/newsfirstlive-kannada/media/media_files/2026/01/24/marriage-2-2026-01-24-17-11-59.jpg)
ಬೆಂಗಳೂರು: ನವವಿವಾಹಿತ ದಂಪತಿ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿರುವುದು ಸಾಮಾನ್ಯ. ಆದರೆ, ಬೆಂಗಳೂರು ಹೊರವಲಯದ ಆನೇಕಲ್‌ನಲ್ಲಿ ನಡೆದಿರುವ ಈ ಘಟನೆ ಮಾತ್ರ ಸಿನಿಮಾ ಕಥೆಯನ್ನೂ ಮೀರಿಸುವಂತಿದೆ. ಮದುವೆಯಾದ ಕೇವಲ ಏಳೇ ದಿನಕ್ಕೆ ಸಂಸಾರದಲ್ಲಿ ಬಿರುಕು ಮೂಡಿದ್ದು, ಪ್ರೇಯಸಿಗಾಗಿ ಪತ್ನಿಗೆ ಕಿರುಕುಳ ನೀಡಿದ ಪತಿಯ ಬಣ್ಣ ಈಗ ಬಯಲಾಗಿದೆ.
ನಡೆದಿದ್ದೇನು?
ಕಲಬುರಗಿ ಮೂಲದ ಅಂಬರೀಶ್ ಮತ್ತು ಆನೇಕಲ್ ತಾಲ್ಲೂಕಿನ ಬನಹಳ್ಳಿ ನಿವಾಸಿ ನಂದಿನಿ ಇತ್ತೀಚೆಗಷ್ಟೇ ವಿವಾಹವಾಗಿದ್ದರು. ಆದರೆ ಮದುವೆಯಾದ ವಾರದಲ್ಲೇ ಇವರ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದಿದೆ. ಪತ್ನಿ ನಂದಿನಿ ನೀಡಿರುವ ದೂರು ಇಡೀ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ನೀಡಿದೆ.
ಇದನ್ನೂ ಓದಿ: ನಾನ್-ವೆಜ್ ಪ್ರಿಯರಿಗೆ ಚಿಕನ್ ಶಾಕ್.. 350ರ ಗಡಿ ದಾಟಿದ ಕೆಜಿ ಕೋಳಿ ಮಾಂಸ..!
/filters:format(webp)/newsfirstlive-kannada/media/media_files/2026/01/24/marriage-1-2026-01-24-17-13-50.jpg)
ಹೆಂಡತಿಯ ಸೀರೆ ಪ್ರೇಯಸಿಗೆ ಗಿಫ್ಟ್!
ನಂದಿನಿ ಮಾಡಿರುವ ಗಂಭೀರ ಆರೋಪದ ಪ್ರಕಾರ, ಅಂಬರೀಶ್ ಮದುವೆಗಿಂತ ಮೊದಲು ಓರ್ವ ಯುವತಿಯನ್ನು ಪ್ರೀತಿಸುತ್ತಿದ್ದ, ಮದುವೆಯಾದ ನಂತರವೂ ಆಕೆಯ ಜೊತೆ ಸಂಬಂಧ ಮುಂದುವರಿಸಿದ್ದ ಎನ್ನಲಾಗಿದೆ. ವಿಚಿತ್ರವೆಂದರೆ, ನಿಶ್ಚಿತಾರ್ಥದ (Engagement) ವೇಳೆ ನಂದಿನಿ ಧರಿಸಿದ್ದ ಸೀರೆಯನ್ನು ಅಂಬರೀಶ್ ತನ್ನ ಪ್ರೇಯಸಿಗೆ ಉಡುಗೊರೆಯಾಗಿ ನೀಡಿದ್ದಾನಂತೆ! ಅಷ್ಟೇ ಅಲ್ಲದೆ, ಅಂಬರೀಶ್‌ನ ತಾಯಿಯೇ ಆ ಸೀರೆಯನ್ನು ಇಸ್ತ್ರಿ (Iron) ಮಾಡಿಕೊಟ್ಟು, ಮಗನ ಪ್ರೇಮಪುರಾಣಕ್ಕೆ ಸಾಥ್ ನೀಡಿದ್ದಾರೆ ಎಂಬುದು ನವವಿವಾಹಿತೆಯ ಆರೋಪವಾಗಿದೆ.
