IND vs NZ: ರಾಯ್​​ಪುರ್​ನಲ್ಲಿ ಕಿವೀಸ್ ಬ್ಯಾಟಿಂಗ್ ದರ್ಬಾರ್ ಹೇಗಿತ್ತು..?

ಎರಡನೇ ಟಿ-20 ಪಂದ್ಯದಲ್ಲಿ ನ್ಯೂಜಿಲೆಂಡ್ ಬ್ಯಾಟರ್ಸ್​ ರನ್​ ಮಳೆ ಸುರಿಸಿದ್ರು. ಟೀಮ್ ಇಂಡಿಯಾ ಬೌಲರ್​ಗಳ ಲೆಕ್ಕಾಚಾರ ಉಲ್ಟಾಮಾಡಿದ ಕಿವೀಸ್, ಭರ್ಜರಿ ಮೊತ್ತ ಕಲೆಹಾಕಿತು.

author-image
Ganesh Kerekuli
rachin ravindra
Advertisment
  • 27 ಎಸೆತಗಳಲ್ಲಿ ಅಜೇಯ 47 ರನ್ ಚಚ್ಚಿದ ಸ್ಯಾಂಟ್ನರ್
  • ಟೀಮ್ ಇಂಡಿಯಾ ಪರ ಕುಲ್ದೀಪ್ ಯಾದವ್​ಗೆ 2 ವಿಕೆಟ್
  • 20 ಓವರ್​ಗಳಲ್ಲಿ 208 ರನ್​​ ಕಲೆ ಹಾಕಿದ ನ್ಯೂಜಿಲೆಂಡ್

ಎರಡನೇ ಟಿ-20 ಪಂದ್ಯದಲ್ಲಿ ನ್ಯೂಜಿಲೆಂಡ್ ಬ್ಯಾಟರ್ಸ್​ ರನ್​ ಮಳೆ ಸುರಿಸಿದ್ರು. ಟೀಮ್ ಇಂಡಿಯಾ ಬೌಲರ್​ಗಳ ಲೆಕ್ಕಾಚಾರ ಉಲ್ಟಾಮಾಡಿದ ಕಿವೀಸ್, ಭರ್ಜರಿ ಮೊತ್ತ ಕಲೆಹಾಕಿತು.

ರಾಯ್​ಪುರ್​ನಲ್ಲಿ ಟಾಸ್ ಸೋತು ಬ್ಯಾಟಿಂಗ್​ಗಿಳಿದ ನ್ಯೂಜಿಲೆಂಡ್ ತಂಡಕ್ಕೆ, ಭರ್ಜರಿ ಆರಂಭ ಸಿಕ್ಕಿತು. ಡೆವೊನ್ ಕಾನ್ವೆ ಮತ್ತು ಟಿಮ್ ಸೈರ್ಫಟ್​​​​​​​, ಸಾಲಿಡ್ ಸ್ಟಾರ್ಟ್ ನೀಡಿದ್ರು. ಮೊದಲ 20 ಎಸೆತಗಳಲ್ಲಿ 43 ರನ್​ ಕಲೆಹಾಕಿದ ಈ ಜೋಡಿ, ಟೀಮ್ ಇಂಡಿಯಾ ಬೌಲರ್​ಗಳಿಗೆ ತಲೆನೋವಾಗಿ ಕಾಡಿದ್ರು.

19 ರನ್​ಗಳಿಸಿದ ಕಾನ್ವೆಗೆ ಹರ್ಷಿತ್ ರಾಣಾ ಪೆವಿಲಿಯನ್ ದಾರಿ ತೋರಿಸಿದ್ರು. 24 ರನ್​​​ ದಾಖಲಿಸಿದ ಸೈರ್ಫಟ್​​​, ಕಾನ್ವೆಯನ್ನ ಫಾಲೋ ಮಾಡಿದ್ರು. ಗ್ಲೇನ್ ಫಿಲಿಪ್ಸ್​ ಮತ್ತು ಡ್ಯಾರೆಲ್ ಮಿಚ್ಚೆಲ್, ಆರಂಭದಲ್ಲಿ ವೇಗವಾಗಿ ರನ್​ ಸಿಡಿಸಿದ್ರು.  ಈ ನಡುವೆ ಫಿಲಿಪ್ಸ್ 19 ರನ್​ಗಳಿಸಿ ಕುಲ್ದೀಪ್ ಯಾದವ್​ಗೆ ಬಲಿಯಾದ್ರು.  ಮತ್ತೊಂದೆಡೆ 18 ರನ್​ಗಳಿಸಿದ್ದ ಮಿಚ್ಚೆಲ್​ ಆಟಕ್ಕೆ, ಶಿವಂ ದುಬೆ ಬ್ರೇಕ್ ಹಾಕಿದ್ರು.

