ಬಿಗ್​ಬಾಸ್​ ಮನೆಯಿಂದ ಮಲ್ಲಮ್ಮ ನಿನ್ನೆ ಹೊರ ಬಂದಿದ್ದಾರೆ. ನಾಲ್ಕು ವಾರಗಳ ಕಾಲ ದೊಡ್ಮನೆಯಲ್ಲಿ ಅಚ್ಚುಕಟ್ಟಾಗಿ ಆಟವಾಡಿ ಎಲ್ಲರ ಮನಗೆದಿದ್ದರು. ಎಲ್ಲರ ಜೊತೆಗೂಡಿ ಚಿಕ್ಕವರೊಟ್ಟಿ ಚಿಕ್ಕವರಾಗಿ, ದೊಡ್ಡವರ ಜೊತೆ ದೊಡ್ಡವರಾಗಿ ವೀಕ್ಷಕರ ಹೃದಯಗೆದ್ದು, ಲಕ್ಷಾಂತರ ಅಭಿಮಾನಿಗಳ ಸಂಪಾದಿಸಿ ಮನೆಯಿಂದ ಆಚೆ ಬಂದಿದ್ದಾರೆ.
ಬೆನ್ನಲ್ಲೇ ನ್ಯೂಸ್​ಫಸ್ಟ್​​ನ ವಿಶೇಷ ಸಂದರ್ಶನದಲ್ಲಿ ಬಿಗ್​ಬಾಸ್​ನಲ್ಲಿ ಕಳೆದ ಅನುಭವಗಳ ಬಗ್ಗೆ ಮನಬಿಚ್ಚಿ ಮಾತನ್ನಾಡಿದರು. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ನೀಡಿರುವ ರಿಷಾ ಗೌಡ ಅವರು, ತಮ್ಮದಲ್ಲದ ವಿಚಾರಕ್ಕೂ ಜಗಳ ಆಡುತ್ತಾರೆ ಎಂಬ ಪ್ರಶ್ನೆಗೆ, ಹಾಗೆಲ್ಲ ಏನೂ ಇಲ್ಲ. ಅದು ಅವರ ಇಷ್ಟ ಎಂದು ಹೇಳಿದರು.
ಇದೇ ವೇಳೆ ಅಶ್ವಿನಿ ಕಂಡರೆ ಸ್ಪರ್ಧಿಗಳು ಭಯ ಪಡುತ್ತಾರಾ ಎಂದು ನ್ಯೂಸ್​ಫಸ್ಟ್ ಕೇಳಿತ್ತು. ಅದಕ್ಕೆ ಉತ್ತರಿಸಿರುವ ಮಲ್ಲಮ್ಮ.. ಯಾರು ಹೆದರಿಕೊಳ್ಳುತ್ತಾರೆ ಇಲ್ಲಿ? ಯಾರು ಸಣ್ಣವರು, ಯಾರು ಚಿಕ್ಕವರು, ಅಲ್ಲಿ ಎಲ್ಲರೂ ಒಂದೇ. ಎಲ್ಲರೂ ಆಟವಾಡಿ ಗೆಲ್ಲೋದಕ್ಕೆ ಬಂದಿರುತ್ತಾರೆ. ಯಾರೂ ಕೂಡ ಹೆದರಿಕೊಂಡು ಆಟವಾಡುತ್ತಿಲ್ಲ. ಜಗಳ ಆಡುವ ಟೈಮ್​ನಲ್ಲಿ ಜಗಳ ಆಡೋದು. ಒಟ್ಟಿಗೆ ಇರುವ ಟೈಂ ಬಂದಾಗ ಚೆನ್ನಾಗಿರೋದು ಎಂದು ಉತ್ತರಿಸಿದ್ದಾರೆ.
