Advertisment

ಗಿಲ್ಲಿಗೆ ಹಲ್ಲೆ ಮಾಡಿದ ರಿಷಾ ಗೌಡ.. ಬಿಗ್​ಬಾಸ್ ಮನೆಯಿಂದ ಆಚೆ ಹೋಗ್ತಾರಾ..? VIDEO

ಗಿಲ್ಲಿ ನಟನ ಮೇಲೆ ರಿಷಾ ಗೌಡ ದೈಹಿಕ ಹಲ್ಲೆ ಮಾಡಿದ್ದಾರೆ. ಬೆನ್ನಲ್ಲೇ ರಿಷಾ ಗೌಡರನ್ನ ಬಿಗ್​ಬಾಸ್​ ನಿಯಮಗಳ ಪ್ರಕಾರ ಮನೆಯಿಂದ ಹೊರ ಕಳುಹಿಸಬೇಕು ಎಂಬ ಒತ್ತಾಯ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದೆ.

author-image
Ganesh Kerekuli
Gilli and risha
Advertisment

ಗಿಲ್ಲಿ ನಟನ ಮೇಲೆ ರಿಷಾ ಗೌಡ ದೈಹಿಕ ಹಲ್ಲೆ ಮಾಡಿದ್ದಾರೆ. ಬೆನ್ನಲ್ಲೇ ರಿಷಾ ಗೌಡರನ್ನ ಬಿಗ್​ಬಾಸ್​ ನಿಯಮಗಳ ಪ್ರಕಾರ ಮನೆಯಿಂದ ಹೊರ ಕಳುಹಿಸಬೇಕು ಎಂಬ ಒತ್ತಾಯ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದೆ.  

Advertisment

ನಿಯಮಗಳ ಪ್ರಕಾರ ಯಾವ ಸ್ಪರ್ಧಿಯೂ ಉದ್ದೇಶಪೂರ್ವಕವಾಗಿ ಹಲ್ಲೆ ಮಾಡುವಂತಿಲ್ಲ. ಈ ಹಿಂದೆ ಕೂಡ ಅನೇಕ ಸ್ಪರ್ಧಿಗಳು ಮ್ಯಾನ್ ಹ್ಯಾಂಡ್ಲಿಂಗ್ ಮಾಡಿ ಬಿಗ್​ಬಾಸ್ ಮನೆಯಿಂದ ಆಚೆ ಬಂದಿದ್ದಾರೆ. ಕಳೆದ ಸೀಸನ್​​ನಲ್ಲಿ ರಂಜಿತ್, ಇದೇ ವಿಚಾರಕ್ಕೆ ಬಿಗ್​ಬಾಸ್ ಮನೆಯಿಂದ ಆಚೆ ಬಂದಿದ್ದರು. ಇನ್ನು, ರಂಜಿತ್ ಮಾತ್ರವಲ್ಲ, ಕನ್ನಡ ಬಿಗ್​ಬಾಸ್​ನಲ್ಲಿ ಹುಚ್ಚ ವೆಂಕಟ್, ಸಂಯುಕ್ತ ಹೆಗಡೆ ಕೂಡ ಎಲಿಮಿನೇಟ್ ಆದವರ ಲಿಸ್ಟ್​ನಲ್ಲಿದ್ದಾರೆ. 

ಗಿಲ್ಲಿ ಮತ್ತು ರಿಷಾ ಮಧ್ಯೆ ಆಗಿದ್ದೇನು..? 

ರಿಷಾ ಸ್ನಾನಕ್ಕೆ ಹೋಗಿರುವಾಗ ಗಿಲ್ಲಿ ಬಕೆಟ್‌ ಕೊಡುವಂತೆ ಆಗಾಗ ಕೇಳಿಕೊಳ್ಳುತ್ತಾರೆ. ಬಕೆಟ್‌ ಕೊಡದಿದ್ದರೆ ಏನು ಮಾಡಬೇಕೆಂದು ತಿಳಿದಿದೆ ಎಂದೂ ಹೇಳುತ್ತಾರೆ. ಆದರೂ ರಿಷಾ ಯಾವ ರೆಸ್ಪಾನ್ಸ್‌ ನೀಡದೆ ಇದ್ದಾಗ ಕೋಪಗೊಳ್ಳುವ ಗಿಲ್ಲಿ ರೂಮ್​ಗೆ ತೆರಳಿ ರಿಷಾರ ಬಟ್ಟೆಗಳನ್ನು ತಂದು ಬಾತ್‌ರೂಂನ ಮೂಲೆಯಲ್ಲಿ ಹಾಕುತ್ತಾರೆ. 

