/newsfirstlive-kannada/media/media_files/2026/01/24/jds-2026-01-24-10-02-48.jpg)
ಹಾಸನದಲ್ಲಿ ಇಂದು ಜೆಡಿಎಸ್​​ ಬೆಳ್ಳಿ ಹಬ್ಬದ ಪ್ರಯುಕ್ತ ಬೃಹತ್​ ಜನತಾ ಸಮಾವೇಶ ಕಾರ್ಯಕ್ರಮ ನಡೆಯಲಿದೆ. ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಹೆಚ್.ಡಿ ರೇವಣ್ಣರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಕಾಂಗ್ರೆಸ್​​ ವಿರುದ್ಧ ಅಬ್ಬರಿಸೋದಕ್ಕೆ ವೇದಿಕೆ ಸಜ್ಜಾಗಿದೆ.
ಹಾಸನದ ಬೂವನಹಳ್ಳಿಯಲ್ಲಿ ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಹೆಚ್.​ಡಿ ದೇವೇಗೌಡರು ಕೂಡ ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆಯಿದ್ದು, ಭದ್ರತೆ ದೃಷ್ಟಿಯಿಂದ ಹೆಚ್ಚಿನ ಪೊಲೀಸ್​ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ.
ಇದನ್ನೂ ಓದಿ: ಜನಾರ್ದನ ರೆಡ್ಡಿ ಅವರ ಮಾಡಲ್​ ಹೌಸ್​ಗೆ ಬೆಂಕಿ ಇಟ್ಟ ಕೇಸ್.. 8 ಮಂದಿ ವಶಕ್ಕೆ..!
ಕಾರ್ಯಕ್ರಮಕ್ಕೂ ಮೊದಲು ಮನೆ ದೇವರಾದ ದೇವೇಶ್ವರನಿಗೆ ದೇವೇಗೌಡರು ಪೂಜೆ ಸಲ್ಲಿಸಲಿದ್ದಾರೆ. 12 ಗಂಟೆ ವೇಳೆಗೆ ಹೆಚ್‌ಡಿಡಿ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಜೆಡಿಎಸ್​ನ ಎಲ್ಲಾ 19 ಶಾಸಕರು, ಸಂಸದರು, ಮಾಜಿ ಸಚಿವರು, ಮಾಜಿ ಶಾಸಕರುಗಳು, ನಾಯಕರು ಭಾಗಿಯಾಗಲಿದ್ದಾರೆ. ಹಾಸನ ನಗರದ ತುಂಬೆಲ್ಲಾ ಫ್ಲೇಸ್, ಬಾವುಟಗಳು ಮತ್ತು ಕಟೌಟ್​ಗಳು ರಾರಾಜಿಸುತ್ತಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us