/newsfirstlive-kannada/media/media_files/2026/01/24/ishan-kishan-3-2026-01-24-08-16-40.jpg)
209 ರನ್​ಗಳ ಬಿಗ್​ ಟಾರ್ಗೆಟ್​ ಚೇಸಿಂಗ್​ಗಿಳಿದ ಟೀಮ್​ ಇಂಡಿಯಾಗೆ ಗುಡ್​ ಸ್ಟಾರ್ಟ್​ ಸಿಗಲಿಲ್ಲ. ಜಸ್ಟ್​ 6 ರನ್​ಗಳಿಸುಷ್ಟರಲ್ಲಿ ಓಪನರ್ಸ್​ ಇಬ್ಬರೂ ಪೆವಿಲಿಯನ್ ಸೇರಿದ್ರು. ಸಂಜು ಸ್ಯಾಮ್ಸನ್​, ಅಭಿಷೇಕ್​ ಶರ್ಮಾ ವಿಕೆಟ್​ ಕಳೆದುಕೊಂಡ ಸಂಕಷ್ಟಕ್ಕೆ ಸಿಲುಕಿದ್ದ ಟೀಮ್​ ಇಂಡಿಯಾಗೆ ಇಶಾನ್​ ಕಿಶನ್​, ನಾಯಕ ಸೂರ್ಯಕುಮಾರ್​​ ಯಾದವ್​ ಸಾಲಿಡ್​ ಚೇತರಿಕೆ ನೀಡಿದ್ರು. ಸೂರ್ಯಕುಮಾರ್​ ಕೂಲ್ ಅಂಡ್ ಕಾಮ್​ ಆಟವಾಡಿದ್ರೆ, ಇಶಾನ್​ ಕಿಶನ್​ ವಿಸ್ಪೋಟಕ ಇನ್ನಿಂಗ್ಸ್​ ಕಟ್ಟಿದ್ರು.
ಇದನ್ನೂ ಓದಿ: ಅಭಿಷೇಕ್ ಮುಂದೆ ದಾಖಲೆಗಳು ಶೇಕ್.. ಗುರುವನ್ನೇ ಮೀರಿಸಿದ ಶಿಷ್ಯ..!
/filters:format(webp)/newsfirstlive-kannada/media/media_files/2026/01/21/ind-vs-nz-2026-01-21-14-24-54.jpg)
ಆರಂಭಿಕ 2 ವಿಕೆಟ್​ ಉರುಳಿದ್ದನ್ನೂ ಲೆಕ್ಕಿಸಿದೇ ಇಶಾನ್​ ಕಿಶನ್​ ಅಟ್ಯಾಕಿಂಗ್​ ಆಟವಾಡಿದ್ರು. 3ನೇ ಓವರ್​ವೊಂದರಲ್ಲೇ 24 ರನ್​ ಚಚ್ಚಿದ್ರು. ಕಿಶನ್​ ಅಬ್ಬರದ ಆಟಕ್ಕೆ ಕಿವೀಸ್​ ಪಡೆ ಕಂಗಾಲಾಗಿ ಹೋಯ್ತು.
ರಾಯ್​​ಪುರದಲ್ಲಿ ಸಿಡಿದೆದ್ದ ಇಶಾನ್ ಕಿಶನ್​ ಕಿವೀಸ್​ ಬೌಲರ್​​ಗಳ ಬೆವರಿಳಿಸಿದ್ರು. ಮೈದಾನದ ಅಷ್ಟದಿಕ್ಕಿಗೂ ಚೆಂಡಿನ ದರ್ಶನ ಮಾಡಿಸಿದ್ರು. ಜಸ್ಟ್​ 21 ಎಸೆತಗಳಲ್ಲೇ ಅರ್ಧಶತಕ ಸಿಡಿಸಿ ಸಂಭ್ರಮಿಸಿದ್ರು. ಆರಂಭದಲ್ಲಿ ನಿಧಾನಗತಿಯ ಆಟವಾಡಿದ ಸೂರ್ಯಕುಮಾರ್​, ಸೆಟಲ್​ ಆದ ಬಳಿಕ ಅಬ್ಬರಿಸಿದ್ರು. ಹಳೆ ಖದರ್​ನಲ್ಲಿ ಬ್ಯಾಟ್​ ಬೀಸಿದ ಸೂರ್ಯಕುಮಾರ್​ ಬಿಗ್​ ಶಾಟ್​​ಗಳನ್ನ ಬಾರಿಸಿ ಗಮನ ಸೆಳೆದ್ರು. 9ನೇ ಓವರ್​​ನಲ್ಲಿ 25 ರನ್​ ಸಿಡಿಸಿದ್ರು.
