ಬೆಳಗಾವಿಯಲ್ಲಿ ಭಯಾನಕ ರಾಬರಿ.. 400 ಕೋಟಿ ಮೌಲ್ಯದ ನೋಟುಗಳಿದ್ದ ಕಂಟೇನರ್ ಹೈಜಾಕ್..!

ಮೂರು ರಾಜ್ಯಗಳ ಗಡಿಭಾಗದಲ್ಲಿ ಸಿನಿಮೀಯ ಮಾದರಿಯಲ್ಲಿ ನಡೆದ ಮಹಾ ದರೋಡೆ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದ್ದು, ದೇಶದಾದ್ಯಂತ ಸಂಚಲನ ಮೂಡಿಸಿದೆ. ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ.

author-image
Ganesh Kerekuli
belagavi robbery (1)

Photograph: (AI)

Advertisment

ಪ್ರಮುಖ ಮುಖ್ಯಾಂಶಗಳು

ಘಟನೆ ನಡೆದದ್ದು: 2025ರ ಅಕ್ಟೋಬರ್ 16 ರಂದು ಬೆಳಗಾವಿ ಜಿಲ್ಲೆಯ ಛೋರ್ಲಾ ಘಾಟ್‌ನಲ್ಲಿ

ಹಣದ ಮೂಲ: ಮಹಾರಾಷ್ಟ್ರದ ರಿಯಲ್ ಎಸ್ಟೇಟ್ ಉದ್ಯಮಿ ಕಿಶೋರ್ ಶೇಟ್‌ಗೆ ಸೇರಿದ ಹಣ ಎನ್ನಲಾಗಿದೆ.

ರಾಜಕೀಯ ನಂಟು: ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಚುನಾವಣೆಗೆ ಈ ಹಣವನ್ನು ಬಳಕೆ ಮಾಡಲು ಸಾಗಿಸಲಾಗುತ್ತಿತ್ತು ಎಂಬ ಸಂಶಯವಿದೆ.

ಬಂಧನ: ನಾಸಿಕ್ ಪೊಲೀಸರು ಈಗಾಗಲೇ ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಿದ್ದು, ಇಬ್ಬರಿಗಾಗಿ ತಲಾಷ್ ನಡೆಸುತ್ತಿದ್ದಾರೆ.

ಬೆಳಗಾವಿ/ನಾಸಿಕ್: ಮೂರು ರಾಜ್ಯಗಳ ಗಡಿಭಾಗದಲ್ಲಿ ಸಿನಿಮೀಯ ಮಾದರಿಯಲ್ಲಿ ನಡೆದ ಮಹಾ ದರೋಡೆ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದ್ದು, ದೇಶದಾದ್ಯಂತ ಸಂಚಲನ ಮೂಡಿಸಿದೆ. 

ಗೋವಾದಿಂದ ಮಹಾರಾಷ್ಟ್ರಕ್ಕೆ ಸಾಗಿಸಲಾಗುತ್ತಿದ್ದ ಬರೋಬ್ಬರಿ 400 ಕೋಟಿ ರೂಪಾಯಿ (ಹಳೆಯ 2000 ಮುಖಬೆಲೆಯ ನೋಟುಗಳು) ಮೌಲ್ಯದ ಹಣವಿದ್ದ ಕಂಟೇನರ್ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಛೋರ್ಲಾ ಘಾಟ್‌ನಲ್ಲಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದೆ. 

ಇದನ್ನೂ ಓದಿ: ಬಡವರಿಗೆ ಸೂರು ಭಾಗ್ಯ! ರಾಜ್ಯದಲ್ಲಿ 42 ಸಾವಿರಕ್ಕೂ ಅಧಿಕ ಮನೆಗಳ ಹಸ್ತಾಂತರ..!

belagavi robbery
Photograph: (AI)

1000 ಕೋಟಿ ರೂಪಾಯಿ ಹಗರಣದ ಶಂಕೆ!

ಪ್ರಕರಣದ ದೂರುದಾರ, ಸಂತ್ರಸ್ತ ಸಂದೀಪ್ ಪಾಟೀಲ್ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಅವರ ಆರೋಪದ ಪ್ರಕಾರ, ‘ಇದು ಕೇವಲ 400 ಕೋಟಿ ಅಲ್ಲ, 1000 ಕೋಟಿ ರೂಪಾಯಿಗೂ ಅಧಿಕ ಮೊತ್ತದ ದರೋಡೆ’ ಎಂದಿದ್ದಾರೆ. ಹಿಂಪಡೆಯಲಾದ 2000 ರೂಪಾಯಿ ನೋಟುಗಳನ್ನು ಹೊತ್ತೊಯ್ಯುತ್ತಿದ್ದ ಕಂಟೇನರ್ ನಾಪತ್ತೆ ಬೆನ್ನಲ್ಲೇ, ಈ ಹಣದ ಮಾಲೀಕರು ಎನ್ನಲಾದ ಬಿಲ್ಡರ್ ಕಿಶೋರ್ ಶೇಟ್ ಸಹಚರರು ನನ್ನನ್ನು ಕಿಡ್ನಾಪ್ ಮಾಡಿದ್ದರು ಎಂದು ಆರೋಪಿಸಿದ್ದಾರೆ. 

