ಹುಬ್ಬಳ್ಳಿ CM ಕಾರ್ಯಕ್ರಮದಲ್ಲಿ ಭಾರೀ ಅವಘಡ.. ಕಟೌಟ್​ಗಳು ಬಿದ್ದು ನಾಲ್ವರು ಆಸ್ಪತ್ರೆ ಪಾಲು

ಹುಬ್ಬಳ್ಳಿಯ ಸಿಎಂ ಕಾರ್ಯಕ್ರಮದಲ್ಲಿ ಭಾರೀ ಅವಘಡ ಸಂಭವಿಸಿದೆ. ನಗರದಲ್ಲಿ ಇಂದು ಆಯೋಜಿಸಲಾಗಿದ್ದ ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಆಕಸ್ಮಿಕ ಅವಘಡ ಸಂಭವಿಸಿದೆ. ಕಾರ್ಯಕ್ರಮದ ವೇದಿಕೆಯ ಮುಂಭಾಗದಲ್ಲಿ ಹಾಕಲಾಗಿದ್ದ ರಾಜಕೀಯ ನಾಯಕರ ಬೃಹತ್ ಕಟೌಟ್‌ಗಳು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ.

author-image
Ganesh Kerekuli
Hubli cutout
Advertisment

ಹುಬ್ಬಳ್ಳಿಯ ಸಿಎಂ ಕಾರ್ಯಕ್ರಮದಲ್ಲಿ ಭಾರೀ ಅವಘಡ ಸಂಭವಿಸಿದೆ. ನಗರದಲ್ಲಿ ಇಂದು ಆಯೋಜಿಸಲಾಗಿದ್ದ ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಆಕಸ್ಮಿಕ ಅವಘಡ ಸಂಭವಿಸಿದೆ. ಕಾರ್ಯಕ್ರಮದ ವೇದಿಕೆಯ ಮುಂಭಾಗದಲ್ಲಿ ಹಾಕಲಾಗಿದ್ದ ರಾಜಕೀಯ ನಾಯಕರ ಬೃಹತ್ ಕಟೌಟ್‌ಗಳು ಇದ್ದಕ್ಕಿದ್ದಂತೆ ಕುಸಿದು ಬಿದ್ದ ಪರಿಣಾಮ, ಅಲ್ಲಿ ನಿಂತಿದ್ದ ಮೂವರು ಗಾಯಗೊಂಡಿದ್ದಾರೆ.

ಘಟನೆಯ ವಿವರ

ಹುಬ್ಬಳ್ಳಿಯಲ್ಲಿ ಇಂದು ಮನೆ ಹಸ್ತಾಂತರ ಶುಭ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮ ಆರಂಭವಾಗುವ ಮುನ್ನವೇ ವೇದಿಕೆಯ ಮುಂಭಾಗದಲ್ಲಿ ಅಳವಡಿಸಲಾಗಿದ್ದ ನಾಯಕರ ಕಟೌಟ್‌ಗಳು ಏಕಾಏಕಿ ನೆಲಕ್ಕೆ ಉರುಳಿವೆ. ಈ ವೇಳೆ ಕಟೌಟ್ ಬಳಿಯೇ ನಿಂತಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ: ಆರ್​ಸಿಬಿ ಫೈನಲ್ ಪ್ರವೇಶಕ್ಕೆ ಒಂದೇ ಹೆಜ್ಜೆ.. ಇವತ್ತು ಗೆದ್ದರೆ ಮತ್ತೊಂದು ಇತಿಹಾಸ..!

Hubli cutout (1)

ಕಿಮ್ಸ್‌ಗೆ ಪೊಲೀಸ್ ಆಯುಕ್ತರ ಭೇಟಿ

ಘಟನೆ ಸಂಭವಿಸುತ್ತಿದ್ದಂತೆ ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ವಿಷಯ ತಿಳಿಯುತ್ತಿದ್ದಂತೆಯೇ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾದ ಎನ್.ಶಶಿಕುಮಾರ್ ಅವರು ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಅವರೊಂದಿಗೆ ಜಿಲ್ಲಾ ಆರೋಗ್ಯ ಅಧಿಕಾರಿ (DHO) ಸತೀಶ್ ಹೋನಕೇರಿ ಕೂಡ ಭೇಟಿ ನೀಡಿ ಚಿಕಿತ್ಸೆಯ ಬಗ್ಗೆ ಮಾಹಿತಿ ಪಡೆದರು.

ಇದನ್ನೂ ಓದಿ:ಜೆಡಿಎಸ್​​ ಬೆಳ್ಳಿ ಹಬ್ಬ! ಹಾಸನದಲ್ಲಿ ಇವತ್ತು ಬೃಹತ್​ ಸಮಾವೇಶ..!

ಗಾಯಾಳುಗಳ ವಿವರ

ಅವಘಡದಲ್ಲಿ ಮಂಜುನಾಥ್, ಶಾಂತಾ ಹಾಗೂ ಶಂಕರ್ ಎಂಬುವವರಿಗೆ ಗಾಯಗಳಾಗಿವೆ. ಗಾಯಾಳುಗಳ ಪೈಕಿ ಓರ್ವನನ್ನು ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದರೆ, ಉಳಿದ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಡಿ.ಎಚ್.ಓ ಪ್ರತಿಕ್ರಿಯೆ

ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಎಚ್.ಓ ಸತೀಶ್ ಹೋನಕೇರಿ, ‘ಬ್ಯಾನರ್ ಬಿದ್ದು ಮೂವರು ಗಾಯಗೊಂಡಿರುವುದು ನಿಜ. ಗಾಯಾಳುಗಳಿಗೆ ತಕ್ಷಣವೇ ವೈದ್ಯಕೀಯ ನೆರವು ನೀಡಲಾಗಿದೆ. ಪ್ರಸ್ತುತ ಗಾಯಗೊಂಡಿರುವ ಮೂವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಮತ್ತು ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ’ ಎಂದು ತಿಳಿಸಿದ್ದಾರೆ. ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಈ ಘಟನೆ ನಡೆದಿದ್ದು, ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಇದನ್ನೂ ಓದಿ:ಕೇಂದ್ರ ಸರ್ಕಾರಿ ಕೆಲಸ ಹುಡುಕಾಟ ನಡೆಸ್ತಿರೋರಿಗೆ ಇಲ್ಲಿದೆ ಸುವರ್ಣ ಅವಕಾಶ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Hubli
Advertisment