Advertisment

ಟಾಟಾ ಟ್ರಸ್ಟ್ ವಿವಾದಕ್ಕೆ ಹೊಸ ಟ್ವಿಸ್ಟ್​.. ​ಮೆಹ್ಲಿ ಮಿಸ್ತ್ರಿ ಕಡೆಯಿಂದ ಎಲ್ಲಾ ಟ್ರಸ್ಟಿಗಳಿಗೆ ಎಚ್ಚರಿಕೆ ಸಂದೇಶ..!

ಟಾಟಾ ಟ್ರಸ್ಟ್​ ಮಂಡಳಿಯ ತಿಕ್ಕಾಟ ಜೋರಾಗಿದ್ದು, ಈ ವಿವಾದವು ಮತ್ತೊಂದು ಹಂತಕ್ಕೆ ತಲುಪಿದೆ. ಮಂಡಳಿಯು ಮೆಹ್ಲಿ ಮಿಸ್ತ್ರಿ ಅವರ ಮರು ನೇಮಕಾತಿ ಪ್ರಸ್ತಾವನೆಯನ್ನು ಬಹುಮತದಿಂದ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಮೆಹ್ಲಿ ಮಿಸ್ತ್ರಿ, ಮುಂಬೈನ ಚಾರಿಟಿ ಆಯುಕ್ತರಿಗೆ ಕೇವಿಯಟ್ ಸಲ್ಲಿಸಿದ್ದಾರೆ.

author-image
Ganesh Kerekuli
mehli mistry (1)
Advertisment

ಟಾಟಾ ಟ್ರಸ್ಟ್​ ಮಂಡಳಿಯ (Tata Trusts) ತಿಕ್ಕಾಟ ಜೋರಾಗಿದ್ದು, ಈ ವಿವಾದವು ಮತ್ತೊಂದು ಹಂತಕ್ಕೆ ತಲುಪಿದೆ. ಮಂಡಳಿಯು ಮೆಹ್ಲಿ ಮಿಸ್ತ್ರಿ (Mehli Mistry) ಅವರ ಮರು ನೇಮಕಾತಿ ಪ್ರಸ್ತಾವನೆಯನ್ನು ಬಹುಮತದಿಂದ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಮೆಹ್ಲಿ ಮಿಸ್ತ್ರಿ, ಮುಂಬೈನ ಚಾರಿಟಿ ಆಯುಕ್ತರಿಗೆ ಕೇವಿಯಟ್ ಸಲ್ಲಿಸಿದ್ದಾರೆ. 

Advertisment

ನೇಮಕಾತಿ ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ವಿಚಾರಣೆ ನಡೆಸುವಂತೆ ಕೇವಿಯಟ್​​ನಲ್ಲಿ ಕೋರಿದ್ದಾರೆ. ಆ ಮೂಲಕ ಮೆಹ್ಲಿ ಮಿಸ್ತ್ರಿ, ಸರ್ ದೋರಾಬ್ಜಿ ಟಾಟಾ ಟ್ರಸ್ಟ್ (Sir Dorabji Tata Trust), ಸರ್ ರತನ್ ಟಾಟಾ ಟ್ರಸ್ಟ್ ( Sir Ratan Tata Trust) ಮತ್ತು ಬಾಯಿ ಹಿರಾಬಾಯಿ ಜಮ್ಸೆಟ್ಜಿ ನವಸಾರಿ ಚಾರಿಟೇಬಲ್ ಸಂಸ್ಥೆಯ (Bai Hirabai Jamsetji Navsari Charitable Institution) ಎಲ್ಲಾ ಟ್ರಸ್ಟಿಗಳಿಗೆ ಹಾಗೂ ಅಧ್ಯಕ್ಷ ನೋಯೆಲ್ ಟಾಟಾ (Noel Tata) ಸೇರಿದಂತೆ ಎಲ್ಲರಿಗೂ ಎಚ್ಚರಿಕೆಯ ಸೂಚನೆ ನೀಡಿದ್ದಾರೆ. ಮೆಹ್ಲಿ ಮಿಸ್ತ್ರಿ, ರತನ್ ಟಾಟಾ ಅವರ ವಿಲ್‌ನ ಕಾರ್ಯನಿರ್ವಾಹಕರಾಗಿದ್ದಾರೆ. 

ನಿಯಮ ಹೇಳೋದು ಏನು..? 

ನಿಯಮಗಳ ಪ್ರಕಾರ.. ಟಾಟಾ ಟ್ರಸ್ಟ್‌ಗಳು 90 ದಿನಗಳಲ್ಲಿ ಚಾರಿಟಿ ಆಯುಕ್ತರಿಗೆ ಬದಲಾವಣೆಗಳ ಕುರಿತು ವರದಿ ಸಲ್ಲಿಸಬೇಕು. ಚಾರಿಟಿ ಆಯುಕ್ತರು ಹೊಸ ಮಂಡಳಿ ಪ್ಲಾನ್ ಅನ್ನು ಅನುಮೋದಿಸಿದ ನಂತರವೇ ಟ್ರಸ್ಟ್‌ಗಳು ತಮ್ಮ ಬ್ಯಾಂಕ್ ಖಾತೆಗಳು, ಅಧಿಕೃತ ಪತ್ರವ್ಯವಹಾರ ಮತ್ತು ಇತರ ಸಹಿದಾರರಿಗೆ ಬದಲಾವಣೆ ಮಾಡಬಹುದು.

