ರಾಜ್ಯದ ಜನರಿಗೆ KMF ಸಿಹಿಸುದ್ದಿ: ಇನ್ಮುಂದೆ 10 ರೂಪಾಯಿಗೆ ಸಿಗಲಿದೆ ನಂದಿನಿ ಹಾಲು..!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಲಿನ ಸಣ್ಣ ಪ್ಯಾಕೆಟ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಕೆಎಂಎಫ್ ಗ್ರಾಹಕ ಸ್ನೇಹಿ ಕ್ರಮಕ್ಕೆ ಮುಂದಾಗಿದೆ. ಈ ನೂತನ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಂಕೇತಿಕವಾಗಿ ಲೋಕಾರ್ಪಣೆಗೊಳಿಸಿದರು.

author-image
Ganesh Kerekuli
ನಂದಿನಿ ಬ್ರಾಂಡ್​​ಗೆ ಎದುರಾಯ್ತು ಸಂಕಷ್ಟ.. ಏಳಿಗೆ ಸಹಿಸದ ಡೀಲರ್​​ಗಳಿಂದ ಕೊಕ್ಕೆ..!
Advertisment

ಬೆಂಗಳೂರು: ಬೆಲೆ ಏರಿಕೆಯ ನಡುವೆ ರಾಜ್ಯದ ಜನರಿಗೆ ವಿಶೇಷವಾಗಿ ಸಾಮಾನ್ಯ ಜನರಿಗೆ ಮತ್ತು ಬ್ಯಾಚುಲರ್‌ಗಳಿಗೆ ಕರ್ನಾಟಕ ಹಾಲು ಮಹಾಮಂಡಳಿ (KMF) ಭರ್ಜರಿ ಸಿಹಿಸುದ್ದಿ ನೀಡಿದೆ. ನಂದಿನಿ ಬ್ರ್ಯಾಂಡ್‌ನ ಹಾಲು ಮತ್ತು ಮೊಸರು ಇನ್ಮುಂದೆ ಕೇವಲ 10 ರೂಪಾಯಿಗೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಲಿನ ಸಣ್ಣ ಪ್ಯಾಕೆಟ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಕೆಎಂಎಫ್ ಗ್ರಾಹಕ ಸ್ನೇಹಿ ಕ್ರಮಕ್ಕೆ ಮುಂದಾಗಿದೆ. ಈ ನೂತನ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಂಕೇತಿಕವಾಗಿ ಲೋಕಾರ್ಪಣೆಗೊಳಿಸಿದರು.

ಇದನ್ನೂ ಓದಿ:ಹುಬ್ಬಳ್ಳಿ CM ಕಾರ್ಯಕ್ರಮದಲ್ಲಿ ಭಾರೀ ಅವಘಡ.. ಕಟೌಟ್​ಗಳು ಬಿದ್ದು ನಾಲ್ವರು ಆಸ್ಪತ್ರೆ ಪಾಲು

ಹೊಸ ಪ್ಯಾಕೆಟ್‌ಗಳ ದರ ಮತ್ತು ಪ್ರಮಾಣ ಹೀಗಿದೆ

ಈ ಮೊದಲು ಮಾರುಕಟ್ಟೆಯಲ್ಲಿ ಕನಿಷ್ಠ 200 ML ಹಾಲಿನ ಪ್ಯಾಕೆಟ್‌ಗಳು ಲಭ್ಯವಿದ್ದವು. ಆದರೆ ಈಗ ಗ್ರಾಹಕರ ಅನುಕೂಲಕ್ಕಾಗಿ ಕೆಎಂಎಫ್ ಸಣ್ಣ ಪ್ಯಾಕೆಟ್‌ಗಳನ್ನು ಪರಿಚಯಿಸಿದೆ. 

  • ನಂದಿನಿ ಹಾಲು: 160 ML ಪಾಕೆಟ್‌ಗೆ ಕೇವಲ 10 ರೂಪಾಯಿ.
  • ನಂದಿನಿ ಮೊಸರು: 140 ML ಪಾಕೆಟ್‌ಗೆ ಕೇವಲ 10 ರೂಪಾಯಿ.

