ಆರ್​ಸಿಬಿ ಫೈನಲ್ ಪ್ರವೇಶಕ್ಕೆ ಒಂದೇ ಹೆಜ್ಜೆ.. ಇವತ್ತು ಗೆದ್ದರೆ ಮತ್ತೊಂದು ಇತಿಹಾಸ..!

ಸೋಲಿಲ್ಲದ ಸರದಾರನಾಗಿ WPL ಪ್ಲೇ ಆಫ್​​ಗೆ ರಾಯಲ್​ ಎಂಟ್ರಿ ಕೊಟ್ಟಿರೋ ಆರ್​​​ಸಿಬಿ ಕಣ್ಣು ಈಗ ಫೈನಲ್​ ಸ್ಥಾನದ ಮೇಲಿದೆ. ನೇರವಾಗಿ ಫೈನಲ್​ಗೆ ಎಂಟ್ರಿ ಕೊಡೋಕೆ ಸ್ಮೃತಿ ಮಂದಾನ ಸೈನ್ಯ ತುದಿಗಾಲಲ್ಲಿ ನಿಂತಿದೆ. ವಡೋದರಾದಲ್ಲಿ ನಡೆಯೋ ಇಂದಿನ ಕದನದಲ್ಲಿ ಡೆಲ್ಲಿಗೆ ಡಿಚ್ಚಿ ಕೊಡಲು ರೆಡ್​ ಆರ್ಮಿಯ ಸಿದ್ಧತೆ ಹೇಗಿದೆ?

author-image
Ganesh Kerekuli
rcb wpl
Advertisment
  • WPLನಲ್ಲಿಂದು ಆರ್​​​ಸಿಬಿ-ಡೆಲ್ಲಿ ಮುಖಾಮುಖಿ
  • ಡೆಲ್ಲಿ ಕ್ಯಾಪಿಟಲ್ಸ್​ಗೆ ಡಿಚ್ಚಿ ಕೊಡಲು ರೆಡ್​ ಆರ್ಮಿ ರೆಡಿ
  • ಫೈನಲ್​ ಸ್ಥಾನದ ಮೇಲೆ ಸ್ಮೃತಿ ಮಂದಾನ ಸೈನ್ಯದ ಕಣ್ಣು

ಸೋಲಿಲ್ಲದ ಸರದಾರನಾಗಿ WPL ಪ್ಲೇ ಆಫ್​​ಗೆ ರಾಯಲ್​ ಎಂಟ್ರಿ ಕೊಟ್ಟಿರೋ ಆರ್​​​ಸಿಬಿ ಕಣ್ಣು ಈಗ ಫೈನಲ್​ ಸ್ಥಾನದ ಮೇಲಿದೆ. ನೇರವಾಗಿ ಫೈನಲ್​ಗೆ ಎಂಟ್ರಿ ಕೊಡೋಕೆ ಸ್ಮೃತಿ ಮಂದಾನ ಸೈನ್ಯ ತುದಿಗಾಲಲ್ಲಿ ನಿಂತಿದೆ. ವಡೋದರಾದಲ್ಲಿ ನಡೆಯೋ ಇಂದಿನ ಕದನದಲ್ಲಿ ಡೆಲ್ಲಿಗೆ ಡಿಚ್ಚಿ ಕೊಡಲು ರೆಡ್​ ಆರ್ಮಿಯ ಸಿದ್ಧತೆ ಹೇಗಿದೆ?

ಮಹಿಳಾ ಪ್ರೀಮಿಯರ್​ ಲೀಗ್​ ಸೀಸನ್​ 4 ರೋಚಕ ಘಟ್ಟ ತಲುಪಿದೆ. ಅಜೇಯ ಆರ್​​ಸಿಬಿ ಪ್ಲೇಆಫ್​ಗೆ ರಾಯಲ್​​ ಎಂಟ್ರಿಕೊಟ್ಟಿದೆ. ಇನ್ನೆರಡು ಸ್ಥಾನಕ್ಕೆ 4 ತಂಡಗಳು ಜಿದ್ದಾಜಿದ್ದಿನ ಫೈಟ್​ ನಡೆಸ್ತಿವೆ. ಗುಜರಾತ್​​, ಮುಂಬೈ, ಡೆಲ್ಲಿ, ಯುಪಿ ತಂಡಗಳು ಪ್ಲೇ ಆಫ್​ಗೆ ಕ್ವಾಲಿಫೈ ಆಗೋ ಕನವರಿಕೆಯಲ್ಲಿವೆ. ಒಂದು ದಿನದ ಬ್ರೇಕ್​ ಬಳಿಕ ಟೂರ್ನಿ ಪುನಾರಂಭವಾಗ್ತಿದ್ದು ಇಂದಿನ ಪಂದ್ಯ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.

