ಜನಾರ್ದನ ರೆಡ್ಡಿ ಅವರ ಮಾಡಲ್​ ಹೌಸ್​ಗೆ ಬೆಂಕಿ ಇಟ್ಟ ಕೇಸ್.. 8 ಮಂದಿ ವಶಕ್ಕೆ..!

ಜನಾರ್ದನ ರೆಡ್ಡಿ- ರಾಮುಲುಗೆ ಸೇರಿದ ಮಾಡಲ್​ ಹೌಸ್​ಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. FSL ತಂಡ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮತ್ತಷ್ಟು ಸಾಕ್ಷಿಗಳನ್ನ ಕಲೆ ಹಾಕ್ತಿದ್ದಾರೆ.

author-image
Ganesh Kerekuli
Dr Suman Pannekar (1)
Advertisment

ಬಳ್ಳಾರಿ: ಜನಾರ್ದನ ರೆಡ್ಡಿ- ರಾಮುಲುಗೆ ಸೇರಿದ ಮಾಡಲ್​ ಹೌಸ್​ಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. FSL ತಂಡ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮತ್ತಷ್ಟು ಸಾಕ್ಷಿಗಳನ್ನ ಕಲೆ ಹಾಕ್ತಿದ್ದಾರೆ. ಮಾಡಲ್ ಹೌಸ್ ಮುಂದೆ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಇಂದು ಬೆಂಕಿ ಹಚ್ಚಿದ ಘಟನೆ ಬಗ್ಗೆ ಜನಾರ್ದನ ರೆಡ್ಡಿ ದೂರು ದಾಖಲಿಸುವ ಸಾಧ್ಯತೆಯಿದೆ.

ಮಾಡಲ್ ಹೌಸ್‌ಗೆ ಕಿಡಗೇಡಿಗಳು ಬೆಂಕಿ ಹಚ್ಚಿದ ಘಟನೆ ಸಂಬಂಧ ಬಳ್ಳಾರಿ ಗ್ರಾಮೀಣ ಠಾಣೆಗೆ ರುಕ್ಮಿಣಿ ಅವೆನ್ಯೂ ಲೇಔಟ್​ನ ಸೈಟ್ ಇಂಜಿನಿಯರ್ ರಿಜ್ವಾನ್​ ದೂರು ನೀಡಿದ್ದಾರೆ. ನಿನ್ನೆ ಸಂಜೆ 5:30ರ ಸುಮಾರಿಗೆ ಇಪ್ಪತ್ತಿರಿಂದ ಇಪ್ಪತೈದು ವಯಸ್ಸಿನ ಎಂಟರಿಂದ ಹತ್ತು ಜನ ಕಿಡಗೇಡಿಗಳು ಬಂದು ಬೆಂಕಿ ಹಚ್ಚಿದ್ದಾರೆ. ಜನಾರ್ದನ ರೆಡ್ಡಿ ಅವರ ಪತ್ನಿ ಶ್ರೀಮತಿ ಜಿ. ಲಕ್ಷ್ಮೀ ಅವರಿಗೆ ಸೇರಿದ್ದ ಮಾಡಲ್ ಹೌಸ್ ಇದಾಗಿದೆ.

ಇದನ್ನೂ ಓದಿ: Gold rate: ಏರಿಕೆ ಆಗುತ್ತಲೇ ಇದೆ ಬಂಗಾರ.. ಇವತ್ತಿನ ಬೆಲೆ ಎಷ್ಟು..?

Dr Suman Pannekar

ದುರುದ್ದೇಶದಿಂದಲೇ ಮಾಡಲ್ ಹೌಸ್‌ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ಅಂತ ರಿಜ್ವಾನ್​ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಘಟನೆಯಿಂದ ಅಂದಾಜು 1 ಕೋಟಿ 25 ಲಕ್ಷ ಮೊತ್ತದ ವಸ್ತುಗಳಿಗೆ ಹಾನಿ‌ಯಾಗಿದೆ. ಬ್ಯಾನರ್ ಗಲಾಟೆ ವೇಳೆ ಶಾಸಕ ಭರತ್ ರೆಡ್ಡಿ ಬಳ್ಳಾರಿಯನ್ನ ಭಷ್ಮ ಮಾಡುತ್ತೆವೆ ಅಂತಾ ಹೇಳಿಕೆ ಕೊಟ್ಟಿದ್ದರು, ಆ ಹಿನ್ನೆಲೆಯಲ್ಲೇ ಈ ಪ್ರಕರಣವನ್ನ ತನಿಖೆ ಮಾಡಿ ಅಂತ ರಿಜ್ವಾನ್ ಮನವಿ ಮಾಡಿದ್ದಾರೆ.

ಇದನ್ನೂ ಓದಿ:7 ವಿಕೆಟ್​​ಗಳ ಭರ್ಜರಿ ಗೆಲುವು.. ​ಕಿಶನ್​ ವಿಸ್ಫೋಟಕ ಬ್ಯಾಟಿಂಗ್..!

ballari reddy house

ಬೆಂಕಿ ಹಚ್ಚಿದ ವಿಚಾರಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಎಸ್​ಪಿ ಡಾ. ಸುಮನ್ ಫನ್ನೆಕರ್ ಪ್ರತಿಕ್ರಿಯಿಸಿದ್ದಾರೆ. ನಿನ್ನೆ ಬೆಂಕಿ ಹಚ್ಚಿದ್ದಾರೆ ಎಂದು ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಅಪರಿಮಿತ ವ್ಯಕ್ತಿಗಳು‌ ಬೆಂಕಿ ಹಾಕಿದ್ದಾರೆ ದೂರು ದಾಖಲಾಗಿದೆ. ಘಟನಾ ಸ್ಥಳಕ್ಕೆ FLS ತಂಡ ಪರಿಶೀಲನೆ‌ ಮಾಡುತ್ತಿದೆ. ಸದ್ಯ ಮಾಡಲ್ ಹೌಸ್​ನಲ್ಲಿ ಯಾರೂ ವಾಸವಿಲ್ಲ.. ಇದು ಜನಾರ್ದನ ರೆಡ್ಡಿ ಅವರಿಗೆ ಸಂಬಂಧಿಸಿದ ಮನೆಯಾಗಿದೆ. ಘಟನೆ ಸಂಬಂಧಿಸಿದಂತೆ 08 ಜನರನ್ನ ವಶಕ್ಕೆ ಪಡೆದಿದ್ದೇವೆ, ವಶಕ್ಕೆ ಪಡೆದ ವ್ಯಕ್ತಿಗಳ ಪೈಕಿ ಇಬ್ಬರು ಅಪ್ತರಿದ್ದಾರೆ ಅಂತ ಎಸ್​ಪಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕೇಂದ್ರ ಸರ್ಕಾರಿ ಕೆಲಸ ಹುಡುಕಾಟ ನಡೆಸ್ತಿರೋರಿಗೆ ಇಲ್ಲಿದೆ ಸುವರ್ಣ ಅವಕಾಶ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

model house Janardan Reddy Ballari news
Advertisment