CM ಸಿದ್ದರಾಮಯ್ಯ ಸಂಪುಟ ಪುನಾರಚನೆ ಸಾಧ್ಯತೆ.. ಡಜನ್​​​ಗೂ ಹೆಚ್ಚು ಸಚಿವರಿಗೆ ಢವ ಢವ!

ಸಂಪುಟ ಪುನಾರಚನೆ ಶೀಘ್ರದಲ್ಲೇ ನೆರವೇರುವ ಸಾಧ್ಯತೆ ಹೆಚ್ಚುತ್ತಿದೆ. ಮೋಸ್ಟ್​​ಲೀ ನವೆಂಬರ್​ ಡಿಸೆಂಬರ್​ನಲ್ಲಿ ಸಂಪುಟ ಶಂಕುಸ್ಥಾಪನೆ ಆಗಲಿದೆ. ಎಂಟರಿಂದ ಹತ್ತರಷ್ಟು ಸಚಿವರನ್ನ ಕೈಬಿಟ್ಟು ಹೊಸ ಮುಖಗಳನ್ನ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆಯುತ್ತಿದೆ.

author-image
Bhimappa
CM_SIDDARAMAIAH (6)
Advertisment

ಸಿಎಂ ಸಿದ್ದರಾಮಯ್ಯ ಸಂಪುಟಕ್ಕೆ ಶೀಘ್ರವೇ ಶಸ್ತ್ರ ಚಿಕಿತ್ಸೆ ನಡೆಯೋ ಸಾಧ್ಯತೆ ಇದೆ. ದೊಡ್ಡ ಮಟ್ಟದಲ್ಲಿ ಸಂಪುಟ ಪುನಾರಚನೆ ಆಗಲಿದೆ ಅನ್ನೋ ಗುಸುಗುಸು ಕೇಳಿಸ್ತಿದೆ. ಈ ಶಬ್ಧ ಕೇಳಿದ ಡಜನ್​​​ಗೂ ಹೆಚ್ಚು ಸಚಿವರಿಗೆ ಢವಢವ ಶುರುವಾಗಿದೆ. ಸಂಪುಟದಿಂದ ಕೊಕ್ ಕೊಡ್ತಾರೆ ಅನ್ನೋ ಆತಂಕ ಮನೆ ಮಾಡಿದೆ. ಅಂತಿಮವಾಗಿ ಹೈಕಮಾಂಡ್ ಯಾವ ನಿಲುವು ತೆಗೆದುಕೊಳ್ಳುತ್ತೆ ಅನ್ನೋದು ಸದ್ಯದ ಕುತೂಹಲ.

ಸಮಯ.. ಅರ್ಧಕ್ಕೆ ಬಂದು ನಿಂತಿದೆ. ಮುಳ್ಳಿನ ಹಾದಿ ಬಹುದೂರ ಸಾಗಬೇಕಿದೆ. ಸಂಕಟದಲ್ಲಿ ಸರ್ಕಾರ ಏಳುಬೀಳಿನ ದಾರಿ ಸವೆದಿದ್ದು, ಆಡಳಿತಕ್ಕೆ ಹೊಸ ವೇಗ ಅನಿವಾರ್ಯತೆ ಬಿದ್ದಿದೆ. ರಾಜ್ಯ ಸರ್ಕಾರಕ್ಕೆ ಎರಡೂವರೆ ವರ್ಷದ ಹರೆಯ. ಹಾಗಾಗಿ ಸಿಎಂ ಸಿದ್ದರಾಮಯ್ಯ ಸಂಪುಟಕ್ಕೆ ಮೇಜರ್​​​ ಸರ್ಜರಿ ಆಗುವ ಸಾಧ್ಯತೆಗಳು ಹಸ್ತದ ಮನೆಯಲ್ಲಿ ಪಿಸುಗುಡ್ತಿವೆ. ಕೆಲವು ಸಚಿವರ ಎದೆ ಬಡಿತ ಹೆಚ್ಚಿಸಿದೆ.

cm siddaramaiah
ಸಿಎಂ ಸಿದ್ದರಾಮಯ್ಯ Photograph: (@siddaramaiah)

ಸಿದ್ದು ಸಂಪುಟದ ಹಲವು ಸಚಿವರಿಗೆ ಶುರುವಾಯ್ತು ಢವಢವ!

ಅಂದ್ಹಾಗೆ ಸಂಪುಟ ಪುನಾರಚನೆ ಶೀಘ್ರದಲ್ಲೇ ನೆರವೇರುವ ಸಾಧ್ಯತೆ ಹೆಚ್ಚುತ್ತಿದೆ. ಮೋಸ್ಟ್​​ಲೀ ನವೆಂಬರ್​ ಡಿಸೆಂಬರ್​ನಲ್ಲಿ ಸಂಪುಟ ಶಂಕುಸ್ಥಾಪನೆ ಆಗಲಿದೆ. ಎಂಟರಿಂದ ಹತ್ತರಷ್ಟು ಸಚಿವರನ್ನ ಕೈಬಿಟ್ಟು ಹೊಸ ಮುಖಗಳನ್ನ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಅಂತಿಮ ನಿರ್ಧಾರವನ್ನು ಹೈಕಮಾಂಡ್ ಕೈಗೊಳ್ಳಲಿದೆ. 

ಡಜನ್​ ಸಚಿವರಿಗೆ ಢವಢವ!

