/newsfirstlive-kannada/media/media_files/2025/11/03/risha-gowda-2025-11-03-17-50-47.jpg)
ಗಿಲ್ಲಿ ಮೇಲೆ ಹಲ್ಲೆ ಮಾಡಿದ ಬೆನ್ನಲ್ಲೇ ರಿಷಾ ಗೌಡ ವಿರುದ್ಧ ಇತರೆ ಸ್ಪರ್ಧಿಗಳು ರೆಬಲ್ ಆದಂತೆ ಕಾಣ್ತಿದೆ. ಇದೀಗ ಬಿಗ್​ಬಾಸ್ ಕಡೆಯಿಂದ ಪ್ರೊಮೋವೊಂದು ರಿಲೀಸ್ ಆಗಿದೆ. ಅದರಲ್ಲಿ ರಿಷಾ ಗೌಡ ಮೇಲೆ ಕೆಲವು ಸ್ಪರ್ಧಿಗಳು ಮುಗಿಬಿದ್ದಿದ್ದಾರೆ.
ಪ್ರೊಮೋ ವಿಡಿಯೋ ಪ್ರಕಾರ.. ಮನೆಯ ನೆಮ್ಮದಿಯನ್ನು ಹಾಳು ಮಾಡಿದ್ದಾರೆ ಎಂದು ಮೊದಲ ಬಾರಿಗೆ ಅಭಿಷೇಕ್, ರಿಷಾ ಮುಖಕ್ಕೆ ಮಷಿ ಬಳಿದಿದ್ದಾರೆ. ನಂತರ ಗಿಲ್ಲಿ, ಮನೆಯಲ್ಲಿ ನನ್ನ ಮುಖವಾಡ ಕಳಚುತ್ತೋ, ಇಲ್ಲವೋ ಗೊತ್ತಿಲ್ಲ. ಆದರೆ ನಿನ್ನ ಮುಖವಾಡವಂತೂ ಕಳಚಿದೆ. ನಿಮ್ಮ ಮುಖವಾಡ ಬಿದ್ದು, ಒದ್ದಾಡಿ, ಸ್ವಿಮ್ಮಿಂಗ್ ಪೂಲ್​ನಲ್ಲಿ ಕೊಚ್ಚಿಕೊಂಡು ಹೋಗಿದೆ.
ಇದನ್ನೂ ಓದಿ: ಅಶ್ವಿನಿ ಕಂಡ್ರೆ ಮನೆಯವ್ರೆಲ್ಲ ಭಯ ಪಡ್ತಾರಾ? ಖಡಕ್ ಉತ್ತರ ಕೊಟ್ಟ ಮಲ್ಲಮ್ಮ..! VIDEO
ಕ್ಯಾಪ್ಟನ್ ಧನುಷ್ ಕೂಡ ರಿಷಾ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಗ್​ಬಾಸ್​ ಮನೆಯಲ್ಲಿ ಇನ್ನೊಬ್ಬರನ್ನ ಹೋಗಲೇ, ಬಾರಲೇ ಅದು, ಇದು ಎನ್ನುತ್ತಾರೆ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದಕ್ಕೆ ನಾನು ಮಾತನ್ನಾಡೋದೇ ಹಾಗೆ ಎಂದು ರಿಷಾ ಗೌಡ ಜೋರಾಗಿ ಕೂಗಿದ್ದಾರೆ. ಹೊರಗಡೆ ಹೇಗಿದ್ದೀನಿ, ಒಳಗಡೆ ಕೂಡ ಹಾಗೆಯೇ ಇದ್ದೀನಿ ಎಂದು ಕಿರುಚಾಡಿದ್ದಾರೆ.
ಕೊನೆಯಲ್ಲಿ ಬಂದ ರಘು ಕೂಡ ರಿಷಾ ಮೇಲೆ ರೆಬಲ್ ಆಗಿದ್ದಾರೆ. ನಾನೂ ಕೂಡ ಮನೆಯಲ್ಲಿ ಹೆಂಗೆಂಗೋ ಇರ್ತೀನಿ. ಮನೆಯಲ್ಲಿ ನಾನು ದೊಡ್ಡ ಮೆಂಟಲ್. ಮನೆಯಲ್ಲಿ ಇರುವ ರೀತಿಯಲ್ಲಿ ನಾನು ಇದ್ದರೆ, ಇಲ್ಲಿ ಯಾರೂ ನನ್ನ ಜೊತೆ ಇರಲ್ಲ. ಮನೆಯಲ್ಲಿ ನಾನು ಹಿಂಗೆ ಇದ್ದೆ, ಶರ್ಟ್ ಬಿಚ್ಕೊಂಡು ಇದ್ದೆ. ಪ್ಯಾಂಟ್ ಬಿಚ್ಕೊಂಡು ಇದ್ದೆ ಅಂತಾ ನಾನು ಇಲ್ಲಿಯೂ ಹಾಗೆಯೇ ಇದ್ದರೆ ಚಪ್ಪಲಿ ತೆಗೆದುಕೊಂಡು ಹೊರಗಡೆ ಆಚೆ ಕಳುಹಿಸುತ್ತಾರೆ ಎಂದು ಗುಡುಗಿದ್ದಾರೆ.
ಇದನ್ನೂ ಓದಿ:ಗಿಲ್ಲಿಗೆ ಹಲ್ಲೆ ಮಾಡಿದ ರಿಷಾ ಗೌಡ.. ಬಿಗ್​ಬಾಸ್ ಮನೆಯಿಂದ ಆಚೆ ಹೋಗ್ತಾರಾ..? VIDEO
ಮನೆ ನೆಮ್ಮದಿಯನ್ನ ಹಾಳು ಮಾಡಿದ್ರಾ ರಿಷಾ?
— JioHotStar Kannada (@JHSKannada) November 3, 2025
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BBK12#ColorsKannada#jiohotstarkannadapic.twitter.com/MupUDRGXk5
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us