4ನೇ ವಿಕೆಟ್​ಗೆ ಅಬ್ಬರದ ಆಟದಿಂದಲೇ ಇಶಾನ್​ ಕಿಶನ್​ - ಸೂರ್ಯಕುಮಾರ್​​ ಸೆಂಚುರಿ ಜೊತೆಯಾಟವಾಡಿದ್ರು. ಅಂತಿಮವಾಗಿ ಇಶ್​ ಸೋಧಿ ಪಾರ್ಟನರ್​ಶಿಪ್​ ಬ್ರೇಕ್​ ಮಾಡಿದ್ರು. 76 ರನ್​ಗಳಿಸಿದ್ದ ಕಿಶನ್​ ವಿಕೆಟ್​ ಪತನದೊಂದಿಗೆ 122 ರನ್​ಗಳ ಜೊತೆಯಾಟ ಅಂತ್ಯವಾಯ್ತು.
ಕಳೆದೊಂದು ವರ್ಷದಿಂದ ಫಾರ್ಮ್​ ಕಳೆದುಕೊಂಡಿದ್ದ ಸೂರ್ಯಕುಮಾರ್​ ಯಾದವ್​ ಕೊನೆಗೂ ಹಳೆಯ ಖದರ್​​ನಲ್ಲಿ ಬ್ಯಾಟ್​ ಬೀಸಿದ್ರು. ಕೇವಲ 23 ಎಸೆತಗಳಲ್ಲಿ ಹಾಫ್​​ ಸೆಂಚುರಿ ಸಿಡಿಸಿದ್ರು. ಬರೋಬ್ಬರಿ 468 ದಿನಗಳ ಬಳಿಕ ಟಿ20 ಕ್ರಿಕೆಟ್​ನಲ್ಲಿ ಅರ್ಧಶತಕ ಗಡಿ ದಾಟಿ ನಿಟ್ಟುಸಿರುಬಿಟ್ರು.
ಸೂರ್ಯಕುಮಾರ್​ಗೆ ಶಿವಂ ದುಬೆ ಸಾಥ್​ ನೀಡಿದ್ರು. 18 ಎಸೆತಗಳಲ್ಲಿ 1 ಬೌಂಡರಿ, 3 ಸಿಕ್ಸರ್​ ಸಿಡಿಸಿದ ಶಿವಂ ದುಬೆ ಅಜೇಯ 36 ರನ್​ಗಳಿಸಿದ್ರು. 4ನೆ ವಿಕೆಟ್​ಗೆ ಅಜೇಯ 81 ರನ್​ಗಳ ಜೊತೆಯಾಟವಾಡಿದ ದುಬೆ-ಸೂರ್ಯ ತಂಡವನ್ನ ಗೆಲುವಿನ ದಡ ಸೇರಿಸಿದ್ರು.
28 ಎಸೆತಗಳು ಬಾಕಿ ಇರುವಂತೆ ಕೇವಲ 3 ವಿಕೆಟ್​ ಕಳೆದುಕೊಂಡು ಟೀಮ್​ ಇಂಡಿಯಾ ಜಯಭೇರಿ ಬಾರಿಸಿತು. 7 ವಿಕೆಟ್​ಗಳ ಭರ್ಜರಿ ಗೆಲುವಿನೊಂದಿಗೆ 2-0 ಅಂತರದಲ್ಲಿ ಸರಣಿಯಲ್ಲಿ ಟೀಮ್​ ಇಂಡಿಯಾ ಮುನ್ನಡೆ ಸಾಧಿಸಿತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us