ಡೆಲ್ಲಿಗೆ ಡಿಚ್ಚಿ ಕೊಡಲು ರಾಯಲ್​ ಚಾಲೆಂಜರ್ಸ್​ ರೆಡಿ

ವಡೋದರಾದಲ್ಲಿ ನಡೆಯೋ ಇಂದಿನ ಪಂದ್ಯದಲ್ಲಿ ಆರ್​ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​ ತಂಡಗಳು ಮುಖಾಮುಖಿಯಾಗ್ತಿವೆ. ಟೂರ್ನಿಯಲ್ಲಿ ಸೋಲಿಲ್ಲದ ಸರದಾರನಂತೆ ಮುನ್ನುಗ್ತಾ ಇರೋ ಆರ್​​ಸಿಬಿ ತಂಡ ಗೆಲುವಿನ ಓಟ ಮುಂದುವರೆಸೋಕೆ ತುದಿಗಾಲಲ್ಲಿ ನಿಂತಿದೆ. ರಾಯಲ್​ ಆಟದೊಂದಿಗೆ ಪ್ಲೇ ಆಫ್​ಗೆ ಕ್ವಾಲಿಫೈ ಆಗಿರೋ ಆರ್​​ಸಿಬಿ, ಇಂದಿನ ಪಂದ್ಯದಲ್ಲೂ ಡೆಲ್ಲಿಗೆ ಡಿಚ್ಚಿಕೊಡೋ ಆತ್ಮವಿಶ್ವಾಸದಲ್ಲಿದೆ. ಆದ್ರೆ, ಆಡಿದ 5 ಪಂದ್ಯಗಳಲ್ಲಿ ಕೇವಲ 2 ಪಂದ್ಯ ಗೆದ್ದಿರೋ ಇನ್​ಕನ್ಸಿಸ್ಟೆಂಟ್​ ಡೆಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಪ್ಲೇ ಆಫ್​ ಕನಸು ಜೀವಂತವಾಗಿರಬೇಕಂದ್ರೆ ಗೆಲುವು ಅನಿವಾರ್ಯವಾಗಿದೆ. 

ಇದನ್ನೂ ಓದಿ:ಕೇಂದ್ರ ಸರ್ಕಾರಿ ಕೆಲಸ ಹುಡುಕಾಟ ನಡೆಸ್ತಿರೋರಿಗೆ ಇಲ್ಲಿದೆ ಸುವರ್ಣ ಅವಕಾಶ..!

WPL

ಫೈನಲ್​ ಸ್ಥಾನದ ಮೇಲೆ ಸ್ಮೃತಿ ಸೈನ್ಯದ ಕಣ್ಣು

ಆಡಿದ 5 ಪಂದ್ಯಗಳಲ್ಲಿ ಐದೂ ಪಂದ್ಯಗಳನ್ನ ಗೆದ್ದು ಪ್ಲೇ ಆಫ್​ ಟಿಕೆಟ್​ ಗಿಟ್ಟಿಸಿಕೊಂಡಿರೋ ಸ್ಮೃತಿ ಮಂದಾನ ಸಾರಥ್ಯದ ಆರ್​​​ಸಿಬಿ ಕಣ್ಣು ಈಗ ಫೈನಲ್​ ಸ್ಥಾನದ ಮೇಲಿದೆ. 5 ಪಂದ್ಯಗಳ ಗೆದ್ದು 10 ಅಂಕಗಳೊಂದಿಗೆ ಪ್ಲೇ ಆಫ್​ಗೆ ಕ್ವಾಲಿಫೈ ಆದ ಆರ್​​​ಸಿಬಿ, ಉಳಿದ 3 ಪಂದ್ಯಗಳ ಪೈಕಿ ಒಂದು ಪಂದ್ಯ ಗೆದ್ರೆ ಸಾಕು ನೇರವಾಗಿ  ಫೈನಲ್​ಗೆ ಎಂಟ್ರಿಕೊಡಲಿದೆ. ಇಂದಿನ ಪಂದ್ಯದಲ್ಲೇ ಡೆಲ್ಲಿ ಕ್ಯಾಪಿಟಲ್ಸ್​​ ಮಣಿಸಿ ಫೈನಲ್​ ಸ್ಥಾನವನ್ನ ಸೀಲ್​ ಮಾಡಿಕೊಳ್ಳಲು ರೆಡ್​​ ಆರ್ಮಿ ಸಜ್ಜಾಗಿದೆ.  

