ಬಡವರಿಗೆ ಸೂರು ಭಾಗ್ಯ! ರಾಜ್ಯದಲ್ಲಿ 42 ಸಾವಿರಕ್ಕೂ ಅಧಿಕ ಮನೆಗಳ ಹಸ್ತಾಂತರ..!

ಇದು ಬೃಹತ್​​​ ಯೋಜನೆ.. ಹುಬ್ಬಳ್ಳಿಯಲ್ಲಿ ಇವತ್ತು 46 ಸಾವಿರ ಮನೆಗಳ ಹಂಚಿಕೆ ಕಾರ್ಯಕ್ರಮ ಆಗಿದೆ.. 5 ಜಿಲ್ಲೆಗಳಿಂದ ಲಕ್ಷಾಂತರ ಜನ ಆಗಮಿಸಿದ್ರು.. ಮನೆಗಳ ಹಸ್ತಾಂತರ ಕಾರ್ಯಕ್ರಮ ಕೇವಲ ಕಲ್ಯಾಣ ಯೋಜನೆಯಷ್ಟೇ ಅಲ್ಲದೆ, ರಾಜ್ಯ ರಾಜಕೀಯದಲ್ಲಿ ಮಹತ್ವದ ಅಧ್ಯಾಯಕ್ಕೆ ಸಾಕ್ಷಿಯಾಯ್ತು..

author-image
Ganesh Kerekuli
hubli congress program (1)
Advertisment
  • ಕೇಂದ್ರ ಸಚಿವರನ್ನ ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘನೆ
  • ಬಿಜೆಪಿ ಕಾರ್ಯಕರ್ತರಿಂದ ಭಾರೀ ಪ್ರತಿಭಟನೆ, ಆಕ್ರೋಶ
  • ಕಾರ್ಯಕ್ರಮಕ್ಕೂ ಮೊದಲೇ ಕುಸಿದು ಬಿದ್ದ ಕಟೌಟ್​ಗಳು!

ಇದು ಬೃಹತ್​​​ ಯೋಜನೆ.. ಹುಬ್ಬಳ್ಳಿಯಲ್ಲಿ ಇವತ್ತು 46 ಸಾವಿರ ಮನೆಗಳ ಹಂಚಿಕೆ ಕಾರ್ಯಕ್ರಮ ಆಗಿದೆ..  5 ಜಿಲ್ಲೆಗಳಿಂದ ಲಕ್ಷಾಂತರ ಜನ ಆಗಮಿಸಿದ್ರು.. 

ಉತ್ತರ ಕರ್ನಾಟಕದ ಹೆಬ್ಬಾಗಿಲು ಹುಬ್ಬಳ್ಳಿ ಇವತ್ತು ಕಾಂಗ್ರೆಸ್​​​ಮಯವಾಗಿತ್ತು.. ಕಾರ್ಯಕ್ರಮಕ್ಕೆ ಲಕ್ಷ ಲಕ್ಷ ಜನ ಸೇರಿದ್ದು, ಹಸ್ತೋತ್ಸವ ಮುಗಿಲು ಚುಂಬಿಸಿತ್ತು.. ಡಿಸಿಎಂ ಡಿಕೆಶಿ ಇಲ್ಲದ ಹೊತ್ತಲ್ಲಿ ಆಯೋಜನೆ ಆದ ಬೃಹತ್​​ ಕಾರ್ಯಕ್ರಮ ಸಿದ್ದು ಶಕ್ತಿ ಪ್ರದರ್ಶನದಂತೆ ಕಾಣಿಸ್ತು.. ಕಾರ್ಯಕ್ರಮಕ್ಕೆ ಸ್ಥಳೀಯ ಬಿಜೆಪಿ ಜನಪ್ರತಿನಿಧಿಗಳನ್ನ ದೂರವಿಟ್ಟ ಆರೋಪ ಹೊತ್ತ ಜಮೀರ್​​​ ಪ್ರತಿಭಟನೆಯ ಬಿಸಿ ಅನುಭವಿಸಿದ್ರು.. 

ಇದನ್ನೂ ಓದಿ: ಹೆಂಡತಿಯ ಸೀರೆ ಪ್ರೇಯಸಿಗೆ ಗಿಫ್ಟ್! ಮದ್ವೆಯಾದ 7 ದಿನಕ್ಕೆ ಮುರಿದು ಬಿತ್ತು ಸಂಸಾರ..!

hubli congress program (2)