  • ಹೈಕಮಾಂಡ್ ಮಟ್ಟದಲ್ಲಿ ಅಸಮರ್ಥ ಸಚಿವರನ್ನ ‘ಕೈ’ಬಿಡುವ ಚರ್ಚೆ
  • ಸಚಿವರ ಸಾಮರ್ಥ್ಯದ ಬಗ್ಗೆ ವರಿಷ್ಠರಿಗೆ ಕೆಪಿಸಿಸಿ, ಉಸ್ತುವಾರಿ ವರದಿ
  • ಎರಡು ವರ್ಷಗಳಲ್ಲಿ ಯಾವ್ಯಾವ ಸಚಿವರ ಕಾರ್ಯವೈಖರಿ ಹೇಗಿದೆ?
  • ದಕ್ಷತೆ, ಪರಿಣಾಮಕಾರಿ ಇಲಾಖಾ ಕೆಲಸ ಮಾಡದವರಿಗೆ ಗೇಟ್​ಪಾಸ್​ 
  • ಹೊಸಬರಿಗೆ ಅವಕಾಶ ಕೊಡಬೇಕೆಂಬ ಲೆಕ್ಕಾಚಾರದಲ್ಲಿ ಹೈಕಮಾಂಡ್​
  • ಉಳಿದ ಅವಧಿಯಲ್ಲಿ ಆಡಳಿತಕ್ಕೆ ವೇಗ, ಪುನಾರಚನೆ ಅನಿವಾರ್ಯ
  • ಅದಕ್ಷ, ಜನಕ್ಕೆ ಸ್ಪಂದಿಸದ, ಆರೋಪ ಹೊತ್ತವರ ಬದಲಾವಣೆ ಫಿಕ್ಸ್​

ಸದ್ಯ ಡಜನ್​ಗೂ ಹೆಚ್ಚಿನ ಸಚಿವರನ್ನ ಕೈಬಿಟ್ಟು ಹೊಸಬರಿಗೆ ಅವಕಾಶ ಕಲ್ಪಿಸುವ ಕುರಿತು ಸಮಾಲೋಚನೆ ನಡಿಯುತ್ತಿದೆ. ಆದ್ರೆ, ಖಾಲಿ ಇರುವ ಸ್ಥಾನಗಳ ಭರ್ತಿ ಮಾಡುವ ಜೊತೆಗೆ ಮೂರ್ನಾಲ್ಕು ಮಂದಿಯ ಬದಲಾವಣೆಗೆ ಮಾತ್ರ ಸಿಎಂ ಒಲವು ತೋರಿದ್ದಾರೆ. ಮಾಸ್​​​ ಚೇಂಜೇಸ್​​​ನಿಂದ ಗೊಂದಲ ಸೃಷ್ಟಿಯಾಗಲಿದೆ ಅನ್ನೋದು ಸಿದ್ದರಾಮಯ್ಯರ ಆತಂಕ. ಈ ಕಾರಣಕ್ಕೆ ದೊಡ್ಡಮಟ್ಟದಲ್ಲಿ ಸಂಪುಟ ಪುನಾರಚನೆಗೆ ಸಿಎಂ ಆಸಕ್ತಿ ತೋರಿಲ್ಲ ಎನ್ನಲಾಗಿದೆ. 

ಇದನ್ನೂ ಓದಿ:ಕಾವೇರಿ ತೀರ್ಥೋದ್ಭವಕ್ಕೆ ಮುಹೂರ್ತ ನಿಗದಿ.. ಈ ದಿನ ದರ್ಶನ ಕೊಡಲಿರೋ ಜೀವನದಿ

dk shivakumar (6)
ಡಿಕೆ ಶಿವಕುಮಾರ್, ಉಪಮುಖ್ಯಮಂತ್ರಿ

ಸುದ್ದಿ ಕೇಳಿ ಅಲರ್ಟ್​​ ಆದ ಶಾಸಕರು 

ಸಂಪುಟ ಪುನಾರಚನೆ ಸುದ್ದಿ ಕೇಳಿಸುತ್ತಲೇ ಹಲವು ಶಾಸಕರು ಅಲರ್ಟ್​​ ಆಗಿದ್ದಾರೆ. ಸತತ ಮೂರು ಬಾರಿ ಗೆದ್ದ ಜೇವರ್ಗಿ ಶಾಸಕ ಡಾ.ಅಜಯ್‌ ಸಿಂಗ್​, ಮಂತ್ರಿ ಸ್ಥಾನದ ಆಸೆ ಬಿಚ್ಚಿಟ್ಟಿದ್ದಾರೆ. 

ಸಂಪುಟ ಪುನಾರಚನೆ ಸಂದರ್ಭದಲ್ಲಿ ಎಷ್ಟು ಜನರಿಗೆ ಕೊಕ್ ನೀಡಲಾಗುತ್ತದೆ ಎಂಬ ಬಗ್ಗೆ ಕುತೂಹಲವಂತು ಕೆರಳಿಸಿದೆ‌. ದೊಡ್ಡ ಬದಲಾವಣೆಗೆ ಕೈಹಾಕಿದಲ್ಲಿ ಸಿದ್ದು ಹೇಳಿದಂತೆ ಗೊಂದಲ ಪಕ್ಕಾ. ಆದರೆ ಅಂತಿಮವಾಗಿ ಹೈಕಮಾಂಡ್ ಯಾವ ನಿಲುವು ಕೈಗೊಳ್ಳುತ್ತೆ ಅನ್ನೋದು ಕುತೂಹಲ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Political news CM SIDDARAMAIAH
Advertisment