/newsfirstlive-kannada/media/media_files/2026/01/09/siddaramaiah-2026-01-09-06-54-06.jpg)
ಬೆಂಗಳೂರು: ರಾಜ್ಯ ವಿಧಾನಸಭೆ ವಿಶೇಷ ಅಧಿವೇಶನ ನಡೆಯುತ್ತಿದ್ದರೂ ಸಚಿವರುಗಳು ಸದನಕ್ಕೆ ಹಾಜರಾಗದೆ ಗೈರಾಗುತ್ತಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕುರಿತು ತಮ್ಮ ಸಂಪುಟದ ಎಲ್ಲಾ ಸಚಿವರಿಗೂ ಪತ್ರ ಬರೆದಿರುವ ಸಿಎಂ, ಕರ್ತವ್ಯ ಲೋಪದ ಬಗ್ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರುಗಳೇ ಅಧಿವೇಶನವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲವೇ ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಅಧಿವೇಶನದ ವೇಳೆ ಸಚಿವರ ಗೈರುಹಾಜರಿಯಿಂದಾಗಿ ವಿರೋಧ ಪಕ್ಷದವರು ಸರ್ಕಾರದ ವಿರುದ್ಧ ಮುಗಿಬೀಳಲು ದೊಡ್ಡ ಅಸ್ತ್ರ ಸಿಕ್ಕಂತಾಗಿದೆ. ಸದನದಲ್ಲಿ ಸಚಿವರ ಅನುಪಸ್ಥಿತಿಯನ್ನು ಕಂಡು ವಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ಇದು ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರುತ್ತಿದೆ.
ಸಿಎಂ ಬರೆದ ಪತ್ರದಲ್ಲಿ ಏನಿದೆ?
ಸಚಿವರುಗಳಿಗೆ ಬರೆದ ಪತ್ರದಲ್ಲಿ ಸಿದ್ದರಾಮಯ್ಯ ಅವರು ಕೆಲವೊಂದು ಕಠಿಣ ನಿಯಮಗಳನ್ನು ಪಾಲಿಸುವಂತೆ ಸೂಚಿಸಿದ್ದಾರೆ.
ಕಡ್ಡಾಯ ಹಾಜರಾತಿ: ಉಭಯ ಸದನಗಳ (ವಿಧಾನಸಭೆ ಅಥವಾ ವಿಧಾನ ಪರಿಷತ್ತು) ಕಾರ್ಯಕಲಾಪಗಳ ವೇಳೆ ತಮಗೆ ವಹಿಸಲಾದ ಸದನದಲ್ಲಿ ಸಚಿವರುಗಳು ಖುದ್ದಾಗಿ ಹಾಜರಿರಬೇಕು.
ಯಾವುದೇ ಸಭೆ-ಸಮಾರಂಭ ಬೇಡ: ಅಧಿವೇಶನ ನಡೆಯುತ್ತಿರುವ ಸಮಯದಲ್ಲಿ ಸಚಿವರು ಯಾವುದೇ ಖಾಸಗಿ ಸಭೆ ಅಥವಾ ಸಮಾರಂಭಗಳನ್ನು ಆಯೋಜಿಸಬಾರದು. ಸಾರ್ವಜನಿಕ ಹಿತದೃಷ್ಟಿಯಿಂದ ಸದನದಲ್ಲಿರುವುದು ಅತಿ ಮುಖ್ಯ.
ತಪ್ಪು ಸಂದೇಶ ರವಾನೆ: ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಸದನಕ್ಕೆ ಬಾರದಿರುವುದು ಸಾರ್ವಜನಿಕ ವಲಯದಲ್ಲಿ ತಪ್ಪು ಸಂದೇಶ ರವಾನೆಯಾಗಲು ಕಾರಣವಾಗುತ್ತದೆ. ಇದು ಆಡಳಿತದ ಮೇಲಿನ ನಂಬಿಕೆಯನ್ನು ಕುಗ್ಗಿಸುತ್ತದೆ.
ಸದನದ ಘನತೆ ಕಾಪಾಡಿ: ಪ್ರತಿದಿನವೂ ಅಧಿವೇಶನದಲ್ಲಿ ಪಾಲ್ಗೊಳ್ಳುವ ಮೂಲಕ ಸದನದ ಘನತೆ ಮತ್ತು ಗೌರವವನ್ನು ಎತ್ತಿಹಿಡಿಯಬೇಕು ಎಂದು ಸಿಎಂ ಸೂಚಿಸಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಭಯಾನಕ ರಾಬರಿ.. 400 ಕೋಟಿ ಮೌಲ್ಯದ ನೋಟುಗಳಿದ್ದ ಕಂಟೇನರ್ ಹೈಜಾಕ್..!
/filters:format(webp)/newsfirstlive-kannada/media/media_files/2025/10/24/cm-siddu-and-mb-patil-n-dks-2025-10-24-17-52-19.jpg)
ವಿಪಕ್ಷಗಳ ಆಕ್ರೋಶಕ್ಕೆ ಮಣಿದರೇ ಸಿಎಂ?
ಅಧಿವೇಶನದಲ್ಲಿ ಪ್ರಶ್ನೋತ್ತರ ಅವಧಿ ಅಥವಾ ಪ್ರಮುಖ ಚರ್ಚೆಗಳ ವೇಳೆ ಸಂಬಂಧಪಟ್ಟ ಸಚಿವರೇ ಇರುವುದಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿಗಳು, ಸಚಿವರುಗಳಿಗೆ ಎಚ್ಚರಿಕೆ ನೀಡುವ ಮೂಲಕ ತಮ್ಮ ಸಂಪುಟದ ಮೇಲೆ ಹಿಡಿತ ಸಾಧಿಸಲು ಮುಂದಾಗಿದ್ದಾರೆ.
ಒಟ್ಟಿನಲ್ಲಿ, ಸಿಎಂ ಪತ್ರದ ನಂತರವಾದರೂ ಸಚಿವರು ಅಧಿವೇಶನಕ್ಕೆ ನಿಯತ್ತಾಗಿ ಹಾಜರಾಗುತ್ತಾರಾ? ಅಥವಾ ಗೈರುಹಾಜರಿ ಮುಂದುವರಿಯುತ್ತಾ? ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ:SSLC ವಿದ್ಯಾರ್ಥಿಗಳೇ ಗಮನಿಸಿ.. ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us