/newsfirstlive-kannada/media/media_files/2025/08/13/darshan-pavitra-gowda-2025-08-13-19-49-24.jpg)
ದರ್ಶನ್, ಪವಿತ್ರ ಗೌಡ
ಬೆಂಗಳೂರಿನ 64ನೇ ಸಿಸಿಹೆಚ್ ಕೋರ್ಟ್​ನ ನ್ಯಾಯಾಧೀಶರು ಇವತ್ತು ರೇಣುಕಾಸ್ವಾಮಿ ಪ್ರಕರಣದ ಆರೋಪಿಗಳ ಮೇಲಿನ ಆರೋಪಗಳಿಗೆ ಸಂಬಂಧಿಸಿ ಚಾರ್ಜ್ ಫ್ರೇಮ್ ಮಾಡಿದರು. ದೋಷಾರೋಪ ಓದಿ ಹೇಳುವ ಹಿನ್ನೆಲೆಯಲ್ಲಿ ಎಲ್ಲಾ ಆರೋಪಿಗಳಿಗೂ ಖುದ್ದು ಹಾಜರಿರುವಂತೆ ನ್ಯಾಯಾಧೀಶರು ಸೂಚಿಸಿದ್ದರು.
ಅಂತೆಯೇ ಮೊದಲ ಆರೋಪಿ ದರ್ಶನ್ ಹಾಗೂ ಪವಿತ್ರ ಗೌಡ ಕೂಡ ಕೋರ್ಟ್​ ಹಾಲ್​ಗೆ ಆಗಮಿಸಿದ್ದರು. ಈ ವೇಳೆ ಇಬ್ಬರ ನಡುವೆ ಸಂಭಾಷಣೆ ನಡೆದಿದೆ. ಎರಡನೇ ಬಾರಿಗೆ ಬಂಧನವಾದ ಬಳಿಕ ಇದೇ ಮೊದಲ ಬಾರಿಗೆ ದರ್ಶನ್ ಹಾಗೂ ಪವಿತ್ರಗೌಡ ಮುಖಾಮುಖಿ ಆಗಿದ್ದರು.
ಇದನ್ನೂ ಓದಿ: ವಿದ್ಯಾರ್ಥಿನಿ ಗರ್ಭಿಣಿಯಾಗಲು ನಾನು ಕಾರಣನಲ್ಲ ಎಂದ ಯುವಕ : ನಾಲೆಗೆ ಬಿದ್ದು ಆತ್ಮಹತ್ಯೆ
ನ್ಯಾಯಾಧೀಶರ ಮುಂದೆ ಪವಿತ್ರಗೌಡ, ಪವಿತ್ರ ಗೌಡ ಹಿಂದೆ ದರ್ಶನ್ ನಿಂತಿದ್ದರು. ಆ ವೇಳೆ ಮುಂದೆ ಬಾ ಎಂದು ದರ್ಶನ್​​ಗೆ ಪವಿತ್ರ ಗೌಡ ಕರೆದಿದ್ದಾಳೆ. ಅದಕ್ಕೆ ದರ್ಶನ್ ಬರ್ತೀನಿ ಎಂದಿದ್ದಾರೆ. ಇನ್ನು, ವಿಚಾರಣೆ ವೇಳೆ ಇಬ್ಬರಿಗೂ ಮಾತನಾಡಲು ಅವಕಾಶ ಕೊಡಲಾಗಿತ್ತು. ಇನ್ನು, ಜೈಲಿನಿಂದ ಬರಬೇಕಾದರೆ ಬೇರೆ ಬೇರೆ ವಾಹನಗಳಲ್ಲಿ ಆರೋಪಿಗಳನ್ನು ಕರೆದುಕೊಂಡು ಬರಲಾಗಿತ್ತು.
ದೋಷಾರೋಪ ನಿಗದಿ ಹಿನ್ನೆಲೆಯಲ್ಲಿ ನಟ ದರ್ಶನ್ ಸೇರಿದಂತೆ 17 ಆರೋಪಿಗಳು ಬೆಂಗಳೂರಿನ 64 ಸಿಸಿಹೆಚ್ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಬೆಂಗಳೂರಿನ 64 ಸಿಸಿಹೆಚ್ ಕೋರ್ಟ್‌ಗೆ ಖುದ್ದು ಹಾಜರಾಗಬೇಕು ಎಂದು ಎಲ್ಲಾ ಆರೋಪಿಗಳಿಗೆ ನ್ಯಾಯಾಧೀಶರು ಈ ಮೊದಲೇ ತಿಳಿಸಿದ್ದರು. ಪರಪ್ಪನ ಅಗ್ರಹಾರ ಜೈಲಿನಿಂದ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 6 ಆರೋಪಿಗಳನ್ನು ಪೊಲೀಸರು ನ್ಯಾಯಾಲಕ್ಕೆ ಕರೆತಂದರು. ಉಳಿದಂತೆ ಜಾಮೀನಿನ ಮೇಲೆ ಹೊರಗಿದ್ದ 11 ಆರೋಪಿಗಳು ನೇರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಇದನ್ನೂ ಓದಿ: ದರ್ಶನ್ ಅಂಡ್ ಡಿ ಗ್ಯಾಂಗ್ ವಿರುದ್ಧ ದೋಷಾರೋಪ ಪ್ರಕಟಿಸಿದ ಕೋರ್ಟ್​..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us