ಇದನ್ನೂ ಓದಿ:7 ವಿಕೆಟ್​​ಗಳ ಭರ್ಜರಿ ಗೆಲುವು.. ​ಕಿಶನ್​ ವಿಸ್ಫೋಟಕ ಬ್ಯಾಟಿಂಗ್..!

ಸಿಡಿಲಬ್ಬರದ ಬ್ಯಾಟಿಂಗ್ ನಡೆಸ್ತಿದ್ದ ಎಡಗೈ ಬ್ಯಾಟರ್ ರಚ್ಚಿನ್ ರವೀಂದ್ರ, ಅರ್ಧಶತಕದ ಸಮೀಪ ಎಡವಿದ್ರು. 24 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್ ಸಿಡಿಸಿದ ರಚ್ಚಿನ್, 44 ರನ್​ಗಳಿಸಿ ಹೋರಾಟ ಮುಗಿಸಿದ್ರು. ಮಾರ್ಕ್ ಚಾಪ್​ಮೆನ್ ಕೂಡ ಹೆಚ್ಚು ಹೊತ್ತು ಕ್ರಿಸ್​ನಲ್ಲಿ ನಿಲ್ಲಲಿಲ್ಲ. ಹಾರ್ದಿಕ್ ಪಾಂಡ್ಯರ ಸ್ಲೋ ಕಟರ್​ಗೆ ಚಾಪ್​ಮೆನ್ ಲಾಂಗ್ ಆನ್​ನಲ್ಲಿ ಕ್ಯಾಚ್​ ನೀಡಿದ್ರು.

ಕೊನೆಗೆ ನ್ಯೂಜಿಲೆಂಡ್ ನಾಯಕ ಮಿಚ್ಚೆಲ್ ಸ್ಯಾಂಟ್ನರ್, ಡೆತ್ ಓವರ್​ಗಳಲ್ಲಿ ಡೆಡ್ಲಿ ಬ್ಯಾಟಿಂಗ್ ನಡೆಸಿದ್ರು.  27 ಎಸೆತಗಳಲ್ಲಿ 6 ಫೋರ್ಸ್​ ಮತ್ತು 1 ಸಿಕ್ಸರ್ ಸಿಡಿಸಿದ ಸ್ಯಾಂಟ್ನರ್, ಅಜೇಯ 47 ರನ್​​​ ಬಾರಿಸಿದ್ರು. ಅಂತಿಮವಾಗಿ ನ್ಯೂಜಿಲೆಂಡ್ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 208 ರನ್​ಗಳ ಬೃಹತ್ ಮೊತ್ತ ಕಲೆಹಾಕಿತು. ಟೀಮ್ ಇಂಡಿಯಾ ಪರ ಕುಲ್ದೀಪ್ ಯಾದವ್, 2 ವಿಕೆಟ್ ಪಡೆದ್ರು. 209 ರನ್​ಗಳ ಗುರಿ ಬೆನ್ನು ಹತ್ತಿದ ಟೀಂ ಇಂಡಿಯಾ ಕೇವಲ ಮೂರು ವಿಕೆಟ್ ಕಳೆದುಕೊಂಡು ನಿಗಧಿತ ಗುರಿ ಮುಟ್ಟಿತು. 

ಇದನ್ನೂ ಓದಿ:Gold rate: ಏರಿಕೆ ಆಗುತ್ತಲೇ ಇದೆ ಬಂಗಾರ.. ಇವತ್ತಿನ ಬೆಲೆ ಎಷ್ಟು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Kannada News Cricket news in Kannada India vs NewZealand IND vs NZ
Advertisment