ರಾಯಲ್​​ ಚಾಲೆಂಜರ್ಸ್​ನಲ್ಲಿ ರಿಯಲ್​ ಚಾಲೆಂಜರ್ಸ್

ಕಳೆದ 3 ಸೀಸನ್​​ಗಳಲ್ಲಿದ್ದ ಆರ್​​ಸಿಬಿಗೂ ಈ ಬಾರಿ ಇರೋ ಆರ್​​ಸಿಬಿ ತಂಡಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಈ ಬಾರಿ ರಾಯಲ್​ ಚಾಲೆಂಜರ್ಸ್​ ತಂಡದಲ್ಲಿ ರಿಯಲ್​ ಚಾಲೆಂಜರ್ಸ್​ ದಂಡಿದೆ. ಯಾರೊಬ್ಬರ ಮೇಲೂ ಈ ಸೀಸನ್​ನಲ್ಲಿ ಡಿಪೆಂಡ್​ ಆಗಿಲ್ಲ. ಪ್ರತಿಯೊಬ್ಬರು ತಮ್ಮ ತಮ್ಮ ರೋಲ್​ನ ನಿಭಾಯಿಸ್ತಿದ್ದಾರೆ. ಒಂದೊಂದು ಪಂದ್ಯದಲ್ಲಿ ಒಬ್ಬೊಬ್ಬರು ಮ್ಯಾಚ್​ ವಿನ್ನರ್ಸ್​ಗಳಾಗಿ ಪಂದ್ಯ ಗೆಲ್ಲಿಸಿದಿದ್ದಾರೆ. ಫಸ್ಟ್​ ಮ್ಯಾಚ್​​ನಲ್ಲಿ ಆರ್​​ಸಿಬಿ ಸೋತೇ ಬಿಡ್ತು ಅನ್ನೋ ಸಂದರ್ಭದಲ್ಲಿ ಸ್ಪೋಟಕ ನಡೆಸಿ ನದಿನ್​ ಡಿ ಕ್ಲೆರ್ಕ್​ ಮ್ಯಾಚ್​ ಗೆಲ್ಲಿಸಿದ್ರು. 

ಇದನ್ನೂ ಓದಿ:ಜನಾರ್ದನ ರೆಡ್ಡಿ ಅವರ ಮಾಡಲ್​ ಹೌಸ್​ಗೆ ಬೆಂಕಿ ಇಟ್ಟ ಕೇಸ್.. 8 ಮಂದಿ ವಶಕ್ಕೆ..!

Smriti Mandana (3)