ಲಸ್ಸಿ ಪ್ರಿಯರಿಗೂ ಗುಡ್ ನ್ಯೂಸ್

ಹಾಲು ಮತ್ತು ಮೊಸರಿನ ಜೊತೆಗೆ ನಂದಿನಿ ಲಸ್ಸಿ ಪ್ರಿಯರಿಗೂ ಕೆಎಂಎಫ್ ಸಖತ್ ಆಫರ್ ನೀಡಿದೆ. ಮಾವಿನ ಲಸ್ಸಿ (Mango Lassi) ಮತ್ತು ಸ್ಟ್ರಾಬೆರಿ ಲಸ್ಸಿ (Strawberry Lassi) ಪ್ಯಾಕೆಟ್‌ಗಳು ಕೇವಲ 15 ರೂಪಾಯಿಗೆ ಲಭ್ಯವಾಗಲಿವೆ.

ಯಾರಿಗೆ ಹೆಚ್ಚು ಅನುಕೂಲ?

ಕೆಎಂಎಫ್‌ನ ಈ ನಿರ್ಧಾರವು ಮುಖ್ಯವಾಗಿ ನಗರ ಪ್ರದೇಶಗಳಲ್ಲಿ ವಾಸಿಸುವ ಬ್ಯಾಚುಲರ್‌ಗಳಿಗೆ, ಪ್ರವಾಸ ಮಾಡುವವರಿಗೆ ಮತ್ತು ಮನೆಯಲ್ಲಿ ಒಬ್ಬರೇ ಇರುವವರಿಗೆ ಹೆಚ್ಚು ಸಹಕಾರಿಯಾಗಲಿದೆ. ದೊಡ್ಡ ಪ್ಯಾಕೆಟ್ ಖರೀದಿಸಿ ಹಾಲು ಅಥವಾ ಮೊಸರು ವ್ಯರ್ಥವಾಗುವುದನ್ನು ಈ ಸಣ್ಣ ಪ್ಯಾಕೆಟ್‌ಗಳು ತಡೆಯಲಿವೆ.

ಶೀಘ್ರದಲ್ಲೇ ಎಲ್ಲಾ ಮಳಿಗೆಗಳಲ್ಲಿ ಲಭ್ಯ

ಈಗಾಗಲೇ ಮುಖ್ಯಮಂತ್ರಿಗಳಿಂದ ಚಾಲನೆ ಸಿಕ್ಕಿದ್ದು, ಮುಂದಿನ ಕೆಲವೇ ದಿನಗಳಲ್ಲಿ ರಾಜ್ಯದಾದ್ಯಂತ ಇರುವ ಎಲ್ಲಾ ನಂದಿನಿ ಪಾರ್ಲರ್‌ಗಳು ಮತ್ತು ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಈ 10 ರೂಪಾಯಿ ಬೆಲೆಯ ಹಾಲು ಮತ್ತು ಮೊಸರಿನ ಪ್ಯಾಕೆಟ್‌ಗಳು ಗ್ರಾಹಕರಿಗೆ ಸಿಗಲಿವೆ. ಕಡಿಮೆ ದರದಲ್ಲಿ ಗುಣಮಟ್ಟದ ಉತ್ಪನ್ನಗಳನ್ನು ನೀಡುವ ಮೂಲಕ ಕೆಎಂಎಫ್ ತನ್ನ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸಲು ಈ ಹೊಸ ಪ್ಲ್ಯಾನ್ ರೂಪಿಸಿದೆ.

ಇದನ್ನೂ ಓದಿ: ಮುಚ್ಚಲ್ ಮಹಿಳೆ ಜೊತೆ ಹಾಸಿಗೆಯಲ್ಲಿ ರೆಡ್​​ಹ್ಯಾಂಡ್ ಸಿಕ್ಕಿಬಿದ್ದಿದ್ದ! ಸ್ಮೃತಿ ಮಂದಾನ ಸ್ನೇಹಿತ ಗಂಭೀರ ಆರೋಪ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Nandini product KMF
Advertisment