/newsfirstlive-kannada/media/media_files/2025/11/03/risha-gowda-2-2025-11-03-19-11-40.jpg)
ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆಯೊಳಗೆ ಪ್ರವೇಶಿಸಿರೋ ರಿಷಾ ಗೌಡ ಮೇಲೆ ದೊಡ್ಡ ಆರೋಪ ಎದುರಾಗಿದೆ. ಇಡೀ ಮನೆಯ ನೆಮ್ಮದಿ ಹಾಳುಮಾಡುತ್ತಿರೋರು ಅವರೇ ಎಂದು ಮುಖಕ್ಕೆ ಮಸಿ ಬಳಿದಿದ್ದೂ ಆಗಿದೆ.
ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆಯೊಳಗೆ ಸೂರಜ್, ರಘು ಹಾಗೂ ರಿಷಾರ ಆಗಮನವಾದಾಗ ಇವ್ರು ಖಂಡಿತಾ ಟಫ್ ಕಾಂಪಿಟೀಟರ್ಸೇ ಇರಬೇಕು. ಇಲ್ಲ ಅಂದ್ರೆ ಹೀಗೆ ಎಂಟ್ರಿ ಸಿಗ್ತಿರಲಿಲ್ಲವೇನೋ ಅನ್ನೊ ಪ್ರಶ್ನೆ ಮೂಡಿತ್ತು. ಆದ್ರೀಗ ರಿಷಾ ಎಂಟ್ರಿ ಮನೆಯವರೆಲ್ಲರ ನೆಮ್ಮದಿಯನ್ನೇ ಹಾಳು ಮಾಡಿರುವಂತೆ ಕಾಣಿಸುತ್ತಿದೆ.
ಇದನ್ನೂ ಓದಿ: ರಿಷಾ ಗೌಡ ವಿರುದ್ಧ ಹೊತ್ತಿ ಉರಿದ ಮನೆ.. ಚಪ್ಪಲಿ ಹೊಡೆದು ಆಚೆ ಕಳುಹಿಸ್ತಾರೆ ಎಂದಿದ್ಯಾಕೆ ರಘು..?
ಮನೆಯ ನೆಮ್ಮದಿ ಹಾಳು ಮಾಡುತ್ತಿರುವವರು ಯಾರು? ಎಂದು ಮುಖಕ್ಕೆ ಮಸಿ ಬಳಿಯಲಿಕ್ಕಿದ್ದ ಟಾಸ್ಕ್‌ನಲ್ಲಿ ಮನೆಯಲ್ಲಿದ್ದ ಉಳಿದವರ ಮುಖವೂ ಕಪ್ಪಾಗಿದ್ದರೂ ರಿಷಾ ಮೇಲೆ ಆರೋಪಗಳ ಸುರಿಮಳೆಯೇ ಆಗುತ್ತಿದೆ. ಅಭಿಷೇಕ್ ಮನೆಯ ನೆಮ್ಮದಿ ಹಾಳಾಗುವುದಕ್ಕೆ ರಿಷಾನೇ ಕಾರಣ ಎಂದರೆ, ಕ್ಯಾಪ್ಟನ್ ಧನುಷ್ ಬಿಗ್‌ಬಾಸ್ ಮನೆಯಲ್ಲಿ ಇನ್ನೊಬ್ಬರನ್ನು ಹೋಗಲೆ ಬಾರಲೆ ಎಂದು ಕರೆಯೋದು ಸರಿಯಲ್ಲ ಎಂದಿದ್ದಕ್ಕೆ ಟಾಸ್ಕ್‌ನಲ್ಲೂ ಉರಿದು ಹೋಗಿರುವ ರಿಷಾ, ನಾನು ಮಾತಡೋದೆ ಹೀಗೆ ನಾನು ಹೊರಗೆ ಹೇಗಿದ್ದೀನಿ ಮನೆಯೊಳಗೂ ಹಾಗೇ ಇದ್ದೀನಿ ಎಂದು ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ.
ರಘು ಇದ್ರಿಂದ ಸಿಡಿದಿದ್ದು, ನಾನು ಹೊರಗಡೆ ಬೇರೆಯದ್ದೇ ವ್ಯಕ್ತಿ. ಮನೆಯಲ್ಲಿ ಶರ್ಟ್ ಇಲ್ಲದೆ ಪ್ಯಾಂಟ್ ಇಲ್ಲದೆ ಇರುತ್ತೀನಿ ಎಂದು ಇಲ್ಲೂ ಹಾಗೆ ಇದ್ದರೆ ಚಪ್ಪಲಿಯಲ್ಲಿ ಹೊಡೆದು ಕಳಿಸ್ತಾರೆ ಎಂದು ಹೇಳಿದ್ದಾರೆ. ಗಿಲ್ಲಿ ಕೂಡ ರಿಷಾಗೆ ಸಖತ್ತಾಗೇ ಕ್ಲಾಸ್ ತಗೊಂಡಿದ್ದಾರೆ. ರಿಷಾ ತಮ್ಮನ್ನು ಸಮರ್ಥಿಸಿಕೊಳ್ತರಾ ತಪ್ಪೆಂದು ಒಪ್ಪಿಕೊಳ್ತಾರಾ ನೋಡೋಣ ಇವತ್ತಿನ ಬಿಗ್‌ಬಾಸ್‌ನಲ್ಲಿ.
ಇದನ್ನೂ ಓದಿ: ಹೊಸ ಬಾಳಿಗೆ ಕಾಲಿಟ್ಟ ದೇವರ ಮಗಳು, DKD ಖ್ಯಾತಿಯ ಚೈತ್ರಾಲಿ
ಮನೆ ನೆಮ್ಮದಿಯನ್ನ ಹಾಳು ಮಾಡಿದ್ರಾ ರಿಷಾ?
— JioHotStar Kannada (@JHSKannada) November 3, 2025
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BBK12#ColorsKannada#jiohotstarkannadapic.twitter.com/MupUDRGXk5
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us