ಕೇಂದ್ರ ಸರ್ಕಾರಿ ಕೆಲಸ ಹುಡುಕಾಟ ನಡೆಸ್ತಿರೋರಿಗೆ ಇಲ್ಲಿದೆ ಸುವರ್ಣ ಅವಕಾಶ..!

ರೈಲ್ವೆ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರೋರಿಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ. ರೈಲ್ವೆ ನೇಮಕಾತಿ ಮಂಡಳಿಯು ಗ್ರೂಪ್ ಡಿ ಹುದ್ದೆಗಳ ನೇಮಕಾತಿಗಾಗಿ ನೋಟಿಫಿಕೇಶನ್ ಆಗಿದೆ. ಒಟ್ಟು 22,000 ವೇಕೆನ್ಸಿಗಳನ್ನು ಪ್ರಕಟಿಸಲಾಗಿದ್ದು, ಕೇಂದ್ರ ಸರ್ಕಾರಿ ಕೆಲಸದ ಹುಡುಕಾಟದಲ್ಲಿರುವವರಿಗೆ ಇದೊಂದು ಸುವರ್ಣ ಅವಕಾಶ.

author-image
Ganesh Kerekuli
job vacancy
Advertisment

ರೈಲ್ವೆ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಒಂದು ಬಿಗ್ ಅಪ್‌ಡೇಟ್ ಸಿಕ್ಕಿದೆ. ರೈಲ್ವೆ ನೇಮಕಾತಿ ಮಂಡಳಿಯು ಗ್ರೂಪ್ ಡಿ ಹುದ್ದೆಗಳ ನೇಮಕಾತಿಗಾಗಿ ಅಫೀಶಿಯಲ್ ನೋಟಿಫಿಕೇಶನ್ ರಿಲೀಸ್ ಮಾಡಿದೆ. ಈ ಬಾರಿ ಒಟ್ಟು 22,000 ವೇಕೆನ್ಸಿಗಳನ್ನು ಪ್ರಕಟಿಸಲಾಗಿದ್ದು, ಕೇಂದ್ರ ಸರ್ಕಾರಿ ಕೆಲಸದ ಹುಡುಕಾಟದಲ್ಲಿರುವವರಿಗೆ ಇದೊಂದು ಸುವರ್ಣ ಅವಕಾಶವಾಗಿದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವವರು ಕನಿಷ್ಠ 10ನೇ ತರಗತಿ ಜೊತೆಗೆ ಐಟಿಐ ಡಿಪ್ಲೊಮಾ ಪೂರ್ಣಗೊಳಿಸಿರಬೇಕು. ವಯೋಮಿತಿಯ ಬಗ್ಗೆ ಹೇಳುವುದಾದರೆ, ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ 33 ವರ್ಷಗಳ ಒಳಗಿರಬೇಕು. ಜನವರಿ 1, 2026 ಕ್ಕೆ ಅನ್ವಯವಾಗುವಂತೆ ಏಜ್ ಲಿಮಿಟ್ ಅನ್ನು ಲೆಕ್ಕ ಹಾಕಲಾಗುತ್ತದೆ. ಇನ್ನು ಸರ್ಕಾರಿ ನಿಯಮಗಳ ಪ್ರಕಾರ ರಿಸರ್ವ್ಡ್ ಕೆಟಗರಿ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.

ಇದನ್ನೂ ಓದಿ: Gold rate: ಏರಿಕೆ ಆಗುತ್ತಲೇ ಇದೆ ಬಂಗಾರ.. ಇವತ್ತಿನ ಬೆಲೆ ಎಷ್ಟು..?

ಆಯ್ಕೆಯಾದ ಕ್ಯಾಂಡಿಡೇಟ್ಸ್‌ಗಳಿಗೆ ಮಾಸಿಕ 18,000 ರೂಪಾಯಿಗಳ ಬೇಸಿಕ್ ಸ್ಯಾಲರಿ ಸಿಗಲಿದೆ. ಇದರ ಜೊತೆಗೆ ರೈಲ್ವೆ ಇಲಾಖೆಯ ರೂಲ್ಸ್ ಪ್ರಕಾರ ಟಿಎ, ಡಿಎ ನಂತಹ ವಿವಿಧ ಅಲೋವೆನ್ಸ್ ಅಥವಾ ಭತ್ಯೆಗಳು ಕೂಡ ದೊರೆಯುತ್ತವೆ. ಸಂಬಳದ ಜೊತೆಗೆ ಇತರ ಬೆನಿಫಿಟ್‌ಗಳು ಆಕರ್ಷಕವಾಗಿ ಇರೋದರಿಂದಲೇ ಪ್ರತಿ ವರ್ಷ ಲಕ್ಷಾಂತರ ಯುವಕರು ಈ ಗ್ರೂಪ್ ಡಿ ಜಾಬ್‌ಗಳಿಗಾಗಿ ಕಾಯುತ್ತಿರುತ್ತಾರೆ.
ಅರ್ಜಿ ಸಲ್ಲಿಸುವ ಡೇಟ್‌ಗಳಲ್ಲಿ ಸಣ್ಣ ಬದಲಾವಣೆಯಾಗಿದೆ. ಮೊದಲು ಜನವರಿ 20 ರಿಂದ ಫೆಬ್ರವರಿ 20 ರವರೆಗೆ ಅಪ್ಲಿಕೇಶನ್ ಪ್ರಕ್ರಿಯೆ ನಡೆಯಬೇಕಿತ್ತು. ಆದರೆ ರೈಲ್ವೆ ಮಂಡಳಿಯು ಈಗ ರಿವೈಸ್ಡ್ ನೋಟಿಫಿಕೇಶನ್ ಬಿಡುಗಡೆ ಮಾಡಿದ್ದು, ಅದರಂತೆ ಜನವರಿ 31 ರಿಂದ ಆನ್‌ಲೈನ್ ಲಿಂಕ್ ಓಪನ್ ಆಗಲಿದೆ. ಅರ್ಜಿ ಸಲ್ಲಿಸಲು ಮಾರ್ಚ್ 2 ಕೊನೆಯ ದಿನಾಂಕವಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.

ಇಡೀ ಅಪ್ಲಿಕೇಶನ್ ಪ್ರೊಸೆಸ್ ಕಂಪ್ಲೀಟ್ ಆಗಿ ಆನ್‌ಲೈನ್‌ನಲ್ಲಿ ಇರಲಿದೆ. ಆಸಕ್ತರು ರೈಲ್ವೆಯ ಅಫೀಶಿಯಲ್ ವೆಬ್‌ಸೈಟ್ indianrailways.gov.in ಗೆ ವಿಸಿಟ್ ಮಾಡುವ ಮೂಲಕ ತಮ್ಮ ಫಾರ್ಮ್ ಸಬ್ಮಿಟ್ ಮಾಡಬಹುದು. ಈ ನೇಮಕಾತಿ ಪ್ರಕ್ರಿಯೆಯ ಮೂಲಕ ರೈಲ್ವೆಯ ವಿವಿಧ ಟೆಕ್ನಿಕಲ್ ಮತ್ತು ನಾನ್-ಟೆಕ್ನಿಕಲ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಇದನ್ನೂ ಓದಿ: IND vs NZ: ರಾಯ್​​ಪುರ್​ನಲ್ಲಿ ಕಿವೀಸ್ ಬ್ಯಾಟಿಂಗ್ ದರ್ಬಾರ್ ಹೇಗಿತ್ತು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Recruitment Job
Advertisment