ಹುಬ್ಬಳ್ಳಿಯಲ್ಲಿ ಮನೆಗಳ ಹಸ್ತಾಂತರ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿದೆ.. ಮುಖ್ಯಮಂತ್ರಿ ಸಿದ್ರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಹೆಚ್​​.ಕೆ.ಪಾಟೀಲ್​​, ಸತೀಶ್​​, ಮಹದೇವಪ್ಪ, ಜಮೀರ್, ಲಾಡ್​​ ಸೇರಿ ಹಲವು ನಾಯಕರು ಭಾಗವಹಿಸಿದ್ರು.. 5 ಜಿಲ್ಲೆಗಳ 20,360 ಫಲಾನುಭವಿಗಳಿಗೆ ಹಕ್ಕುಪತ್ರವನ್ನ ಸಾಂಕೇತಿಕವಾಗಿ ವಿತರಿಸಲಾಯ್ತು.. ರಾಜ್ಯಾದ್ಯಂತ ಒಟ್ಟು 42,345 ಮನೆಗಳನ್ನ ವರ್ಚವಲ್ ಮೂಲಕ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದ್ರು.. 
ಕರ್ನಾಟಕ ಸ್ಲಂ ಅಭಿವೃದ್ಧಿ ಮಂಡಳಿ ನಿರ್ಮಿತ ಮನೆಗಳ ಹಕ್ಕುಪತ್ರ ಹಂಚಿಕೆ ಕಾರ್ಯಕ್ರಮ ಪ್ರೋಟೋಕಾಲ್ ಉಲ್ಲಂಘನೆ ಆಗಿದೆ ಅಂತ ಬಿಜೆಪಿ ಆರೋಪಿಸಿದೆ.. ಕೇಂದ್ರ ಸಚಿವ ಜೋಶಿ ಸೇರಿ ಬಿಜೆಪಿ ಶಾಸಕರನ್ನು ಆಹ್ವಾನಿಸಿಲ್ಲ ಅಂತ ಬಿಜೆಪಿ ಪ್ರತಿಭಟನೆ ನಡೆಸಿದೆ.. ಕೈಯಲ್ಲಿ ಕಪ್ಪು ಪಟ್ಟಿ ಹಿಡಿದು ಸಿಎಂ ಕಾರು ಮತ್ತು ವೇದಿಕೆಗೆ ನುಗ್ಗಲು ಬಿಜೆಪಿ ಕಾರ್ಯಕರ್ತರ ಯತ್ನಿಸಿದ್ರು.. ಮಂಟೂರ್ ರಸ್ತೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಲು ಯತ್ನಿಸಿತು.. 

ಇದನ್ನೂ ಓದಿ: ಟಿ20 ವಿಶ್ವಕಪ್‌ನಿಂದ ಬಾಂಗ್ಲಾದೇಶ ಔಟ್, ಹೊಸ ತಂಡ ಪ್ರಕಟಿಸಿದ ಐಸಿಸಿ

hubli congress program (3)

 ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಬೆಳಗ್ಗೆ ಅವಘಡ ಸಂಭವಿಸಿದೆ.. ಕಟೌಟ್‌ಗಳನ್ನು ಸರಿಯಾಗಿ ನಿರ್ವಹಣೆ ಮಾಡದ ಕಾರಣ, ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಅವು ಕುಸಿದು ಬಿದ್ದಿವೆ.. ವೇದಿಕೆಯ ಮುಂಭಾಗದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಸೇರಿ ಹಲವು ನಾಯಕರ ಬೃಹತ್ ಕಟೌಟ್‌ಗಳು ಕುಸಿದು ಬಿದ್ದಿವೆ.. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ.. ತಕ್ಷಣವೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ..

ಲಕ್ಷಾಂತರ ಜನ ಸೇರುವ ಈ ಕಾರ್ಯಕ್ರಮದಿಂದ ಡಿಸಿಎಂ ಡಿಕೆಶಿ ದೂರ ಉಳಿದಿರುವುದು ಸಹ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.. ಒಟ್ಟಾರೆ, ಮನೆಗಳ ಹಸ್ತಾಂತರ ಕಾರ್ಯಕ್ರಮ ಕೇವಲ ಕಲ್ಯಾಣ ಯೋಜನೆಯಷ್ಟೇ ಅಲ್ಲದೆ, ರಾಜ್ಯ ರಾಜಕೀಯದಲ್ಲಿ ಮಹತ್ವದ ಅಧ್ಯಾಯಕ್ಕೆ ಸಾಕ್ಷಿಯಾಯ್ತು..

ಇದನ್ನೂ ಓದಿ: ಶೇ.10 ರಷ್ಟು ಆರ್ಥಿಕ ಬೆಳವಣಿಗೆ ಸಾಧಿಸಲು ಶಾಸಕಾಂಗ ನಾಯಕತ್ವ ಪ್ರಮುಖ ಪಾತ್ರ ವಹಿಸುತ್ತೆ -ಡಾ.ನಾಗೇಶ್ವರನ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

CM SIDDARAMAIAH Congress Hubli
Advertisment