ಇದನ್ನೂ ಓದಿ: ವಿದ್ಯಾರ್ಥಿನಿ ಗರ್ಭಿಣಿಯಾಗಲು ನಾನು ಕಾರಣನಲ್ಲ ಎಂದ ಯುವಕ : ನಾಲೆಗೆ ಬಿದ್ದು ಆತ್ಮಹತ್ಯೆ
/filters:format(webp)/newsfirstlive-kannada/media/media_files/2025/10/25/mallamma-2025-10-25-17-44-47.png)
ಇದೇ ವೇಳೆ ಪ್ರಿನ್ಸಿ ರಘು ಬಗ್ಗೆ ಮಾತನ್ನಾಡಿ, ಅವರು ಒಂದು ವಾರ ಕ್ಯಾಪ್ಟನ್ ಆಗಿದ್ದು ತುಂಬಾ ಖುಷಿ ಅಯ್ತು. ಮತ್ತೆ ಅವರೇ ಕ್ಯಾಪ್ಟನ್ ಆಗಬೇಕು ಅಂತ ನಾನು ಮತ್ತು ಗಿಲ್ಲಿ ವೋಟ್ ಮಾಡಿದ್ವಿ. ರಘು ಕ್ಯಾಪ್ಟನ್ಸಿನಲ್ಲಿ ಮನೆಯ ಜವಾಬ್ದಾರಿಯನ್ನು ತುಂಬಾ ನೀಟಾಗಿ ನೋಡಿಕೂಂಡರು. ಮನೆಯಲ್ಲಿ ಎಲ್ಲರಿಗೂ ಕೆಲಸ ವಹಿಸುವುದು, ಮನೆಯವರನ್ನು ನಿಭಾಯಿಸುವುದರಲ್ಲಿ ಧನುಷ್​ಗೆ ಹೋಲಿಸಿಕೊಂಡರೆ ರಘು ಉತ್ತಮ.
ಇದನ್ನೂ ಓದಿ:ಗಿಲ್ಲಿಗೆ ಹಲ್ಲೆ ಮಾಡಿದ ರಿಷಾ ಗೌಡ.. ಬಿಗ್​ಬಾಸ್ ಮನೆಯಿಂದ ಆಚೆ ಹೋಗ್ತಾರಾ..? VIDEO
/filters:format(webp)/newsfirstlive-kannada/media/media_files/2025/10/02/mallamma-2025-10-02-12-18-07.jpg)
ಕಾಕ್ರೋಚ್ ಸುಧಿ ಬಗ್ಗೆ ಹೇಳ್ಬೆಕು ಅದ್ರೆ, ಅವ್ರು ಸ್ವಲ್ಪ ಒಗಟು. ಯಾಕಂದ್ರೆ ಧ್ರುವಂತ್ ಜೊತೆ ಇದಿದ್ದಾಕ್ಕೆ ಹಾಗೂ ಅಮ್ಮ ಅಮ್ಮ ಬಕೆಟ್ ಹಿಡಿತ್ತಾರೆ ಎಂದು ಹಿಯಾಳಿಸಿದರು. ಅದಕ್ಕೆ ನಾನು ಮಡಿಕೆ ಟಾಸ್ಕ್ ನಲ್ಲಿ ಸುಧಿನಾ ಟಾರ್ಗೆಟ್ ಮಾಡ್ಡೆ. ರಕ್ಷಿತಾ ಗೆಜ್ಜೆ ವಿಚಾರದಲ್ಲಿ ಸುಧಿ, ಅಶ್ವಿನಿಗೆ ಸಪೋರ್ಟ್​ ಮಾಡಿದ್ರು. ನಾವೆಲ್ಲ ಅಶ್ವಿನಿ ಬೆಡ್ ಚೇಕ್ ಮಾಡಿದಾಗ ಅಲ್ಲಿ ಗೆಜ್ಜೆ ಸಿಕ್ತು. ಆದರೆ ಅದನ್ನು ಅಶ್ವಿನಿ ಒಪ್ಕೊಂಡಿಲ್ಲ. ರಕ್ಷಿತಾಗೆ ಅಶ್ವಿನಿ ತುಂಬಾ ಬೈದಿದ್ದಾರೆ. ಆವಾಗ ನಾನು ದ್ವನಿ ಎತ್ತಿದಾಗ ನಿಮ್ಗೆ ಯಾಕ್ ಬೇಕು ಅಂತ ನನಗೆ ತಿರುಗಿ ಕೇಳಿದ್ರು. ನಾನು ಯಾರ ತಂಟೆಗೂ ಹೋಗಲ್ಲ ಅಂತಾ ಮನಬಿಚ್ಚಿ ಮಾತನ್ನಾಡಿದ್ದಾರೆ. ಮಲ್ಲಮ್ಮ ಏನೆಲ್ಲ ಮಾತನ್ನಾಡಿದರು ಎಂದು ತಿಳಿದುಕೊಳ್ಳಲು ಮೇಲಿನ ವಿಡಿಯೋ ಕ್ಲಿಕ್ ಮಾಡಿ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us