ನಾನ್-ವೆಜ್ ಪ್ರಿಯರಿಗೆ ಚಿಕನ್ ಶಾಕ್.. 350ರ ಗಡಿ ದಾಟಿದ ಕೆಜಿ ಕೋಳಿ ಮಾಂಸ..!

ಸಿಲಿಕಾನ್ ಸಿಟಿಯ ನಾನ್-ವೆಜ್ ಪ್ರಿಯರಿಗೆ ಕೋಳಿ ಮಾಂಸದ ದರ ಈಗ ದೊಡ್ಡ ಶಾಕ್ ನೀಡಿದೆ. ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಚಿಕನ್ ಬೆಲೆ ಗಗನಕ್ಕೇರುತ್ತಿದ್ದು, ಶೀಘ್ರದಲ್ಲೇ ಇದು ಸಾಮಾನ್ಯ ಜನರ ಕೈಗೆಟುಕದಂತಾಗುವ ಭೀತಿ ಎದುರಾಗಿದೆ.

author-image
Ganesh Kerekuli
Sunday Special: ಮನೆಯಲ್ಲೇ ಮಾಡಿ ಚಿಕನ್​​ ಮುಮ್ತಾಜ್.. ​ಸಿಂಪಲ್​ ರೆಸಿಪಿ 10 ನಿಮಿಷದಲ್ಲೇ ರೆಡಿ
Advertisment

ಬೆಂಗಳೂರು: ಸಿಲಿಕಾನ್ ಸಿಟಿಯ ನಾನ್-ವೆಜ್ ಪ್ರಿಯರಿಗೆ ಕೋಳಿ ಮಾಂಸದ ದರ ಈಗ ದೊಡ್ಡ ಶಾಕ್ ನೀಡಿದೆ. ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಚಿಕನ್ ಬೆಲೆ ಗಗನಕ್ಕೇರುತ್ತಿದ್ದು, ಶೀಘ್ರದಲ್ಲೇ ಇದು ಸಾಮಾನ್ಯ ಜನರ ಕೈಗೆಟುಕದಂತಾಗುವ ಭೀತಿ ಎದುರಾಗಿದೆ.

350ರ ಗಡಿ ದಾಟಿದ ಚಿಕನ್ ಬೆಲೆ

ಕಳೆದ ಡಿಸೆಂಬರ್ ತಿಂಗಳಿನಲ್ಲಿ ಪ್ರತಿ ಕೆಜಿಗೆ 260 ರಿಂದ 280 ರೂಪಾಯಿ ಆಸುಪಾಸಿನಲ್ಲಿದ್ದ ಚಿಕನ್ ದರ, ಈಗ ದಿಢೀರ್ ಏರಿಕೆ ಕಂಡಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ವಿತೌಟ್ ಸ್ಕಿನ್ (Without Skin) ಚಿಕನ್ ಬೆಲೆ ಕೆಜಿಗೆ 340 ರಿಂದ 350 ರೂಪಾಯಿ ತಲುಪಿದೆ. ಮಾರುಕಟ್ಟೆಯ ಮೂಲಗಳ ಪ್ರಕಾರ, ಈ ಬೆಲೆ ಏರಿಕೆ ಇಲ್ಲಿಗೇ ನಿಲ್ಲುವುದಿಲ್ಲ; ಮುಂದಿನ ದಿನಗಳಲ್ಲಿ ಕೆಜಿ ಚಿಕನ್ ದರ 370 ರಿಂದ 380 ರೂಪಾಯಿ ತಲುಪಿದರೂ ಆಶ್ಚರ್ಯವಿಲ್ಲ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಊರಿನ ಅಜ್ಜಿಯರ ಕಿತಾಪತಿ ಕತೆ ಹೇಳಿದ ಗಿಲ್ಲಿ -ಇಂಟ್ರೆಸ್ಟಿಂಗ್​ ಆಗಿದೆ VIDEO

ಬೆಲೆ ಏರಿಕೆಗೆ ಪ್ರಮುಖ ಕಾರಣಗಳೇನು?

