/newsfirstlive-kannada/media/media_files/2025/11/03/ashwini-gowda-2025-11-03-20-19-56.jpg)
ಅಶ್ವಿನಿ ಗೌಡ ಜಗಳ ಆಡೋದರಲ್ಲಿ ಎತ್ತಿದ ಕೈ ಅನ್ನೋದು ಎಲ್ಲರಿಗೂ ತಿಳಿದಿರೋದೆ. ಆದ್ರೆ ಅವ್ರು ಮಾತು ತಿರುಗಿಸೋದರಲ್ಲೂ ಎತ್ತಿದ ಕೈ ಅನ್ನೋದು ಈಗ ಬಯಲಾಗಿದೆ. ಗಿಲ್ಲಿ ಹಾಗೂ ಧನುಷ್ ಇದಕ್ಕೆಯೇ ಅಶ್ವಿನಿ ಗೌಡಗೆ ಕ್ಲಾಸ್ ತಗೊಂಡಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ನಡೆದ ಮಸಿ ಬಳಿಯೋ ಟಾಸ್ಕ್‌ನಲ್ಲಿ ಅಶ್ವಿನಿ ಗೌಡರ ಮುಖವಾಡ ಕಳಚಿ ಬಿದ್ದಿದೆ. ಅಶ್ವಿನಿ ಗೌಡ ಮುಖಕ್ಕೆ ಮಸಿ ಬಳಿದಿರೋ ಧನುಷ್, ಅವ್ರು ಯಾರಾದ್ರೂ ಇಬ್ಬರು ಜಗಳ ಆಡುವಾಗ ಸುಖಾಸುಮ್ಮನೆಯಾದ್ರೂ ತಮ್ಮನ್ನೂ ಸೇರಿಸಿಕೊಳ್ತಾರೆ. ಅಲ್ಲದೆ ಒಬ್ಬರು ಜಗಳ ಆಡುವಾಗ ಆಡಿದ ಮಾತನ್ನು ನೀವು ಬೇರೆ ರೀತಿಯೇ ಅರ್ಥ ಮಾಡಿಕೊಳ್ಳುತ್ತೀರಾ, ರಕ್ಷಿತಾ ಮಾತನಾಡಿದ ವಿಚಾರವನ್ನೇ ತೆಗೆದುಕೊಳ್ಳುವುದಾದರೆ, ರಕ್ಷಿತಾ ನೀವು ಆರ್ಟಿಸ್ಟ್ ಅಂತ ಗೊತ್ತು ಆದ್ರೆ ಇಲ್ಲಿ ನಾಟಕ ಮಾಡೋಕೆ ಬರಬೇಡಿ ಅಂದಿದ್ದು. ಆದರೆ ನೀವು ಅದನ್ನು ಬೇರೆ ರೀತಿಯೇ ಮ್ಯಾನುಪ್ಯುಲೇಟ್ ಮಾಡೋಕೆ ನೋಡಿದ್ರಿ ಎಂದಿದ್ದಾರೆ.
ಇದನ್ನೂ ಓದಿ: ಬಿಗ್​ಬಾಸ್​ ಮನೆಯ ನೆಮ್ಮದಿ ಹಾಳು ಮಾಡವ್ರೆ ರಿಷಾ.. ಮುಖಕ್ಕೆ ಮಸಿ ಬಳಿದು ಆಕ್ರೋಶ..!
ಗಿಲ್ಲಿ ಕೂಡ ಇದೇ ವಿಚಾರದಲ್ಲೇ ಅಶ್ವಿನಿ ಗೌಡಗೆ ಮಸಿ ಬಳಿದಿದ್ದು, ರಕ್ಷಿತಾ ನೀವೇನಾದ್ರೂ ನನಗೆ ವೋಟ್ ಮಾಡಿದರೆ ಕಾಲು ಕೆಳಗೆ ಹಾಕಿ ತುಳಿತೀನಿ ಅಂದಿದ್ಲು. ಆದ್ರೆ ನೀವು ವೀಕೆಂಡ್‌ನಲ್ಲಿ ಅದನ್ನೇ ಕಲಾವಿದರಿಗೇ ಕಾಲು ತೋರಿಸಿದ್ಲು ಅಂತ ಹೇಳಿದ್ರಿ. ಇಲ್ಲೇ ನೀವು ಹೇಗೆ ಮಾತು ತಿರುಗಿಸುತ್ತೀರಿ ಅನ್ನೋದು ಅರ್ಥ ಆಗುತ್ತೆ ಎಂದು ಹೇಳಿದ್ದಾರೆ.
ಅಂತು ತಾವಾಡಿದ್ದೇ ಮಾತು ತಮ್ಮದೇ ವೇದವಾಕ್ಯ ಅನ್ನುವ ರೀತಿಯಲ್ಲಿ ಪೋಸು ಕೊಡುತ್ತಿದ್ದ ಅಶ್ವಿನಿ ಗೌಡರ ಮುಖವಾಡ ಈಗ ಎಲ್ಲರ ಎದುರಿಗೂ ಕಳಚಿ ಬಿದ್ದಂತಾಗಿದೆ.
ಇದನ್ನೂ ಓದಿ: ಹೊಸ ಬಾಳಿಗೆ ಕಾಲಿಟ್ಟ ದೇವರ ಮಗಳು, DKD ಖ್ಯಾತಿಯ ಚೈತ್ರಾಲಿ
Tushar & Gilli support Rakshita Shetty — slams Ashwini Gowda#BBK12live#BBK12#BBKSeason12#BiggBossKannada12#GilliNatapic.twitter.com/FZJyjYV9AB
— Venkat ⚡️ (@WealthArigato) November 3, 2025
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us