ಕಿರುಕುಳ ಮತ್ತು ಹಲ್ಲೆ ಆರೋಪ
ಮದುವೆಯಾದ ನಂತರ ಪತಿ ಅಂಬರೀಶ್ ದಿನನಿತ್ಯ ಕುಡಿದು ಬಂದು ಪತ್ನಿಯ ಮೇಲೆ ಹಲ್ಲೆ ಮಾಡುತ್ತಿದ್ದ ಎನ್ನಲಾಗಿದೆ. ನೀವು ಜಾತಿ ವಿಷಯ ಮುಚ್ಚಿಟ್ಟು ವಂಚಿಸಿ ಮದುವೆ ಮಾಡಿದ್ದೀರಿ ಎಂದು ಆರೋಪಿಸಿ ಪದೇ ಪದೇ ಜಾತಿ ನಿಂದನೆ ಮಾಡುತ್ತಿದ್ದನಂತೆ. ಬಾವನ ಜೊತೆ ಹೆಚ್ಚು ಮಾತನಾಡುತ್ತೀಯಾ ಎಂದು ವಿನಾಕಾರಣ ಅನುಮಾನ ಪಟ್ಟು ಅಂಬರೀಶ್ ಮತ್ತು ಆತನ ತಾಯಿ ಸೇರಿ ನಂದಿನಿಯನ್ನು ಮನೆಯಿಂದ ಹೊರಹಾಕಿದ್ದಾರೆ ಎಂದು ದೂರಲಾಗಿದೆ.
ಇದನ್ನೂ ಓದಿ: 80,000 ರೂ ಮೌಲ್ಯದ ಗಿಳಿ ಮನೆಬಿಟ್ಟು ಹೋಯಿತು.. ಕಣ್ಣೀರು ಹಾಕುತ್ತ ಠಾಣೆಗೆ ಬಂದ ಯಜಮಾನ..!
/filters:format(webp)/newsfirstlive-kannada/media/media_files/2026/01/24/marriage-2026-01-24-17-14-03.jpg)
ತಿರುಗುಬಾಣವಾದ ಯುವತಿ ಕುಟುಂಬದ ಆಕ್ರೋಶ
ತಮ್ಮ ಮಗಳಿಗೆ ಅನ್ಯಾಯವಾಗಿದ್ದನ್ನು ಕಂಡ ನಂದಿನಿ ಕುಟುಂಬಸ್ಥರು ಆಕ್ರೋಶಗೊಂಡು ಅಂಬರೀಶ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಹಲ್ಲೆಯಲ್ಲಿ ಅಂಬರೀಶ್‌ನ ಕಾಲು ಮುರಿದಿದೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಅಂಬರೀಶ್ ತಾಯಿ ನಂದಿನಿ ಕುಟುಂಬದವರ ಮೇಲೆ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಂದಿನಿ, ನಮ್ಮ ಮನೆಯವರು ಯಾರೂ ಹೊಡೆದಿಲ್ಲ. ಆತನಿಗೆ ಹೊಡೆದಿದ್ದು ನಾನೇ ಎಂದಿದ್ದಾಳೆ.
ಪೊಲೀಸ್ ಇಲಾಖೆ ವಿರುದ್ಧ ಅಸಮಾಧಾನ
ತನ್ನ ಮೇಲೆ ಮತ್ತು ತನ್ನ ಕುಟುಂಬದ ಮೇಲೆ ದೂರು ದಾಖಲಾಗಿದ್ದರೂ, ತನಗೆ ನ್ಯಾಯ ಕೊಡಿಸುವಲ್ಲಿ ಸೂರ್ಯನಗರ ಪೊಲೀಸರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ನಂದಿನಿ ಆರೋಪಿಸಿದ್ದಾರೆ. ಪತಿ ಮತ್ತು ಅತ್ತೆಯ ಕಿರುಕುಳದ ವಿರುದ್ಧ ತಾನು ನೀಡಿದ ದೂರಿನ ಬಗ್ಗೆ ಸರಿಯಾದ ಕ್ರಮ ಕೈಗೊಂಡಿಲ್ಲ ಎಂಬುದು ಸಂತ್ರಸ್ತೆಯ ಅಳಲಾಗಿದೆ. ಒಟ್ಟಿನಲ್ಲಿ ಪ್ರೇಯಸಿಗಾಗಿ ಪತ್ನಿಯ ಎಂಗೇಜ್‌ಮೆಂಟ್ ಸೀರೆಯನ್ನೇ ಕೊಟ್ಟ ಪತಿಯ ಈ "ವಿಚಿತ್ರ ಪ್ರೇಮ" ಕಥೆ ಈಗ ಆನೇಕಲ್ ಭಾಗದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ: BSNLಗೆ ಭಾವಪೂರ್ಣ ಶ್ರದ್ಧಾಂಜಲಿ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us