  • ನೆರೆ ರಾಜ್ಯಗಳಲ್ಲಿ ಪ್ರತಿಭಟನೆ: ಕರ್ನಾಟಕಕ್ಕೆ ಪ್ರಮುಖವಾಗಿ ತಮಿಳುನಾಡು ಮತ್ತು ಆಂಧ್ರಪ್ರದೇಶದಿಂದ ಕೋಳಿ ಪೂರೈಕೆಯಾಗುತ್ತದೆ. ಈ ರಾಜ್ಯಗಳಲ್ಲಿ ಕೋಳಿ ಸಾಕಾಣಿಕೆದಾರರು ಕಂಪನಿಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
  • ನಿರ್ವಹಣಾ ವೆಚ್ಚ ಹೆಚ್ಚಳ: ಕೋಳಿಗಳ ನಿರ್ವಹಣೆ ಮತ್ತು ಮೇವಿನ ದರ ಹೆಚ್ಚಾಗಿರುವ ಕಾರಣ, ಸಾಕಾಣಿಕೆದಾರರು ಕಂಪನಿಗಳಿಂದ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
  • ಉತ್ಪಾದನೆ ಕುಸಿತ: ಬೇಡಿಕೆಗೆ ತಕ್ಕಂತೆ ಕೋಳಿಗಳ ಉತ್ಪಾದನೆಯಲ್ಲಿ ಇಳಿಕೆಯಾಗಿರುವುದು ಕೂಡ ಬೆಲೆ ಏರಿಕೆಗೆ ಮತ್ತೊಂದು ಮುಖ್ಯ ಕಾರಣ.
  • ಪೂರೈಕೆ ವ್ಯತ್ಯಯ: ತಮಿಳುನಾಡಿನಿಂದ ಪೂರೈಕೆಯಾಗುವ ಕೋಳಿಗಳ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿರುವುದು ಮಾರುಕಟ್ಟೆಯಲ್ಲಿ ಅಸಮತೋಲನ ಸೃಷ್ಟಿಸಿದೆ.

ಹೋಟೆಲ್ ಖಾದ್ಯಗಳ ದರವೂ ಏರಿಕೆ ಸಾಧ್ಯತೆ:

ಚಿಕನ್ ಬೆಲೆ ಏರಿಕೆಯಾಗಿರುವುದರಿಂದ ಕೇವಲ ಮನೆಬಳಕೆದಾರರಿಗೆ ಮಾತ್ರವಲ್ಲದೆ, ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರಿಗೂ ಸಂಕಷ್ಟ ಶುರುವಾಗಿದೆ. ಮಾಂಸದ ದರ ಹೆಚ್ಚಾದಂತೆ ನಾನ್-ವೆಜ್ ಹೋಟೆಲ್‌ಗಳಲ್ಲಿ ಚಿಕನ್ ಬಿರಿಯಾನಿ, ಕಬಾಬ್ ಸೇರಿದಂತೆ ವಿವಿಧ ಖಾದ್ಯಗಳ ಬೆಲೆಯನ್ನು ಹೆಚ್ಚಿಸಲು ಮಾಲೀಕರು ಚಿಂತನೆ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ, ಭಾನುವಾರ ಬಂದರೆ ಸಾಕು ಚಿಕನ್ ಸವಿಯುತ್ತಿದ್ದ ಮಧ್ಯಮ ವರ್ಗದ ಜನರಿಗೆ ಈಗ ಕೋಳಿ ಮಾಂಸದ ದರ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಇದನ್ನೂ ಓದಿ: ರಾಜ್ಯದ ಜನರಿಗೆ KMF ಸಿಹಿಸುದ್ದಿ: ಇನ್ಮುಂದೆ 10 ರೂಪಾಯಿಗೆ ಸಿಗಲಿದೆ ನಂದಿನಿ ಹಾಲು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Chicken
Advertisment