ಇದನ್ನೂ ಓದಿ: BBK12; ಕನ್ನಡ ಮೀಡಿಯಂ ಹುಡುಗ ಗಿಲ್ಲಿ.. ಇಂಗ್ಲೀಷ್‌ ಮಾತು ಕೇಳಿ ಎಲ್ಲರಿಗೂ ನಗುವೋ ನಗು..!

Advertisment

ಬಾತ್‌ರೂಂನಿಂದ ಹೊರಕ್ಕೆ ಬರುತ್ತಿದ್ದಂತೇ ತಮ್ಮ ಬಟ್ಟೆ ರಾಶಿ ಕಂಡು ಕೋಪಗೊಳ್ಳುವ ರಿಷಾ ಗಿಲ್ಲಿಗೆ ಚೆನ್ನಾಗಿ ಬಯ್ಯುತ್ತಾರೆ. ಹೊಡೆಯುತ್ತಾರೆ ಕೂಡ. ನಂತರ ರೂಮ್​ ಒಳಕ್ಕೆ ಹೋಗಿ ಗಿಲ್ಲಿಯ ಬಟ್ಟೆಗಳನ್ನೂ ಎಲ್ಲ ಕಡೆ ಹರಡಿ ಹಾಕುತ್ತಾರೆ. ರಿಷಾರ ಆತ್ಮೀಯ ಗೆಳತಿ ಅಶ್ವಿನಿ, ಗಿಲ್ಲಿ  ಮಾಡಿದ ಎಂದು ನೀನೂ ಮಾಡಬೇಡ ಎಂದು ಹೇಳುತ್ತಲೇ ಇದ್ದರೂ ಕೇಳದ ರಿಷಾ ಎಲ್ಲವನ್ನೂ ಹರಡುತ್ತಾಳೆ.

ಇಲ್ಲಿಗೆ ಜಗಳ ನಿಲ್ಲದೆ ರೂಮ್​ಗೆ ಬರೋ ಗಿಲ್ಲಿಯನ್ನು ತಡೆಯಲು ನೂಕಲು ಶುರು ಮಾಡುತ್ತಾಳೆ. ರಕ್ಷಿತಾ ಈ ಸಮಯದಲ್ಲಿ ಮೈಮುಟ್ಟಬೇಡಿ ಎಂದು ಹೇಳುತ್ತಲೇ ಇದ್ದರೂ ಕೇಳದ ರಿಷಾ ಗಿಲ್ಲಿಯನ್ನು ನೂಕುತ್ತಲೇ ಇರುತ್ತಾಳೆ. ಈ ಜಗಳ ಎಲ್ಲಿಗೆ ತಲುಪುತ್ತೆ? ಗಿಲ್ಲಿ ಇದಕ್ಕೆ ಪ್ರತ್ಯುತ್ತರ ಕೊಡೋ ಯತ್ನ ಏನಾದ್ರೂ ಮಾಡ್ತಾರಾ? ಅನ್ನೋದನ್ನ ಇವತ್ತಿನ ಸಂಚಿಕೆಯಲ್ಲಿ ನೋಡಬೇಕು.  

ಇದನ್ನೂ ಓದಿ:ದರ್ಶನ್ ಅಂಡ್ ಡಿ ಗ್ಯಾಂಗ್ ವಿರುದ್ಧ ದೋಷಾರೋಪ ಪ್ರಕಟಿಸಿದ ಕೋರ್ಟ್​..!

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Risha Gowda Gilli Nata Bigg Boss Kannada 12 Bigg boss
Advertisment
Advertisment
Advertisment