ಕಿಡ್ನಾಪ್, ಚಿತ್ರಹಿಂಸೆ ಮತ್ತು 100 ಕೋಟಿ ಡಿಮ್ಯಾಂಡ್

ದೂರುದಾರ ಸಂದೀಪ್ ಪಾಟೀಲ್​​ರನ್ನು ಕಿಶೋರ್ ಶೇಟ್ ಸಹಚರರು ಗನ್ ಪಾಯಿಂಟ್‌ನಲ್ಲಿ ಅಪಹರಿಸಿ ಸುಮಾರು ಒಂದೂವರೆ ತಿಂಗಳ ಕಾಲ ಒತ್ತೆಯಾಳಾಗಿರಿಸಿಕೊಂಡಿದ್ದರು. ನಾಪತ್ತೆಯಾದ 400 ಕೋಟಿ ಹಣದ ಕಂಟೇನರ್‌ಗೆ ನೀನೇ ಕಾರಣ, ಆ ಹಣ ಎಲ್ಲಿದೆ ಎಂದು ಹೇಳು. ಇಲ್ಲ ಈಗ ಚಾಲ್ತಿಯಲ್ಲಿರುವ 100 ಕೋಟಿ ರೂಪಾಯಿ ಹಣವನ್ನು ನಮಗೆ ಕೊಡು ಎಂದು ಕಿಶೋರ್ ಸಹಚರರು ಚಿತ್ರಹಿಂಸೆ ನೀಡಿದ್ದಾರೆ ಎಂದು ಸಂದೀಪ್ ವಿಡಿಯೋದಲ್ಲಿ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: ವಿದೇಶದಲ್ಲಿ ಓದುವ ಕನಸು.. ಅದಕ್ಕಾಗಿ ನೀವು ಎಷ್ಟು ತಯಾರಿ ನಡೆಸಬೇಕು..?

belagavi robbery (2)

ಪೊಲೀಸ್ ಅಧಿಕಾರಿಗಳ ಶಾಮೀಲು?

ಪ್ರಕರಣದಲ್ಲಿ ಮಹಾರಾಷ್ಟ್ರದ ಇಬ್ಬರು ಪೊಲೀಸ್ ಅಧಿಕಾರಿಗಳ ಹೆಸರೂ ಕೇಳಿಬಂದಿದೆ. ಪೊಲೀಸ್ ಅಧಿಕಾರಿಗಳೇ ನನಗೆ ವಾಟ್ಸಾಪ್ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದರು. ಜೀವ ಭಯದಿಂದ ನಾನು ಸುಮ್ಮನಿದ್ದೆ. ಆದರೆ ಕಿಶೋರ್ ಸಹಚರರೇ ಆ ಹಣದ ಕಂಟೇನರ್ ಅನ್ನು ಗಾಯಬ್ ಮಾಡಿರೋದು ತಿಳಿಯಿತು. ಪೊಲೀಸರ ಮೂಲಕ ನನ್ನ ಮೇಲೆ ಒತ್ತಡ ಹೇರಿ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ ಎಂದು ಸಂದೀಪ್ ಪಾಟೀಲ್ ಆರೋಪಿಸಿದ್ದಾರೆ.

SIT ತನಿಖೆಗೆ ಆದೇಶ

ಪ್ರಕರಣದ ಗಂಭೀರತೆ ಅರಿತ ಮಹಾರಾಷ್ಟ್ರ ಉಪಮುಖ್ಯಮಂತ್ರಿ (ಗೃಹ ಸಚಿವ) ದೇವೇಂದ್ರ ಫಡ್ನವಿಸ್ ಅವರು ತಕ್ಷಣವೇ ಎಸ್‌ಐಟಿ ತನಿಖೆಗೆ ಆದೇಶಿಸಿದ್ದಾರೆ. ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಹಾಗೂ ಗೋವಾ ಪೊಲೀಸರಿಗೆ ಪತ್ರ ಬರೆದು ತನಿಖೆಗೆ ಸಹಕರಿಸುವಂತೆ ಕೋರಿದ್ದಾರೆ.

ತನ್ನ ಜೀವಕ್ಕೆ ಅಪಾಯವಿದೆ ಎಂದು ಸಂದೀಪ್ ಪಾಟೀಲ್ ದೇವೇಂದ್ರ ಫಡ್ನವಿಸ್ ಅವರ ಬಳಿ ರಕ್ಷಣೆ ಕೋರಿದ್ದಾರೆ. ಮೂರು ರಾಜ್ಯಗಳ ಪೊಲೀಸರು ಈಗ ಈ 'ಮಹಾ ರಾಬರಿ'ಯ ರಹಸ್ಯ ಭೇದಿಸಲು ಜಂಟಿ ಕಾರ್ಯಾಚರಣೆಗೆ ಇಳಿದಿದ್ದಾರೆ.

ಇದನ್ನೂ ಓದಿ: ರಾತ್ರಿ ಆಗ್ತಿದ್ದಂತೆ ಶುರುವಾಗ್ತಿತ್ತು.. ದಂಡುಪಾಳ್ಯ ಗ್ಯಾಂಗ್ ಮಾದರಿಯಲ್ಲೇ ನಡೀತಿತ್ತು ಕೃತ್ಯ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

400 Crore Robbery
Advertisment