/newsfirstlive-kannada/media/media_files/2025/10/29/gilli-and-kavya-1-2025-10-29-17-01-21.jpg)
ಗಿಲ್ಲಿಯ ಕಾಮಿಡಿ ಸೆನ್ಸ್ ಎಷ್ಟು ಫೇಮಸ್ ಆಗಿದೆಯೋ ಅವರ ಇಂಗ್ಲೀಷ್ ಕೂಡ ಅಷ್ಟೇ ಫೇಮಸ್. ವಾರದ ಪಂಚಾಯ್ತಿಯಲ್ಲಿ ಬಾದ್‌ಷಾ ಸುದೀಪ್ ಇದನ್ನು ವರ್ಲ್ಡ್ ಫೇಮಸ್ ಮಾಡಿದ್ದಾರೆ.
ಬಿಗ್‌ಬಾಸ್ ವಾರದ ಪಂಚಾಯ್ತಿಯಲ್ಲಿ ಸುದೀಪ್ ಸ್ಪರ್ಧಿಗಳಲ್ಲಿ ಏನೋ ಹೇಳಿ ಅವರು ಅದನ್ನು ಮಾಡೇ ಇಲ್ಲ ಅನ್ನೋದು ಇದ್ಯಾ? ಖಂಡಿತಾ ಇಲ್ಲ. ಯಾರೇ ಆಗಿದ್ದರೂ ಸುದೀಪ್ ಹೇಳಿದ ಟಾಸ್ಕನ್ನು ಕಂಪ್ಲೀಟ್ ಮಾಡೇ ಮಾಡ್ತಾರೆ. ಹೀಗಿರುವಾಗ ಗಿಲ್ಲಿಗೆ ಸುದೀಪ್ ನೀಡಿದ ಟಾಸ್ಕ್ ಎಲ್ಲರನ್ನು ಹೊಟ್ಟೆ ಹುಣ್ಣಾಗಿಸುವಂತೆ ಮಾಡಿದೆ.
ಇದನ್ನೂ ಓದಿ: BBK12; ಗೋಲ್ಡನ್​ ಲುಕ್​ನಲ್ಲಿ ಮಿಂಚಿದ ಕಾವ್ಯ ಶೈವ.. ಟಾಪ್- 10 ಫೋಟೋಸ್​!
/filters:format(webp)/newsfirstlive-kannada/media/media_files/2025/10/29/gilli-4-2025-10-29-17-03-10.jpg)
ಗಿಲ್ಲಿಯ ಕಾಮಿಡಿ ಎಷ್ಟು ಫೇಮಸ್ಸೋ ಬಿಗ್‌ಬಾಸ್ ಮನೆಗೆ ಬಂದಾಗಿನಿಂದ ಗಿಲ್ಲಿಯ ಇಂಗ್ಲೀಷ್ ಕೂಡ ಅಷ್ಟೇ ಫೇಮಸ್ ಆಗಿತ್ತು. ಇದನ್ನೇ ಟಾಸ್ಕ್ ಆಗಿ ನೀಡಿರೋ ಸುದೀಪ್ ಒಂದು ಎಪಿಸೋಡ್ ಪೂರ್ತಿ ಇಂಗ್ಲೀಷ್‌ನಲ್ಲೇ ಮಾತಾಡುವಂತೆ ಹೇಳಿದ್ದಾರೆ. ಗಿಲ್ಲಿ ಕೂಡ ಹೂಂ.. ಅದ್ದಿದ್ದು ಅವರ ಮಾತನ್ನು ಕೇಳಿ ನಗು ಬರದವರು ಕೂಡ ನಗೋಕೆ ಶುರು ಮಾಡಿದ್ದರು.
ಗಿಲ್ಲಿ ಸುದೀಪ್ ಚಾಲೆಂಜ್‌ನ್ನು ಎಷ್ಟು ಸೀರಿಯಸ್ ಆಗಿ ತೆಗೆದುಕೊಂಡಿದ್ದಾರೆಂದರೆ ಇಂಗ್ಲೀಷ್‌ನಲ್ಲಿ ಮಾತನಾಡಿದ್ದು ಮಾತ್ರವಲ್ಲ, ಅಶ್ವಿನಿಗಾಗಿ ಇಂಗ್ಲೀಷ್‌ನಲ್ಲಿ ನನ್ನ, ನೀನು ಗೆಲ್ಲಲಾರೆ ತಿಳಿದು ತಿಳಿದು ಛಲವೇತಕೆ ಹಾಡನ್ನು ಕೂಡ ಹಾಡಿದ್ದಾರೆ. ಅಂತು ಗಿಲ್ಲಿಯ ಇಂಗ್ಲೀಷ್ ಎಲ್ಲರನ್ನೂ ಮನರಂಜಿಸಿತು ಅನ್ನೋದು ಮಾತ್ರ ಸುಳ್ಳಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us