ಇದನ್ನೂ ಓದಿ:ಬಿಗ್​ಬಾಸ್​ ಮನೆಯ ನೆಮ್ಮದಿ ಹಾಳು ಮಾಡವ್ರೆ ರಿಷಾ.. ಮುಖಕ್ಕೆ ಮಸಿ ಬಳಿದು ಆಕ್ರೋಶ..!

Advertisment

mehli mistry

ಅಂತೆಯೇ ಟಾಟಾ ಟ್ರಸ್ಟ್ಸ್‌ನಲ್ಲಿ ಟ್ರಸ್ಟಿಯನ್ನು ಮರು ನೇಮಕ ಮಾಡಲು ಎಲ್ಲಾ ಟ್ರಸ್ಟಿಗಳ ಸರ್ವಾನುಮತದ ಒಪ್ಪಿಗೆಯ ಅಗತ್ಯವಿದೆ. ಅಕ್ಟೋಬರ್ 2022 ರಲ್ಲಿ ಟಾಟಾ ಗ್ರೂಪ್‌ನ ದಿಗ್ಗಜ, ದಿವಂಗತ ರತನ್ ಟಾಟಾ ಅವರು ಮೂರು ವರ್ಷಗಳ ಅವಧಿಗೆ ಮೆಸ್ತ್ರಿಯನ್ನು ನೇಮಕ ಮಾಡಿದ್ದರು. ಅವರ ಅವಧಿಯು ಅಕ್ಟೋಬರ್ 28, 2025 ರಂದು ಮುಕ್ತಾಯಗೊಳ್ಳಬೇಕಿತ್ತು. ಅಕ್ಟೋಬರ್ 23 ರಂದು ಟಾಟಾ ಟ್ರಸ್ಟ್ಸ್ ಅವರನ್ನು ಶಾಶ್ವತ ಟ್ರಸ್ಟಿಯಾಗಿ ಮರು ನೇಮಕ ಮಾಡಲು ಟ್ರಸ್ಟಿಗಳ ಒಪ್ಪಿಗೆ ಕೋರಿ ಸುತ್ತೋಲೆ ಹೊರಡಿಸಿತು.

ಟಾಟಾ ಟ್ರಸ್ಟ್​ನ ಅಧ್ಯಕ್ಷ ನೋಯಲ್ ಟಾಟಾ, ವೇಣು ಶ್ರೀನಿವಾಸನ್, ವಿಜಯ ಸಿಂಗ್ ಅವರು ಮೆಹ್ಲಿ  ಮಿಸ್ತ್ರೀ ಅವರ ಸೇವಾವಧಿಯ ವಿಸ್ತರಣೆಗೆ ವಿರೋಧವಾಗಿದ್ದಾರೆ. ಇನ್ನೂಳಿದ ಡರಿಯಸ್ ಕಂಭಾಟಾ, ಪ್ರಮೀಟ್ ಜವೇರಿ ಮತ್ತು ಜಹಂಗೀರ್ ಎಚ್‌.ಸಿ. ಜಹಂಗೀರ್ ಮಾತ್ರವೇ ಮೆಹಿಲಿ ಮಿಸ್ತ್ರೀ ಮುಂದುವರಿಕೆಯ ಪರವಾಗಿದ್ದಾರೆ. ಟಾಟಾ ಟ್ರಸ್ಟ್ ನಲ್ಲಿ ಈ ಭಿನ್ನಾಭಿಪ್ರಾಯದಿಂದ ಮೆಹ್ಲಿ ಮಿಸ್ತ್ರೀ ಅವರಿಗೆ ಟಾಟಾ ಟ್ರಸ್ಟ್ ನಲ್ಲಿ ಮುಂದುವರಿಕೆಗೆ ಅವಕಾಶ ಸಿಗುತ್ತಿಲ್ಲ. ಟಾಟಾ ಟ್ರಸ್ಟ್ಸ್ ಮಂಡಳಿಗೆ ಮೆಹ್ಲಿ ಮಿಸ್ತ್ರಿಯನ್ನು ಮರು ನೇಮಕ ಮಾಡಿದ ನಂತರ ಉದ್ವಿಗ್ನತೆ ಹೆಚ್ಚಾಗಿದೆ.

ಇದನ್ನೂ ಓದಿ: ರಕ್ಷಿತಾ ನಿಜವಾಗಿಯೂ ಕಾಲು ತೋರಿಸಿದ್ಲಾ? ಅಶ್ವಿನಿ ಮುಖವಾಡ ಕಳಚಿಟ್ಟ ಗಿಲ್ಲಿ, ಧನು..! VIDEO

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Tata Trusts Mehli Mistry
Advertisment
Advertisment
Advertisment