ರಾತ್ರಿ ಆಗ್ತಿದ್ದಂತೆ ಶುರುವಾಗ್ತಿತ್ತು.. ದಂಡುಪಾಳ್ಯ ಗ್ಯಾಂಗ್ ಮಾದರಿಯಲ್ಲೇ ನಡೀತಿತ್ತು ಕೃತ್ಯ..!

ಜಿಲ್ಲೆಯಲ್ಲಿ ದಂಡುಪಾಳ್ಯ ಗ್ಯಾಂಗ್ ಮಾದರಿಯಲ್ಲಿ ಸರಣಿ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಖತರ್ನಾಕ್ ಕಳ್ಳರ ತಂಡವನ್ನು ಬಾದಾಮಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬಲೆಗೆ ಹಾಕಿದ್ದಾರೆ.

author-image
Ganesh Kerekuli
bagalakote dandupalya gang
Advertisment

ಬಾಗಲಕೋಟೆ: ಜಿಲ್ಲೆಯಲ್ಲಿ ದಂಡುಪಾಳ್ಯ ಗ್ಯಾಂಗ್ ಮಾದರಿಯಲ್ಲಿ ಸರಣಿ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಖತರ್ನಾಕ್ ಕಳ್ಳರ ತಂಡವನ್ನು ಬಾದಾಮಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬಲೆಗೆ ಹಾಕಿದ್ದಾರೆ. ಕಬ್ಬು ಕಟಾವಿನ ಕೂಲಿ ಕಾರ್ಮಿಕರ ಸೋಗಿನಲ್ಲಿ ಬಂದು ರಾತ್ರಿಯಾಗುತ್ತಲೇ ಮನೆಗಳ್ಳತನ ಹಾಗೂ ಸರಗಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ಮಹಾರಾಷ್ಟ್ರ ಮೂಲದ ಗ್ಯಾಂಗ್

ಬಂಧಿತರು ಮಹಾರಾಷ್ಟ್ರ ರಾಜ್ಯದ ಪರ್ಭಾನಿ ಜಿಲ್ಲೆಯ ಜಿಂತನೂರು ತಾಲ್ಲೂಕಿನ ಮಂಗನೂರ್ ತಾಂಡಾದವರು ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳ ವಿವರ ಇಂತಿದೆ

  • ಲಕ್ಷ್ಮಿ ಅಲಿಯಾಸ್ ಅಶ್ವಿನಿ (40) - ಪ್ರಕರಣದ ಪ್ರಮುಖ ಆರೋಪಿ (A1)
  • ಶಂಕರ್ ಹನುಮಂತ ಪವಾರ್ (20)
  • ಅಭಿ ಅಲಿಯಾಸ್ ಸಿಕಮನಿ ಬೋಸಲೆ (19)
  • ಕರಣ್ ಶೇಖಪ್ಪ ಬೋಸಲೆ (19)

ಈ ಗ್ಯಾಂಗ್ ಹಗಲಿನಲ್ಲಿ ಕಬ್ಬು ಕಟಾವು ಮಾಡುವ ಕೂಲಿ ಆಳುಗಳಂತೆ ನಟಿಸುತ್ತಾ ಗ್ರಾಮೀಣ ಭಾಗದ ಮನೆಗಳ ಮೇಲೆ ಕಣ್ಣಿಡುತ್ತಿದ್ದರು. ರಾತ್ರಿಯಾಗುತ್ತಲೇ ಒಂಟಿ ಮನೆಗಳನ್ನು ಹಾಗೂ ಮಹಿಳೆಯರನ್ನು ಟಾರ್ಗೆಟ್ ಮಾಡಿ ಸರಗಳ್ಳತನ ಹಾಗೂ ಮನೆಗಳ್ಳತನ ಎಸಗುತ್ತಿದ್ದರು. ಇತ್ತೀಚೆಗೆ ಗ್ರಾಮದ ಸರಿತಾ ಎಂಬ ಮಹಿಳೆಯ ಮಾಂಗಲ್ಯ ಸರ ಕಿತ್ತುಕೊಂಡು ಈ ಖದೀಮರು ಪರಾರಿಯಾಗಿದ್ದರು.

ಪೊಲೀಸರ ಬಲೆಗೆ ಬಿದ್ದಿದ್ದು ಹೇಗೆ?

ರೋಣ ತಾಲೂಕಿನಲ್ಲಿ ಮೊಬೈಲ್ ಕಳ್ಳತನ ಮಾಡಿದ್ದ ಈ ಕಿರಾತಕರು, ತಾವೇ ಕದ್ದ ಮೊಬೈಲ್‌ನಲ್ಲಿ ಸಿಮ್ ಹಾಕಿ ಬಳಸುವ ಮೂಲಕ ಪೊಲೀಸರಿಗೆ ಸುಳಿವು ನೀಡಿದ್ದರು. ಮೊಬೈಲ್ ಲೊಕೇಶನ್ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಗ್ಯಾಂಗ್ ಅನ್ನು ಹೆಡೆಮುರಿ ಕಟ್ಟಿದ್ದಾರೆ.

ಇದನ್ನೂ ಓದಿ: ಬಡವರಿಗೆ ಸೂರು ಭಾಗ್ಯ! ರಾಜ್ಯದಲ್ಲಿ 42 ಸಾವಿರಕ್ಕೂ ಅಧಿಕ ಮನೆಗಳ ಹಸ್ತಾಂತರ..!

bagalakote dandupalya gang (1)

6 ಲಕ್ಷದ ಮಾಲು ವಶ

ಬಂಧಿತರಿಂದ ಬರೋಬ್ಬರಿ 6 ಲಕ್ಷದ 8 ಸಾವಿರ ರೂಪಾಯಿ ಮೌಲ್ಯದ 76 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರ ಬಂಧನದಿಂದ ಬಾದಾಮಿ ಪೊಲೀಸ್ ಠಾಣೆಯ 2 ಪ್ರಕರಣ, ಗುಳೇದಗುಡ್ಡ ಪೊಲೀಸ್ ಠಾಣೆಯ 3 ಪ್ರಕರಣ ಸೇರಿದಂತೆ ಒಟ್ಟು 6 ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ.

ವಿಶೇಷ ತಂಡದ ಭರ್ಜರಿ ಕಾರ್ಯಾಚರಣೆ

ಬಾಗಲಕೋಟೆ ಎಸ್ಪಿ ಸಿದ್ದಾರ್ಥ್ ಗೋಯಲ್ ಮಾರ್ಗದರ್ಶನದಲ್ಲಿ, ಹುನಗುಂದ ಡಿಎಸ್ಪಿ ಸಂತೋಷ ಬನಹಟ್ಟಿ ಹಾಗೂ ಬಾದಾಮಿ ಸಿಪಿಐ ಬನ್ನೆ ಅವರ ನೇತೃತ್ವದ ವಿಶೇಷ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ಪೊಲೀಸರ ಈ ಸಮಯೋಚಿತ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ್ ಗೋಯಲ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ವಿದೇಶದಲ್ಲಿ ಓದುವ ಕನಸು.. ಅದಕ್ಕಾಗಿ ನೀವು ಎಷ್ಟು ತಯಾರಿ ನಡೆಸಬೇಕು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Dandupalya gang
Advertisment