2ನೇ ಪಂದ್ಯದಲ್ಲಿ ಗ್ರೇಸ್​ ಹ್ಯಾರೀಸ್​ ರನ್​ಹೊಳೆಯನ್ನೇ ಹರಿಸಿದ್ರೆ 3ನೇ ಪಂದ್ಯದಲ್ಲಿ ಗುಜರಾತ್​ ಜೈಂಟ್ಸ್​​ಗೆ ಶ್ರೇಯಾಂಕ ಪಾಟೀಲ್​, ರಾಧಾ ಯಾದವ್ ಸರ್​​ಪ್ರೈಸ್​ ಶಾಕ್​ ನೀಡಿದ್ರು. ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧದ 4ನೇ ಮ್ಯಾಚ್​ನಲ್ಲಿ ಕ್ಯಾಪ್ಟನ್​ ಸ್ಮೃತಿ ಮಂದಾನ 94 ರನ್​ಗಳ ಬೊಂಬಾಟ್​ ಇನ್ನಿಂಗ್ಸ್​ ಕಟ್ಟಿದ್ರೆ, ಜಾರ್ಜಿಯಾ ವೋಲ್ ಹಾಫ್​​ ಸೆಂಚುರಿ ಸಿಡಿಸಿ​ ಸಖತ್​ ಸಾಥ್​ ಕೊಟ್ಟಿದ್ರು. ಲಾಸ್ಟ್​ ಮ್ಯಾಚ್​​ನಲ್ಲಿ ಗೌತಮಿ ನಾಯ್ಕ್​​​ ಕ್ರಿಕೆಟ್​​ ಲೋಕವೇ ಅಚ್ಚರಿಯಾಗುವಂತಾ ಆಟವಾಡಿದ್ರು. 

ಲಾರೆನ್​ ಬೆಲ್ - ಸಯಾಲಿ ಸತ್ಘರೆ.. ಬೆಂಕಿ - ಬಿರುಗಾಳಿ

ಈ ಸೀಸನ್​ನಲ್ಲಿ ಆರ್​​​ಸಿಬಿ ತಂಡದ ಬೌಲಿಂಗ್​ ಅಟ್ಯಾಕ್​ ನಿಜಕ್ಕೂ ಬೆಂಕಿ, ಬಿರುಗಾಳಿ. ಎಲ್ಲಿಸ್​ ಪೆರ್ರಿ ಅಲಭ್ಯತೆ, ಅರುಂಧತಿ ರೆಡ್ಡಿ ಇಂಜುರಿ ಯಾವುದೇ ಹಿನ್ನಡೆಯೇ ಆಗ್ತಿಲ್ಲ. ಕನ್ಸಿಸ್ಟೆಂಟ್​ ಆಗಿ ಪವರ್​ ಪ್ಲೇನಲ್ಲೇ ಎದುರಾಳಿಗೆ ಬೌಲರ್ಸ್​ ಪಂಚ್​​ ಕೊಡ್ತಿದ್ದಾರೆ. ಡಾಟ್​ ಬಾಲ್ ಕ್ವೀನ್​ ಲಾರೆನ್​ ಬೆಲ್ ಬೌಲಿಂಗ್​ನ ಬ್ಯಾಟರ್ಸ್​ಗೆ ರೀಡ್​ ಮಾಡೋಕೆ ಆಗ್ತಿಲ್ಲ. ಆಡಿದ 2 ಪಂದ್ಯಗಳಲ್ಲೇ 6 ವಿಕೆಟ್​ ಕಬಳಿಸಿರೋ ಸಯಾಲಿ ಸತ್ಘರೆ ಆರ್ಭಟಕ್ಕೆ ಎದುರಾಳಿಗಳು ಕಂಗಾಲ್ ಆಗಿದ್ದಾರೆ.  ಸಾಲಿಡ್​ ಪರ್ಫಾಮೆನ್ಸ್​ ನೀಡಿ ಅಜೇಯ ಓಟ ನಡೆಸ್ತಿರೋ ಆರ್​​ಸಿಬಿ ಇಂದೇ ಫೈನಲ್​ಗೆ ರಾಯಲ್​ ಎಂಟ್ರಿ ಕೊಡೋಕೆ ರೆಡಿಯಾಗಿದೆ. ಆರ್​​​ಸಿಬಿ ಗೆಲುವಿನ ಓಟಕ್ಕೆ ಡೆಲ್ಲಿ ಅಡ್ಡಗಾಲಾಗುತ್ತಾ.? ಕಾದು ನೋಡೋಣ.

ಇದನ್ನೂ ಓದಿ: ಜೆಡಿಎಸ್​​ ಬೆಳ್ಳಿ ಹಬ್ಬ! ಹಾಸನದಲ್ಲಿ ಇವತ್ತು ಬೃಹತ್​ ಸಮಾವೇಶ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

RCB smriti mandhana WPL 2026
Advertisment