ಹೊಸ ಬಾಳಿಗೆ ಕಾಲಿಟ್ಟ ದೇವರ ಮಗಳು, DKD ಖ್ಯಾತಿಯ ಚೈತ್ರಾಲಿ

ಅಪ್ಪಟ ನಗು ಮೊಗದ ಚಲುವೆ.. ಶಾರದೆಯನ್ನ ಒಲಿಸಿಕೊಂಡ ವಿಶೇಷಚೇತನ ಮಗಳು ಚೈತ್ರಾಲಿ. ನ್ಯೂನ್ಯತೆಗಳಿಗೆ ಸೆಡ್ಡು ಹೊಡೆದು ಸಾಧನೆ ಮಾಡಿದ ಅದ್ಭುತ ನೃತ್ಯಗಾರ್ತಿ. ಚೈತ್ರಾಲಿ ಅವರು ಇದೀಗ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.

author-image
Ganesh Kerekuli
Chaitrali (1)
Advertisment

ಅಪ್ಪಟ ನಗು ಮೊಗದ ಚಲುವೆ.. ಶಾರದೆಯನ್ನ ಒಲಿಸಿಕೊಂಡ ವಿಶೇಷಚೇತನ ಮಗಳು ಚೈತ್ರಾಲಿ. ಯುವಜನತೆ ನಡುವೆ ನ್ಯೂನ್ಯತೆಗಳಿಗೆ ಸೆಡ್ಡು ಹೊಡೆದು ಸಾಧನೆ ಮಾಡಿದ ಅದ್ಭುತ ನೃತ್ಯಗಾರ್ತಿ. 

Chaitrali (2)

2021ರಲ್ಲಿ ಡಿಕೆಡಿ ಶೋಗೆ ಆಯ್ಕೆ ಆಗಿ ಸಾಧನೆ ಮಾಡಿದ ಮಾತು ಬಾರದ, ಕಿವಿ ಕೇಳದ ದೇವರ ಮಗಳು ಚೈತ್ರಾಲಿ. ಚೈತ್ರಾಲಿಯ ಫೇವರಿಟ್​ ಹೀರೋ ಪುನೀತ್​ ರಾಜ್​ಕುಮಾರ್. ಅವ್ರಿಗೂ ಅಷ್ಟೇ ಚೈತ್ರಾಲಿ ಕಂಡ್ರೇ  ಬಹಳ ಪ್ರೀತಿ. ಅಪ್ಪು ಡಿಕೆಡಿ ಶೋಗೆ ಬಂದಾಗ ಪರಸ್ಪರ ಅಕ್ಕರೆಯಿಂದ ಮಾತ್ನಾಡಿದ್ದರು.  

ಇದನ್ನೂ ಓದಿ: ಅಶ್ವಿನಿ ಕಂಡ್ರೆ ಮನೆಯವ್ರೆಲ್ಲ ಭಯ ಪಡ್ತಾರಾ? ಖಡಕ್ ಉತ್ತರ ಕೊಟ್ಟ ಮಲ್ಲಮ್ಮ..! VIDEO

Chaitrali (3)

ಸದ್ಯ ಚೈತ್ರಾಲಿ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಹಬ್ಬಳ್ಳಿಯ ದಂತದ ಗೊಂಬೆ ಚೈತ್ರಾಲಿಗೆ ಕಂಕಣಭಾಗ್ಯ ಕೂಡಿಬಂದಿದ್ದು, ಇಂದು ಶಾಸ್ತ್ರೋಕ್ತವಾಗಿ ಗಣೇಶ್​ ಎಂಬುವವರನ್ನ ವರಿಸಿದ್ದಾರೆ.

ಈ ಕರಿತು ಪೋಸ್ಟ್ ಮಾಡಿರೋ ಚೈತ್ರಾಲಿ, ನಮ್ಮಲ್ಲರ ಪ್ರೀತಿಯ ಪುನೀತ್​ ರಾಜ್​ಕುಮಾರ್​ ಹಾಗೂ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರ ಆಶೀರ್ವಾದಗಳೊಂದಿಗೆ, ನನ್ನ ಕುಟುಂಬ ಮತ್ತು ಎಲ್ಲಾ ಪ್ರೀತಿಪಾತ್ರರ ಆಶೀರ್ವಾದ ಮತ್ತು ಪ್ರೀತಿಯೊಂದಿಗೆ, ನನ್ನ ಜೀವನದ ಈ ವಿಶೇಷ ಕ್ಷಣವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದಕ್ಕೆ ನನಗೆ ಅನಂತ ಸಂತೋಷವಾಗಿದೆ.

ಇದನ್ನೂ ಓದಿ:ಸಿಎಂ ಶೂ ಕಾಯಲು ಪೊಲೀಸರ ನಿಯೋಜನೆ : ಶೂ ಬೆಲೆ ಎಷ್ಟು ಗೊತ್ತಾ?

Chaitrali (4)

ಗಣೇಶ್ ಜೊತೆ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿರುವ ಈ ಸಂದರ್ಭದಲ್ಲಿ, ನಿಮ್ಮ ಪ್ರೀತಿ ಮತ್ತು ಆಶೀರ್ವಾದಗಳು ನಮಗೆ ಅತ್ಯಂತ ಮಹತ್ವದವು ಎಂದು ಸಂತೋಷದ ಕ್ಷಣಗಳನ್ನ ಹಂಚ್ಕೋಂಡಿದ್ದಾರೆ. ನಮ್ಮ ಕಡೆಯಿಂದಲೂ ಹೊಸ ಬಾಳಿನ ಹೊತ್ತಿಸಿಲಲ್ಲಿರೋ ಚೈತ್ರಾಲಿಗೆ ಶುಭ ಹಾರೈಕೆಗಳು. 

ಇದನ್ನೂ ಓದಿ: ರಿಷಾ ಗೌಡ ವಿರುದ್ಧ ಹೊತ್ತಿ ಉರಿದ ಮನೆ.. ಚಪ್ಪಲಿ ಹೊಡೆದು ಆಚೆ ಕಳುಹಿಸ್ತಾರೆ ಎಂದಿದ್ಯಾಕೆ ರಘು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

DKD fame Chaitrali
Advertisment