರೆ.. ಬಿಹಾರ ಎಲೆಕ್ಷನ್​​​ನಲ್ಲಿ ವರಿಷ್ಠರು ಬ್ಯುಸಿಯಾಗಿದ್ದು ಆ ಬಳಿಕವೇ ಏನಾದ್ರೂ ಆಗಬಹುದು ಎಂಬ ಕವಡೆ ಹಾಕಿದ್ದಾರೆ.
ಒಟ್ಟಾರೆ ಸಂಪುಟ ವಿಸ್ತರಣೆಯ ಚೆಂಡು ಈಗ ಹೈಕಮಾಂಡ್ ಪಿಚ್​​​ನಲ್ಲಿದೆ. ಸಂಪುಟ ವಿಸ್ತರಣೆಗೆ ಹೈಕಮಾಂಡ್ ಸಮ್ಮತಿ ಸೂಚಿಸಿದ್ರೆ ಸಿದ್ದರಾಮಯ್ಯರೇ ಮುಂದೆಯೂ ಸಿಎಂ ಆಗಿ ಮುಂದುವರಿಯೋದು ಪಕ್ಕಾ ಆಗಲಿದೆ. ಇದೇ ಕಾರಣಕ್ಕೆ ಸಂಪುಟ ವಿಸ್ತರಣೆ ಅಸ್ತ್ರ ಪ್ರಯೋಗಿಸಿದ್ರಾ ಎನ್ನಲಾಗ್ತಿದೆ. ಒಂದು ವೇಳೆ ಸಂಪುಟ ಪುನಾರಚನೆ ಆದ್ರೆ ಅನುಮಾನವೇ ಬೇಡ ಸಿಎಂ ಸಿದ್ದರಾಮಯ್ಯ ಭದ್ರವಾಗಲಿದ್ದಾರೆ. ಈ ನಡುವೆ ಡಿಕೆಶಿ ಹೂಡುವ ದಾಳಗಳ ಬಗ್ಗೆ ಕುತೂಹಲ ಮೂಡಿದೆ. ಬಿಹಾರ ಎಲೆಕ್ಷನ್ ಬಳಿಕ ಸಂಪುಟಕ್ಕೆ ಸರ್ಜರಿಯಾಗುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us